More

    ಕಸ ನಿರ್ವಹಣೆ ಕಾರ್ಯಕ್ಕೆ ಕೈಜೋಡಿಸಿ

    ಕುಮಟಾ: ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಜತೆಗೆ ಕಟ್ಟುನಿಟ್ಟಾದ ಕಸ ನಿರ್ವಹಣೆ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

    ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ 15ನೇ ಹಣಕಾಸು ಯೋಜನೆಯಡಿ 4.90 ಲಕ್ಷ ರೂಪಾಯಿ ವೆಚ್ಚದಲ್ಲಿ ಮಂಜೂರಾದ ಹಸಿ-ಒಣ ಕಸ ಜೋಡಿತೊಟ್ಟಿ ಇರಿಸುವಿಕೆ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಪಟ್ಟಣ ವ್ಯಾಪ್ತಿಯ ವಾಣಿಜ್ಯ ಹಾಗೂ ಪ್ರಮುಖ ಸ್ಥಳಗಳಲ್ಲಿ ಘನತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಗಟ್ಟಲು ಜೋಡಿತೊಟ್ಟಿ ಇಡಲಾಗುತ್ತಿದೆ. ಹಸಿ ಮತ್ತು ಒಣ ಕಸವನ್ನು ಕಂಡಕಂಡಲ್ಲಿ ಎಸೆಯದೇ ತೊಟ್ಟಿಯಲ್ಲೇ ಪ್ರತ್ಯೇಕಿಸಿ ಹಾಕಬೇಕು ಎಂದರು.

    ಪುರಸಭೆ ಮುಖ್ಯಾಧಿಕಾರಿ ಸುರೇಶ ಎಂ.ಕೆ. ಮಾತನಾಡಿ, ಪಟ್ಟಣವಾಸಿಗಳು ಮನೆಯ ಕಸವನ್ನು ತಂದು ಜೋಡಿ ತೊಟ್ಟಿಯಲ್ಲಿ ಹಾಕಬಾರದು. ಮನೆಮನೆಯಿಂದ ಕಸ ಸಂಗ್ರಹಣೆಗೆ ವಾಹನ ವ್ಯವಸ್ಥೆ ಇದೆ. ಅಂಗಡಿಕಾರರು ಮತ್ತು ಸಾರ್ವಜನಿಕರು ಮಾತ್ರ ಕಸದ ತೊಟ್ಟಿ ಬಳಸಬೇಕು ಎಂದು ಮನವಿ ಮಾಡಿದರು.

    ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಹರ್ಮಲಕರ್, ಸದಸ್ಯರಾದ ತುಳಸು ಗೌಡ, ಅನುರಾಧಾ ಬಾಳೇರಿ, ಮಹೇಶ ನಾಯ್ಕ ವನ್ನಳ್ಳಿ, ಟೋನಿ ರೋಡ್ರಿಗಿಸ್, ಹೇಮಂತಕುಮಾರ ಗಾಂವ್ಕರ, ಪ್ರಶಾಂತ ನಾಯ್ಕ, ವಿಶ್ವನಾಥ ನಾಯ್ಕ, ಜಯಾ ಶೇಟ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts