More

    ಕಷ್ಟ ಕಾಲದಲ್ಲಿ ಸಹಾಯಕ್ಕಾಗುವ ವಿಮೆ ಹಣ

    ದೋರನಹಳ್ಳಿ: ನಮ್ಮ ಕಷ್ಟ ಕಾಲದಲ್ಲಿ ವಿಮೆ ಹಣ ಬಹಳ ಸಹಾಯವಾಗುತ್ತದೆ ಎಂದು ಯಾದಗಿರಿ ವಿಭಾಗದ ಅಂಚೆ ಅಧಿಕ್ಷಕ ಶಿವಾನಂದ ಪಿ.ಎಚ್. ಹೇಳಿದರು.

    ಗ್ರಾಮದ ಹಳೇ ಪಿಎಚ್‌ಸಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ಅಂಚೆ ಅಭಿಯಾನ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಲ್ಪ ಉಳಿತಾಯದ ಅಂಚೆವಿಮೆ ನಿಮ್ಮ ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತದೆ. ವಿಮೆ ಎಂದರೆ ಕೇವಲ ಮರಣ ಹೊಂದಿದಾಗ ಮಾತ್ರ ದೊರಕುತ್ತದೆ ಎಂಬುದು ತಪ್ಪು ಕಲ್ಪನೆ. ಅಂಚೆವಿಮೆ ನೀವು ಬದುಕಿದ್ದಾಗಲೂ ನಿಮ್ಮ ಸಹಾಯಕ್ಕೆ ಬರುವಂತ ವಿಮೆಗಳಿದ್ದು, ಅವುಗಳನ್ನು ಮಾಡಿಸುವ ಮೂಲಕ ಲಾಭ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

    ಜಗತ್ತಿನ ಬಹಳ ಹಳೆಯ ಅಂಚೆ ವ್ಯವಸ್ಥೆ ಭಾರತದಲ್ಲಿತ್ತು. ಅಂಚೆಯಲ್ಲಿ ಉಳಿತಾಯ, ಮನಿ ಆರ್ಡರ್, ವಿಮೆ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿ ವಿವಿಧ ಸೇವೆ ಕೂಡ ಅಂಚೆ ಇಲಾಖೆ ಒದಗಿಸುತ್ತಿದೆ. ಕೈ ಬರಹ, ಕಾಲ್ನಡಿಗೆ, ಕುದುರೆ, ಪಾರಿವಾಳ ಹೀಗೆ ಶುರುವಾದ ಈ ಸೇವೆ ಇಂದು ಡಿಜಿಟಲ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ತನ್ನ ಸೇವೆ ಮುನ್ನಡೆಸಿಕೊಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

    ಪೂಜ್ಯ ಭೀಮಾಶಂಕರಾನAದ ಅವಧೂತರು ಕರ‍್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಬಿ.ಎಸ್.ನೆಲೋಗಿ, ಉಪ ತಹಸೀಲ್ದಾರ್ ಸಂಗಮೇಶ ನಾಯಕ, ಆಯುಷ್ ವೈದ್ಯೆ ಡಾ.ಗೀತಾ ಪಾಟೀಲ್, ಅಂಚೆ ಇಲಾಖೆ ಉಪ ಅಧಿಕ್ಷಕ ಸಿ.ಕೆ.ಚವ್ಹಾಣ್, ದೋರನಹಳ್ಳಿ ಅಂಚೆ ಇಲಾಖೆ ಶರಣಪ್ಪ ದಿಗ್ಗಿ, ಮರೆಪ್ಪ ಪೋಸ್ಟಮನ್, ಮಂಜುನಾಥ ದೊರೆ, ನಾಗಪ್ಪ ಕಣೇಕಲ್, ಶರಣು ಕಸನ್, ಮಹೇಶ ಪತ್ತಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts