More

    ಕಾಂಟೇನ್ಮೆಂಟ್ ದಲ್ಲಿ ಏರಿಯಾದಲ್ಲಿ ಟೆಸ್ಟ್

    ಕಲಬುರಗಿ: ಕರೊನಾ ಸೋಂಕಿತರು ಹೆಚ್ಚಿರುವ ಕಂಟೇನ್ಮೆಂಟ್ ಜೋನ್ಗಳಲ್ಲಿ ಕೋವಿಡ್-19 ರ್ಯಾಂಡಮ್ ಪರೀಕ್ಷೆ ಮಾಡುವ ಮೂಲಕ ಹತೋಟಿಗೆ ತರಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.
    ಸೋಂಕಿತರು ಹೆಚ್ಚಾಗಿರುವ ಮೋಮಿನಪುರ ಸೇರಿ ವಾರ್ಡ 23, 24 ಮತ್ತು 25ರ ಕಂಟೇನ್ಮೆಂಟ್ ಜೋನ್ಗಳಲ್ಲಿ ಕೋವಿಡ್-19 ರ್ಯಾಂಡಮ್ ಪರೀಕ್ಷೆ ಮಾಡಲಾಗುವುದು. ಜಿಲ್ಲಾದ್ಯಂತ ವಿಶೇಷ ಅರೋಗ್ಯ ಸಮೀಕ್ಷೆ ಮೂಲಕ ಸಾಮೂಹಿಕವಾಗಿ ಕಫ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ರ್ಯಾಂಡಮ್ ಪರೀಕ್ಷೆ ಮಾಡಲು ವೈದ್ಯರು, ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿ ಐವರ ತಂಡ ಮತ್ತು ಆಯಾ ಬಡಾವಣೆ ಮುಖ್ಯಸ್ಥರು ಹಾಗೂ ಹಿರಿಯರನ್ನು ಒಳಗೊಂಡಿರುವ 50 ತಂಡಗಳು ಈ ವಿಶೇಷ ಸಮೀಕ್ಷೆ ಮತ್ತು ಆರೋಗ್ಯ ತಪಾಸಣೆ ಮಾಡಲಿವೆ ಎಂದರು.
    ಹಿರಿಯ ನಾಗರಿಕರು ಮತ್ತು ಗರ್ಭಿಣಿಯರು ಹಾಗೂ ಹೈರಿಸ್ಕ್ ಇದ್ದವರಿಗೆ ಈ ತಪಾಸಣೆ ಕಡ್ಡಾಯ. ಅಲ್ಲದೆ ಈ ಪ್ರದೇಶದಲ್ಲಿ ಇರುವ ಎಲ್ಲರ ಕಫ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು. ಜಿಮ್ಸ್ ಆಸ್ಪತ್ರೆ ಕರೊನಾ ಟೆಸ್ಟಿಂಗ್ ಲ್ಯಾಬ್ನಲ್ಲಿ ಪ್ರತಿದಿನ 895 ಮಾದರಿ ಪರೀಕ್ಷೆ ಮಾಡುವಷ್ಟು ಸಾಮಥ್ರ್ಯ ವೃದ್ಧಿಸಲಾಗಿದೆ. 50 ತಂಡದವರು ಪ್ರತಿದಿನ 25 ಮನೆಗಳಿಂದ ಮಾದರಿ ಸಂಗ್ರಹಿಸಲಿದ್ದು, ಅವೆಲ್ಲದರ ತಪಾಸಣೆ ನಡೆಸಲಾಗುವುದು. ಪ್ರತಿದಿನ ಮೂರು ಶಿಫ್ಟ್ಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಅದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ವಿವರಿಸಿದರು.
    ಜಿಪಂ ಸಿಇಒ ಡಾ.ರಾಜಾ ಪಿ., ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ್, ಎಸ್ಪಿ ಯಡಾ ಮಾಟರ್ಿನ್ ಮಾರ್ಬನ್ಯಾಂಗ್,ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಡಿಸಿಪಿ ಕಿಶೋರಬಾಬು ಡಿ., ಐಎಎಸ್ ಅಧಿಕಾರಿ ಡಾ.ಗೋಪಾಲಕೃಷ್ಣ ಇತರರಿದ್ದರು.

    ಹೊರಗಿನಿಂದ ಬರುವವರ ನಿಗಾಕ್ಕೆ ಗಡಿಯಲ್ಲಿ 6 ಚೆಕ್ಪೋಸ್ಟ್: ಮಹಾರಾಷ್ಟ್ರ, ತೆಲಂಗಾಣ ಇತರ ರಾಜ್ಯಗಳಿಂದ ಜಿಲ್ಲೆಗೆ ಬರುವ ಪ್ರತಿಯೊಬ್ಬರ ಮೇಲೆ ನಿಗಾ ಇರಿಸಿ ಸಮಗ್ರ ಮಾಹಿತಿ ಸಂಗ್ರಹಿಸಲು ಗಡಿ ಭಾಗದ ಖಜೂರಿ, ಹಿರೊಳ್ಳಿ, ಕಿಣ್ಣಿ ಸಡಕ್, ಬಳೂರಗಿ, ರಿಬ್ಬನಪಲ್ಲಿ, ಮಿರಿಯಾಣಗಳಲ್ಲಿ ಚೆಕ್ಪೋಸ್ಟ್ ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶರತ್ ತಿಳಿಸಿದರು.
    ಒಟ್ಟಾರೆ ನಗರ ಮತ್ತು ಜಿಲ್ಲೆ ಸೇರಿ 40 ಚೆಕ್ಪೋಸ್ಟ್ಗಳಿವೆ. ಅವುಗಳಲ್ಲಿ 2 ಚೆಕ್ಪೋಸ್ಟ್ ಮೂಲಕ ಯಾರನ್ನೂ ಒಳಬಿಡದೆ ಬಂದ್ ಮಾಡಲಾಗಿದೆ. ಅಂತಾರಾಜ್ಯಗಳಿಂದ ಬರುವವರ ಮಾಹಿತಿ ಸಂಗ್ರಹಿಸಿ ಕ್ವಾರಂಟೈನ್ಗೆ ಕಳುಹಿಸಲಾಗುತ್ತಿದೆ. ಬೇರೆ ಜಿಲ್ಲೆಗೆ ಹೋಗುವವರು ಇದ್ದಲ್ಲಿ ಅವರ ಮಾಹಿತಿ ಆ ಜಿಲ್ಲೆಯವರಿಗೆ ನೀಡಲಾಗುತ್ತಿದೆ. ಜಿಲ್ಲೆಗೆ ಇದುವರೆಗೆ ಗಡಿ ಚೆಕ್ಪೋಸ್ಟ್ಗಳ ಮೂಲಕ 12,024 ಜನರು ಬಂದಿದ್ದು, ಕ್ವಾರಂಟೈನ್ನಲ್ಲಿ ಇಡಲು 294 ಕ್ವಾರಂಟೈನ್ ಸೆಂಟರ್ ಆರಂಭಿಸಲಾಗಿದೆ. ಹೊರ ರಾಜ್ಯದಿಂದ ಬಂದವರಿಗೆ ಸಾಂಸ್ಥಿಕ ಪ್ರತ್ಯೇಕ ವಸತಿ ವ್ಯವಸ್ಥೆ (ಇನ್ಸ್ಟಿಟ್ಯೂಟ್ ಕ್ವಾರಂಟೈನ್) ಕಡ್ಡಾಯಗೊಳಿಸಲಾಗಿದೆ ಎಂದರು.
    ಶ್ರಮಿಕ್ ರೈಲಿನ ಮೂಲಕ 11ರಂದು ಕಲಬುರಗಿಗೆ 1181 ವಲಸಿಗರು ಬಂದಿದ್ದು, ಇವರಲ್ಲಿ ಯಾದಗಿರಿ ಜಿಲ್ಲೆ 252, ವಿಜಯಪುರ ಜಿಲ್ಲೆ 22 ಜನರು ಇದ್ದಾರೆ. ಕಲಬುರಗಿಯಲ್ಲಿ 290 ಜನ ಸೇರಿ ಉಳಿದವರಿಗೆ ತಾಲೂಕುಗಳಲ್ಲಿರುವ ಕ್ವಾರಂಟೈನ್ ಸೆಂಟರ್ಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಅಲ್ಲಿ ಅವರಿಗೆ ಊಟದ ಹೊಣೆ ತಾಪಂಗೆ ವಹಿಸಲಾಗಿದೆ. ಕಂದಾಯ ಆಧಿಕಾರಿಗಳು ಮತ್ತು ಪಿಡಿಒ ಕೇಂದ್ರಗಳ ಉಸ್ತುವಾರಿ ನೋಡಿಕೊಳ್ಳುವರು ಎಂದು ಡಿಸಿ ವಿವರಿಸಿದರು.

    12025 ವಲಸಿಗರು ವಾಪಸ್
    ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಇದುವರೆಗೆ ಅನ್ಯ ರಾಜ್ಯಗಳಿಂದ 12025 ವಲಸಿಗ ಕಾಮರ್ಿಕರು ಜಿಲ್ಲೆಗೆ ಆಗಮಿಸಿದ್ದು, ಗುರುವಾರ ರಾತ್ರಿ ಇಲ್ಲವೇ ಶುಕ್ರವಾರ ನಸುಕಿನ ಜಾವ ಇನ್ನೂ 1200 ವಲಸಿಗರನ್ನು ಹೊತ್ತ ಮತ್ತೊಂದು ಶ್ರಮಿಕ್ ರೈಲು ಮುಂಬೈನಿಂದ ನಗರಕ್ಕೆ ಬರಲಿದೆ.

    9 ಕ್ವಾರಂಟೈನ್ಗಳಲ್ಲಿ 296 ಜನ
    ಕಲಬುರಗಿಯಲ್ಲಿ ಸೋಂಕಿತರ ಪ್ರಾಥಮಿಕ ಮತ್ತು ಎರಡನೇ ಸಂಪರ್ಕದಲ್ಲಿ ಬಂದವರಿಗಾಗಿ ತೆರೆದಿರುವ 9 ಕ್ವಾರಂಟೈನ್ ಸೆಂಟರ್ಗಳಲ್ಲಿ 296 ಜನರನ್ನು ಇರಿಸಿ ಊಟ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗಿಎ. ಶೀಘ್ರವೇ ಈ ಸೆಂಟರ್ಗಳಲ್ಲಿ ಮನರಂಜನೆಗಾಗಿ ಟಿವಿ ಅಳವಡಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts