More

    ಕಸ ವಿಲೇವಾರಿ ಆದಾಯದ ಮೂಲವಾಗಲಿ


    ಯಾದಗಿರಿ: ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಇರದ ಕಾರಣ ಜನತೆಗೆ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಇದರ ನಿಯಂತ್ರಣಕ್ಕೆ ಗ್ರಾಪಂ ಸಿಬ್ಬಂದಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಸೋಮಶೇಖರ ಬಿರಾದಾರ ಸೂಚಿಸಿದರು.

    ಶಹಾಪುರ ತಾಲೂಕಿನ ಕೊಳ್ಳೂರು (ಎಂ) ಗ್ರಾಮದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಮತ್ತು ಸಾಹಸ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಕಸ ಸಂಗ್ರಹ, ವಿಂಗಡಣೆ ಹಾಗೂ ವಿಲೆವಾರಿ ಕುರಿತು ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಕಸವನ್ನು ಮೂಲದಲ್ಲೆ ವಿಂಗಡಿಸಿ ವಿಲೆವಾರಿ ವಾಹನಕ್ಕೆ ನೀಡುವ ಜವಾಬ್ದಾರಿ ಗ್ರಾಮದ ಜನರದ್ದಾಗಿದೆ. ಮನೆಯ ಕಸ ಸಂಗ್ರಹಿಸಿ ನೀಡುವದು ನಿರಂತರ ಪ್ರಕ್ರಿಯೆಯಾಗಬೇಕು. ಆಗ ನಮ್ಮ ಸುತ್ತ-ಮುತ್ತಲಿನ ಪರಿಸದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಗ್ರಾಮದ ನೈರ್ಮಲ್ಯ ರಕ್ಷಿಸಿದಂತಾಗುತ್ತದೆ ಎಂದು ಹೇಳಿದರು.

    ನಿತ್ಯ ಉತ್ಪತ್ತಿಯಾಗುವ ಕಸ ಸ್ವಚ್ಛತಾ ವಾಹಿನಿ ಮೂಲಕ ವಿಲೇವಾರಿ ಮಾಡಲು ಗ್ರಾಪಂ ಮಟ್ಟದ ಮಹಿಳಾ ಸ್ವಸಹಾಯ ಸಂಘದ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಅನುಸಾರ ಯೋಜಿತವಾಗಿ ಕೆಲಸ ಮಾಡಿದರೆ ಸಂಘಕ್ಕೆ ದುಪ್ಪಟ್ಟು ಆದಾಯ ಬರುತ್ತದೆ. ಅಲ್ಲದೆ, ಗ್ರಾಮದ ನೈರ್ಮಲ್ಯ ಕಾಪಾಡಿದಂತಾಗುತ್ತದೆ. ಕಸದಿಂದ ರಸ ಅನ್ನುವಂತೆ. ಯಾವುದೇ ಕಸ ನಿರುಪಯುಕ್ತವಲ್ಲ. ಎಲ್ಲೆಂದರಲ್ಲಿ ಬಿಸಾಡದೆ ಯೋಜಿತ ಕ್ರಮದ ಮೂಲಕ ಕಸ ಸಂಗ್ರಹ ಮಾಡಿ, ಮಾರಾಟ ಮಾಡಿದರೆ ಆದಾಯ ಸಿಗಲಿದೆ ಎಂದು ಸಲಹೆ ನೀಡಿದರು.

    ಕಸವನ್ನು ಮನೆ ಮುಂದಿನ ಚರಂಡಿಗಳಿಗೆ ಎಸೆದರೆ, ಚರಂಡಿಗಳು ತುಂಬಿ ಮಳೆಗಾಲದಲ್ಲಿ ಸಮಸ್ಯೆಯಾಗುತ್ತದೆ. ಕೊಳಚೆ ನೀರು ಸಂಗ್ರಹವಾಗಿ ರೋಗಗಳು ಹರಡುತ್ತವೆ. ಇಂಥ ಸಮಸ್ಯೆಯನ್ನು ದೂರ ಮಾಡಲು ಸಾರ್ವಜನಿಕರ ಪ್ರಜ್ಞಾವಂತಿಕೆ ಹಾಗೂ ಸಹಭಾಗಿತ್ವದಿಂದ ಗ್ರಾಮದಲ್ಲಿ ಸ್ವಚ್ಛತೆ ಕಾಪಾಲು ಸಾಧ್ಯ ಎಂದರು.

    ಸಹಾಯಕ ನಿದರ್ೇಶಕ ಭೀಮರಾಯ ಬಿರಾದಾರ, ಗ್ರಾಪಂ ಅಧ್ಯಕ್ಷೆ ದೇವಮ್ಮ, ಪಿಡಿಒ ರಮೇಶ ನಾಯಕ, ಎಸ್ಬಿಎಮ್ ಜಿಲ್ಲಾ ಐಇಸಿ ಸಂಯೋಜಕ ಶಿವುಕುಮಾರ, ಶಿವರಾಜ, ಪವನಕುಮಾರ, ಮರದಾನೆಪ್ಪ, ಭೀಮಾಶಂಕರ, ಗ್ರಾಪಂ ಸದಸ್ಯರಾದ ಈರಣ್ಣಗೌಡ, ದೇವಕೆಮ್ಮ, ಅನಂತಮ್ಮ, ಪವಿತ್ರಾ, ಅಯ್ಯಣ್ಣ, ಭೀಮವ್ವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts