More

    ಕಾಂಗ್ರೆಸ್‌ನಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ

    ಎಚ್.ಡಿ.ಕೋಟೆ : ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ದುರಾಡಳಿತ ವಿರುದ್ಧ ಬೇಸತ್ತಿರುವ ಜನರು, ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ. ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸುಭದ್ರ ಸರ್ಕಾರ ಸಾಧ್ಯ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
    ತಾಲ್ಲೂಕಿನ ಅಣ್ಣೂರು, ಪಡಕೋಟೆ, ಭೀಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿ ಮಾತನಾಡಿದರು.
    ಕಳೆದ ಐದು ವರ್ಷಗಳಲ್ಲಿ ಸರಗೂರು ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ ಒಂದುವರೆ ಸಾವಿರ ಕೋಟಿ ರೂ.ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಕ್ಷೇತ್ರ ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ದೊಡ್ಡದಿದ್ದು, ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸಾಲುತ್ತಿಲ್ಲ. ನನ್ನ ನಿರಂತರ ಹೋರಾಟದಿಂದ ಬಿಜೆಪಿ ಸರ್ಕಾರ ಸಚಿವರ ಜತೆ ಸಮನ್ವಯ ಕಾಯ್ದುಕೊಂಡು ಹಣ ಬಿಡುಗಡೆ ಮಾಡಿಸಿದ್ದೇನೆ. ತಾಲೂಕಿನಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಹಾಗೂ ಹಿಂದುಳಿದ ವರ್ಗಗಳ ಬೀದಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಲಾಗಿದೆ ಎಂದರು.
    ತಾಲೂಕಿನ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಯಲು ತಡೆಗೋಡೆ, ಆನೆ ಕಂದಕ, ಸೋಲಾರ್ ಬೇಲಿ ಸೇರಿದಂತೆ ಹಲವು ಕ್ರಮಕೈಗೊಳ್ಳಲಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಕಾಡಾನೆ ಉಪಟಳ ತಪ್ಪಿಸಲು ಸುಮಾರು 200 ಕಿ.ಮೀ.ನಷ್ಟು ರೈಲ್ವೆ ಬ್ಯಾರಿಕೇಡ್ ಅಳವಡಿಸಿ ರೈತರ ಹಿತ ಕಾಪಾಡಿದ್ದೇನೆ ಎಂದರು. ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೋಗಲಾಡಿಸಲು ಮತ್ತೊಮ್ಮೆ ನನ್ನನ್ನು ಜನರು ಆಶೀರ್ವಾದಿಸಬೇಕು ಎಂದರು.
    ಮಹದೇಶ್ವರ ಗಿರಿಜನ ಕಾಲೋನಿ, ಭೀಮನಹಳ್ಳಿ ಗಿರಿಜನ ಕಾಲೋನಿ, ಕುಂಟೇರಿ ಹಾಡಿ, ಭೀಮನಹಳ್ಳಿ, ಮಾಸ್ತಿ ಗುಡಿ, ಕೈಲಾಸಪುರ, ಮುಸ್ಕೆರೆ, ವಿಶ್ವಕರ್ಮ ಕಾಲೋನಿ, ರಾಜೇಗೌಡನಹುಂಡಿ, ಎಲೆ ಹುಂಡಿ, ಚಿಕ್ಕಕಾಳೇಗೌಡನಪುರ, ಅಣ್ಣೂರು ಹಾಡಿ, ಅಣ್ಣೂರು, ಬುಕುತನಮಾಳ, ಹೊಸಳ್ಳಿ, ನಂಜನಾಯಕನಹಳ್ಳಿ, ಬಸವರಾಜ ಕಟ್ಟ ಹಾಡಿ, ಕೆ.ಎಡತೊರೆ ಪಾಳ್ಯ, ಕೆ.ಎಡತೊರೆ, ಟೈಗರ್ ಬ್ಲ್ಯಾಕ್, ಬೋಚಿ ಕಟ್ಟೆ, ಕೆ.ಜಿಹುಂಡಿ, ಮಹಾದೇವಪುರ, ಬೂದನೂರು, ನಂಜಯ್ಯನ ಶೆಡ್ಡು, ಬೊಮ್ಮಲಾಪುರ, ಚಕೋಡನಹಳ್ಳಿ, ಬೂದನೂರು, ಸೋನಳ್ಳಿ ಹಾಡಿ, ಬಸವರಾಜನ ಮಂಟಿ ಹಾಡಿ, ಮೇಟಿಕುಪ್ಪೆ ಹಾಡಿ, ಸಿದ್ದಾಪುರ, ಅಗಸನ ಹುಂಡಿ, ಕಲ್ಲಟ್ಟಿ, ಸೊಳ್ಳೆಪುರ, ಜಿ.ಎಂ.ಹಳ್ಳಿ ಹಾಡಿ,ಅಗಸನಹುಂಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಮತಯಾಚನೆ ಮಾಡಿದರು.
    ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ವಿ.ಬಸವರಾಜು, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts