More

    ಕಾಡು ಹಂದಿಗಳ ಪಾಲಾದ ಕಲ್ಲಂಗಡಿ

    ಹುಲಸೂರು: ಲಾಕ್​ಡೌನ್​ನಿಂದ ರೈತರು ಬೆಳೆದ ಉತ್ಪನ್ನಗಳಿಗೆ ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಇಲ್ಲದ್ದರ ಮಧ್ಯೆ ಗೌರ ಗ್ರಾಮದಲ್ಲಿ ಕಲ್ಲಂಗಡಿ ಹಣ್ಣು ಕಾಡು ಹಂದಿಗಳ ಪಾಲಾಗುತ್ತಿದೆ. ಅಂಗವಿಕಲ ರೈತ ತಾಹೇರಲಿ ಮುಲ್ಲಾವಾಲೆ 1.20 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರೂ ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದಾನೆ. ಇನ್ನು ಕರೊನಾ ವೈರಸ್ ಹರಡುವಿಕೆ ತಡೆಗೆ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ವಾಹನ ಸೌಕರ್ಯ ಇಲ್ಲದೆ ಕಲ್ಲಂಗಡಿ ಮಾರ್ಕೆಟ್ ಸ್ಥಗಿತವಾಗಿದೆ. ಇದರಿಂದ ರೈತ ಬೆಳೆದ ಬೆಳೆ ಕೊಳ್ಳಲು ಯಾರೂ ಮುಂದೆ ಬರದೆ ಸಂಕಟ ಎದುರಿಸುವಂತಾಗಿದೆ.
    ರೈತ ತಾಹೇರಲಿ ಮುಲ್ಲಾವಾಲೆ ಅವರಿಗೆ ಎಂಟು ಪುತ್ರಿಯರಿದ್ದು, ಹೇಗೋ ಮಾಡಿ ನಾಲ್ವರ ಮದುವೆ ಮಾಡಿಕೊಟ್ಟಿದ್ದಾನೆ. ಈಗ ಮಹಾರಾಷ್ಟ್ರ ಲಾತೂರದ ಯುವಕನ ಜತೆ ಇನ್ನೊಬ್ಬಳ ವಿವಾಹ ನಿಶ್ಚಿತಾರ್ಥವಾಗಿತ್ತು. ಕಲ್ಲಂಗಡಿ ಮಾರಾಟ ಮಾಡಿ ಬಂದ ಹಣದಲ್ಲಿ ಮದುವೆ ಮಾಡಬೇಕು ಎನ್ನುವಷ್ಟರಲ್ಲಿ ಲಾಕ್ಡಾನ್ ಮತ್ತು ಕಾಡು ಹಂದಿಗಳ ಕಾಟದಿಂದಾಗಿ ಬೆಳೆ ಹಾನಿಯಾಗಿದ್ದು, ಮುಂದೇನು ಎಂಬ ಚಿಂತೆ ಕಾಡುತ್ತಿದೆ. ಸುಮಾರು 2 ಲಕ್ಷ ರೂ. ಖರ್ಚು ಮಾಡಿ ಬೆಳೆದಿದ್ದ ಕಲ್ಲಂಗಡಿ ಲಾಕ್ಡೌನ್ ಮತ್ತು ಕಾಡು ಹಂದಿಗಳ ಕಾಟದಿಂದ ಹಾನಿಗೀಡಾಗಿದ್ದು, ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts