More

    ಕಸ್ತೂರಿ ರಂಗನ್ ವರದಿ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ

    ವಿಜಯವಾಣಿ ಸುದ್ದಿಜಾಲ ಕಾರವಾರ

    ಪಶ್ಚಿಮಘಟ್ಟದ ಹಲವು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿರುವ ಕಸ್ತೂರಿ ರಂಗನ್ ವರದಿಯನ್ನಾಧರಿಸಿದ ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಉನ್ನತ ಮಟ್ಟದ ಅಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

    ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಈ ಸಂಬಂಧ ಸಭೆ ನಡೆಯಿತು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಅಲ್ಲದೆ ಇನ್ನೂ ಕೆಲ ಸಚಿವರು, ಕರಾವಳಿ, ಮಲೆನಾಡಿಗೆ ಶಾಸಕರು ಸಭೆಯಲ್ಲಿದ್ದರು. ಜು.25 ಅಥವಾ 26 ರಂದು ದೆಹಲಿಗೆ ನಿಯೋಗ ತೆರಳಿ ಆಕ್ಷೇಪಣೆ ಸಲ್ಲಿಸಲು ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯಿಸಲಾಯಿತು ಎಂದು ತಿಳಿಸಿದ್ದಾರೆ.


    ಸಭೆಯಲ್ಲಿ ತಾವು ಮಾತನಾಡಿ, ಕರಡು ಅಧಿಸೂಚನೆ ಜಾರಿಯಾದಲ್ಲಿ ಕ್ಷೇತ್ರದ ಜನತೆಯ ಬದುಕು ತುಂಬಾ ಕಷ್ಟಕರವಾಗಲಿದೆ ಎಂದು ತಿಳಿಸಿದೆ.
    ಕಸ್ತೂರಿ ರಂಗನ್‌ ನೇತೃತ್ವದ ಸಮಿತಿ 2013 ರಲ್ಲಿ ತನ್ನ ವರದಿಯನ್ನು ಒಪ್ಪಿಸಿದೆ. ಆದರೆ ನನ್ನ ಕ್ಷೇತ್ರದಲ್ಲಿ ಸೀಬರ್ಡ್ ನೌಕಾ ಯೋಜನೆ, ಕೈಗಾ ಅಣು ಸ್ಥಾವರ ಹಿಂದಿನಿಂದಲೂ ಇದ್ದು, ಈ ಯೋಜನೆಗಳಿರುವುದು ಕಸ್ತೂರಿ‌ರಂಗನ್‌ ಸಮಿತಿ ಕಡೆಗಣಿಸಿದೆ. ಅಣು ವಿದ್ಯುತ್ ಯೋಜನೆಯಲ್ಲಿ 5 ಹಾಗೂ 6ನೇ ಘಟಕದ ನಿರ್ಮಾಣ ಕಾಮಗಾರಿಯೂ ಆರಂಭವಾಗಿದೆ. ಚತುಷ್ಪಥ ರಸ್ತೆಯೂ ಆಗಿದೆ. ಇದೆಲ್ಲವನ್ನು ವರದಿಯಲ್ಲಿ ಹೇಳಲಾಗಿಲ್ಲ. ಅಂದರೆ ಸಮೀಕ್ಷೆಯನ್ನೇ ಸಮರ್ಪಕವಾಗಿ ಮಾಡಿಲ್ಲ ಎಂದು ಆಪಾದಿಸಿದರು. ಈ ವರದಿ ಅನೇಕ ಲೋಪದೋಷಗಳಿಂದ ಕೂಡಿದೆ. ಇದು ಅನುಷ್ಠಾನಕ್ಕೆ ಬಂದರೆ ಕಾರವಾರ-ಅಂಕೋಲಾ ತಾಲ್ಲೂಕಿನ ಜನರು ಮತ್ತೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಮೊದಲೆ ಅಭಿವೃದ್ಧಿಯಲ್ಲಿ ನನ್ನ ಕ್ಷೇತ್ರ ಹಿಂದುಳಿದಿದೆ. ಈ ವರದಿ ಜಾರಿಯಿಂದ ಅಭಿವೃದ್ಧಿ ಸ್ಥಗಿತವಾಗಲಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ‌.
    ಉತ್ತರಕನ್ನಡ ಜಿಲ್ಲೆಯ 600ಕ್ಕೂ ಅಧಿಕ ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೊಷಿಸಿ ಕೇಂದ್ರ ಪರಿಸರ ಮಂತ್ರಾಲಯ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಜಾರಿಯಾದಲ್ಲಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಬರಲು ಸಾಧ್ಯವಿಲ್ಲ. ರಸ್ತೆ, ಕಟ್ಟಡಗಳ ನಿರ್ಮಾಣಕ್ಕೂ ಪರವಾನಗಿ ಪಡೆಯುವ ಅನಿವಾರ್ಯತೆ ಎದುರಾಗಲಿದೆ. ಪರಿಸರ ಪ್ರವಾಸೋದ್ಯಮಕ್ಕೂ ಹಿನ್ನಡೆಯಾಗುವ ಸಾಧ್ಯತೆ ಇದೆ. ಕಾರವಾರ ತಾಲೂಕಿನ 36, ಅಂಕೋಲಾದ 43 ಗ್ರಾಮಗಳು ಸೇರಿವೆ ಎಂದು ತಿಳಿಸಿದರು.
    ಪ್ರಾಣಿ, ಪಕ್ಷಿ, ಮರಗಳಂತೆ ಮನುಷ್ಯನಿಗೂ ಜೀವನ ನಡೆಸಲು ಅವಕಾಶವಿರಬೇಕು. ಕಸ್ತೂರಿರಂಗನ್ ವರದಿ ಜಾರಿಯಾದರೆ ಕಾಡಿನಲ್ಲೇ ವಾಸಿಸುವ ಮಲೆನಾಡು ಮತ್ತು ಕರಾವಳಿಗರ ಬದುಕನ್ನೇ ಕಸಿದುಕೊಂಡಂತಾಗುತ್ತದೆ. ಈ ಬಗ್ಗೆ ಸಾರ್ವಜನಿಕರೂ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸಭೆಯ ಗಮನಕ್ಕೆ ತರಲಾಯಿತು ಎಂದು ರೂಪಾಲಿ ತಿಳಿಸಿದ್ದಾರೆ.
    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts