More

    ಕಾಂಗ್ರೆಸ್ ಪಾಳಯದಲ್ಲಿ ನವೋಲ್ಲಾಸ

    ಬೀದರ್: ಬೆಂಗಳೂರಿನಲ್ಲಿ ಗುರುವಾರ ಆಯೋಜಿಸಿದ್ದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಹಾಗೂ ಸಲೀಂ ಅಹ್ಮದ್ ಅವರ ಪದಗ್ರಹಣ ಸಮಾರಂಭದ ನೇರ ಪ್ರಸಾರ ಜಿಲ್ಲಾದ್ಯಂತ ನಡೆಯಿತು. 150ಕ್ಕೂ ಹೆಚ್ಚು ಕಡೆ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಮುಖಂಡರು ಸೇರಿ ಸಹಸ್ರಾರು ಕಾರ್ಯಕರ್ತರಿಗೆ ಕಾರ್ಯಕ್ರಮ ನವೋಲ್ಲಾಸ ನೀಡಿತು.
    ನಗರ ಸೇರಿ ಜಿಲ್ಲೆಯ ಎಲ್ಲ ತಾಲೂಕು, ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಎಲ್ಇಡಿ ಪರದೆ, ಟಿವಿ ಹಾಗೂ ಝೂಮ್ ಆ್ಯಪ್ ಬಳಸಿ ಬೆಂಗಳೂರು ಸಮಾರಂಭದ ನೇರ ಪ್ರಸಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಅತ್ತ ಡಿಕೆಶಿ ತಂಡ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡುತ್ತಿದ್ದರೆ, ಇಲ್ಲೂ ಎಲ್ಲರೂ ಎದ್ದು ನಿಂತು ಪ್ರತಿಜ್ಞೆ ಸ್ವೀಕರಿಸಿದರು. ಪದಗ್ರಹಣ ವೇಳೆ ಹಲವೆಡೆ ಪಟಾಕಿ ಸಿಡಿಸಿ, ಸಿಹಿ ಸಹ ಹಂಚಿ ಸಂಭ್ರಮಿಸಲಾಯಿತು.
    ಜಿಲ್ಲಾ ಕಾಂಗ್ರೆಸ್ನಿಂದ ಹೋಟೆಲ್ ಕಸ್ತೂರಿ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಓಬೇದುಲ್ಲಾ ಶರೀಫ್ ಮಾತನಾಡಿ, ಕಾಂಗ್ರೆಸ್ ಕೇವಲ ಅಧಿಕಾರಕ್ಕೆ ಸೀಮಿತವಾದ ಪಕ್ಷವಲ್ಲ. ದೇಶದ ಸ್ವಾತಂತ್ರೃಕ್ಕಾಗಿ ಹೋರಾಡಿದ ಪಕ್ಷ. ಕೆಪಿಸಿಸಿಗೆ ಡಿ.ಕೆ. ಶಿವಕುಮಾರ್ ಸಾರಥ್ಯ ವಹಿಸಿದ್ದರಿಂದ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದೆ ಎಂದರು.
    ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ಎಂಎಲ್ಸಿ ಕೆ.ಪುಂಡಲೀಕರಾವ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಸದಸ್ಯ ವಿಜಯಕುಮಾರ ಪಾಟೀಲ್ ಗಾದಗಿ, ಪ್ರಮುಖರಾದ ಎಂ.ಎ. ಸಮೀ, ಪಂಡಿತ ಚಿದ್ರಿ, ಅಮೃತರಾವ ಚಿಮಕೋಡೆ, ಮೀನಾಕ್ಷಿ ಸಂಗ್ರಾಮ, ವೆಂಕಟರಾವ ಸಿಂಧೆ, ಭೋಜಪ್ಪ ಮೆಟಗೆ, ಜಾಜರ್್ ಫನರ್ಾಂಡೀಸ್, ಎಂ.ಡಿ. ಮಿಸ್ಬಾ, ಅಶೋಕ ಚವ್ಹಾಣ್, ಲಿಯಾಖತುಲ್ಲಾ ಖಾನ್ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಚೀನಾ ಗಡಿಯಲ್ಲಿ ಹುತಾತ್ಮ 20 ಯೋಧರನ್ನು ಸ್ಮರಿಸಿ ಮೌನಾಚರಣೆ ಮಾಡಲಾಯಿತು.
    ಔರಾದ್: ನಾಗೂರ (ಎಂ) ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ವೀಕ್ಷಣೆ ಕಾರ್ಯಕ್ರಮ ಜರುಗಿತು. ಯುವ ಮುಖಂಡ ವಿಜಯಕುಮಾರ ಕೌಡಾಳ, ನಾಗೇಶ ಮೇತ್ರೆ, ಸುಭಾಷ, ಸತೀಶ್, ಅನೀಲ ಬ್ಯಾಂಬರೆ, ಭೀಮರಾವ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts