More

    ಕಾಡುಕೋಣಗಳ ದಾಳಿಯಿಂದ ಭತ್ತ, ಶುಂಠಿ ಬೆಳೆ ಹಾನಿ

    ಶಿರಸಿ: ತಾಲೂಕಿನ ಬನವಾಸಿ ಮತ್ತು ಸುತ್ತ್ತನ ಗ್ರಾಮಗಳ ರೈತರ ಭತ್ತ, ಅನಾನಸ್, ಶುಂಠಿ ಗದ್ದೆಗಳಿಗೆ ಕಾಡುಕೋಣಗಳು ನುಗ್ಗಿ ಬೆಳೆಯನ್ನು ಹಾನಿ ಮಾಡುತ್ತಿದ್ದು, ಇವುಗಳ ನಿಯಂತ್ರಣೋಪಾಯ ಕಾಣದ ರೈತರು ಕಂಗಾಲಾಗಿದ್ದಾರೆ.

    ಕಳೆದ ಕೆಲವು ದಿನಗಳಿಂದ ಕಾಡುಕೋಣಗಳು ಈ ಪ್ರದೇಶಕ್ಕೆ ಲಗ್ಗೆಯಿಟ್ಟಿದ್ದು, ಭಾಶಿ, ಕಡಗೋಡ, ಗುಡ್ನಾಪುರ ಭಾಗದಲ್ಲಿ ಬೆಳೆಗಳನ್ನು ನಾಶ ಮಾಡಿವೆ.

    ರೈತರು ಮುಳ್ಳು ಗಿಡಗಳ ಬೇಲಿ, ತಂತಿ ಬೇಲಿಗಳನ್ನು ನಿರ್ವಿುಸಿದ್ದರೂ ಬೃಹತ್ ಗಾತ್ರದ ಕಾಡುಕೋಣಗಳಿಗೆ ಅವು ಲೆಕ್ಕಕ್ಕಿಲ್ಲದಂತಾಗಿದೆ. ಮಂಗ, ಹಂದಿ ಇತರ ಕಾಡುಪ್ರಾಣಿಗಳು ಜಮೀನುಗಳಿಗೆ ಬಂದು ಬೆಳೆಗಳನ್ನು ಹಾಳು ಮಾಡುವುದು ಸಾಮಾನ್ಯವಾಗಿದೆ. ಬೆಳೆಗಳನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಬನವಾಸಿಯ ರೈತ ನಾಗಪ್ಪ ನಾಯ್ಕ ಇತರರು ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಬನವಾಸಿ ಆರ್​ಎಫ್​ಒ ಉಷಾ ಕಬ್ಬೇರ, ಕಾಡುಕೋಣಗಳಿಂದ ಬೆಳೆ ಹಾನಿಯಾದ ಬಗ್ಗೆ ಈವರೆಗೆ ಮಾಹಿತಿ ಬಂದಿಲ್ಲ. ಆದರೆ, ಬನವಾಸಿ ಭಾಗದಲ್ಲಿ ಕಾಡುಕೋಣಗಳ ಸಂಚಾರದ ಬಗ್ಗೆ ತಿಳಿದು ಬಂದಿದೆ. ಬೆಳೆ ಹಾಳಾದರೆ ಪರಿಹಾರಕ್ಕಾಗಿ ಅರ್ಜಿ ಕೊಡುವಂತೆ ರೈತರಿಗೆ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts