More

    ಕಾಂಗ್ರೆಸ್ ಪರ ನಿಂತ ಮಹಿಳಾ ಮತದಾರರು

    ಕೆ.ಆರ್.ನಗರ: ಈ ಬಾರಿ ಮಹಿಳಾ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದರಿಂದ ನಿರೀಕ್ಷೆಗೂ ಮೀರಿದ ಅಂತರದಿಂದ ಜಯ ಗಳಿಸಲು ಸಾಧ್ಯವಾಯಿತು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.


    ಪಟ್ಟಣದ ಬ್ರಾಹ್ಮಣ ಸಮುದಾಯ ಭವನದಲ್ಲಿ ಲೇಡಿಸ್ ಸ್ಮಾರ್ಟ್ ಕ್ಲಬ್ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಗಾರ್ಮೆಂಟ್ಸ್‌ಗೆ ಮಹಿಳೆಯರನ್ನು ಷೇರುದಾರರನ್ನಾಗಿ ಮಾಡುತ್ತೇನೆಂದು ಜೆಡಿಎಸ್‌ನವರು ವಿತರಿಸಲಾದ ಬಾಂಡ್ ಮತ್ತು ಇತರ ಆಮಿಷಗಳಿಗೆ ಮಹಿಳೆಯರು ಈ ಬಾರಿ ಮಾನ್ಯತೆ ನೀಡಿಲ್ಲ ಎಂದರು.


    ಲೇಡಿಸ್ ಕ್ಲಬ್‌ನ ಪದಾಧಿಕಾರಿಗಳು ಕಳೆದ 10 ವರ್ಷಗಳಿಂದ ತಮ್ಮದೇ ಆದ ಸಮಾಜ ಸೇವಾ ಕಾರ್ಯ ಮಾಡುವುದರ ಜತೆಗೆ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಎಲ್ಲ ಪದಾಧಿಕಾರಿಗಳನ್ನು ಅಭಿನಂದಿಸುತ್ತೇನೆ. ಅಲ್ಲದೆ ಸಮಾಜ ಸೇವಾ ಕಾರ್ಯಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.


    ಗ್ರಾಮೀಣ ಭಾಗದಲ್ಲಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೂ ಸರ್ಕಾರದಿಂದ ಬರುವಂತತಹ ಸವಲತ್ತುಗಳನ್ನು ಕೊಡಿಸಿ ಅವರ ಆರ್ಥಿಕ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದ ಅವರು, ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.


    ವಾರದ ಒಂದು ದಿನ ಪಕ್ಷದ ಕಚೇರಿಯಲ್ಲಿ ಕುಳಿತು ಕಾರ್ಯಕರ್ತರ ಅಹವಾಲು ಆಲಿಸಿ ಅವರ ದುಡಿಮೆಗೆ ಕೃತಜ್ಞತೆ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.


    ಕ್ಲಬ್ ವತಿಯಿಂದ ಶಾಸಕ ಡಿ.ರವಿಶಂಕರ್ ಅವರನ್ನು ಸನ್ಮಾನಿಸಿದಲ್ಲದೆ ಕೇಕ್ ಕತ್ತರಿಸಿ ಅವರ ಹುಟ್ಟುಹಬ್ಬ ಆಚರಿಸಿದರು. ಕ್ಲಬ್ ಅಧ್ಯಕ್ಷೆ ಸ್ಮಿತಾ ಜಯಂತ್, ಪದಾಧಿಕಾರಿಗಳಾದ ಸುನೀತಾ ರಮೇಶ್, ಅಶ್ವಿನಿ ಸಂತೋಷ್, ಪ್ರೀತಿ, ಲತಾ ರವಿಶಂಕರ್, ರೂಪಾ ಮಾದೇಶ್, ಸತ್ಯಮ್ಮ, ಚಿತ್ರ, ತಾರಾ, ಮುಖಂಡರಾದ ಶಿವಕುಮಾರ್, ನಾ.ರಾ.ಗಿರೀಶ್, ಪ್ರಕಾಶ್, ಲೋಕೇಶ್ ಭರಣಿ, ಪುಟ್ಟಾಚಾರಿಕುಮಾರ್, ಸುಮಂತ್, ಕೆ.ವಿನಯ್, ಮಂಚನಹಳ್ಳಿ ಧನು, ದೀಪಕ್, ಶರಣಪ್ಪ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts