More

    ಕಾಡಾನೆಗಳ ಹಾವಳಿ ತಪ್ಪಿಸಿ

    ಚಿಕ್ಕಮಗಳೂರು: ಕಾಡಾನೆಗಳ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರರ ಹಿತರಕ್ಷಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.

    ಮಲ್ಲಂದೂರು ಸಮೀಪದ ಮಡಿಕೆಕಾನು, ಮೇಲು ಹೊಲದಗದ್ದೆ, ನಿಡಗೋಡು ಭಾಗಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಈ ಗ್ರಾಮಗಳ ಅಂಚಿನಲ್ಲೇ ಮುತ್ತೋಡಿ ಅರಣ್ಯ ಪ್ರದೇಶವಿದೆ. ಇತ್ತಿಚೇಗೆ ಆನೆಗಳು ಹಿಂಡು ಹಿಂಡಾಗಿ ಸುತ್ತಲಿನ ತೋಟ, ಹೊಲ, ಗದ್ದೆ ಜಮೀನುಗಳಿಗೆ ನುಗ್ಗಿ ಕಾಫಿ, ಅಡಕೆ, ಕಾಳುಮೆಣಸು, ಬಾಳೆ ಇನ್ನಿತರೆ ಬೆಳೆಗಳನ್ನು ಹಾನಿ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
    ಆನೆಗಳು ದಾಳಿ ನಡೆಸಿರುವ ಬಗ್ಗೆ ಅರಣ್ಯಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕಲ್ಪಿಸಬೇಕು. ಅರಣ್ಯದಲ್ಲಿ ಆನೆಗಳಿಗೆ ಆಹಾರ ವ್ಯವಸ್ಥೆ ಮಾಡಿದರೆ ರೈತರಿಗಾಗುವ ತೊಂದರೆಗಳನ್ನು ನಿಯಂತ್ರಿಸಬಹುದು. ಇಲಾಖೆ ಅಧಿಕಾರಿಗಳಿಗೆ ಇದರ ಮಾಹಿತಿಯಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    ಸಾಮಾಜಿಕ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ಖಾಲಿ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡರೂ ಆನೆಗಳು ಇನ್ನಿತರೆ ಪ್ರಾಣಿ, ಪಕ್ಷಿಗಳ ಆಹಾರಕ್ಕೆ ಪೂರಕ ಗಿಡಗಳನ್ನು ಬೆಳೆಸುತ್ತಿಲ್ಲ. ವಿವಿಧ ಜಾತಿ ಹಣ್ಣು, ಇನ್ನಿತರ ಉಪಯುಕ್ತ ಗಿಡಗಳನ್ನು ಬೆಳೆಯಲು ಕ್ರಮ ಕೈಗೊಳ್ಳಬೇಕು. ಅರಣ್ಯದಂಚಿನಲ್ಲಿ ವೈಜ್ಞಾನಿಕವಾಗಿ ಕಂದಕಗಳನ್ನು ಹೊಡೆಯಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts