More

    ಕಳ್ಳನಿಂದ ನಾಲ್ವರು ಪೊಲೀಸರಿಗೆ ಕರೊನಾ

    ಹುಬ್ಬಳ್ಳಿ: ಹಾರ್ಡ್​ವೇರ್ ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ, ಕರೊನಾ ಸೋಂಕಿತನ ಸಂಪರ್ಕಕ್ಕೆ ಒಳಪಟ್ಟ ಇಲ್ಲಿನ ಉಪನಗರ ಠಾಣೆ ನಾಲ್ವರು ಪೊಲೀಸರಿಗೆ ಕರೊನಾ ಸೋಂಕು ತಗುಲಿದೆ.

    ಕಳ್ಳ ತಂದ ಕರೊನಾ ಬಾಂಬ್​ನಿಂದ ಸಿಬ್ಬಂದಿಯಲ್ಲಿ ಮತ್ತಷ್ಟು ಭೀತಿ ಶುರುವಾಗಿದೆ. ಗದಗ ನಿವಾಸಿ ಕಳ್ಳತನ ಆರೋಪಿಯನ್ನು ಉಪನಗರ ಠಾಣೆ ಪೊಲೀಸರು ಜೂ. 28ರಂದು ಬಂಧಿಸಿ ಕೋರ್ಟ್​ಗೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ಆತನನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ಕೂಡಲೆ ಆತನನ್ನು ಕರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. 3 ದಿನಗಳ ಬಳಿಕ ಆತನ ವರದಿ ಪಾಸಿಟಿವ್ ಬಂದಿತ್ತು.

    ಜುಲೈ 3ರಂದು ಕಿಮ್ಸ್​ನಿಂದ ಆತ ತಪ್ಪಿಸಿಕೊಂಡು ಅವಾಂತರ ಸೃಷ್ಟಿಸಿದ್ದ. ಸಂಜೆ ಗದಗನಲ್ಲಿ ಪೊಲೀಸರು ಬಂಧಿಸಿ ಕರೆತಂದಿದ್ದರು. ಕಳ್ಳನ ಪ್ರಾಥಮಿಕ ಸಂಪರ್ಕದಿಂದ ಕಳೆದ ವಾರ ಒಬ್ಬ ನೌಕರನಿಗೆ ಸೋಂಕು ತಗುಲಿತ್ತು. ಅಲ್ಲಿಂದ ಶುರುವಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗುರುವಾರದವರೆಗೆ ಒಬ್ಬ ಮಹಿಳಾ ಕಾನ್ಸ್​ಟೇಬಲ್ ಸೇರಿ ನಾಲ್ಕಕ್ಕೆ ಏರಿದೆ. ಮತ್ತೆಷ್ಟು ಸಿಬ್ಬಂದಿಗೆ ಹಬ್ಬುತ್ತದೋ ಎಂಬ ಆತಂಕ ಶುರುವಾಗಿದೆ.

    ಎಸಿಪಿ ಕಚೇರಿ ಸೀಲ್​ಡೌನ್: ಉಪನಗರ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಅದೇ ಕಟ್ಟಡದಲ್ಲಿರುವ ಉತ್ತರ ಉಪ ವಿಭಾಗದ ಎಸಿಪಿ ಕಚೇರಿ, ಉಪನಗರ ಠಾಣೆ, ಮಹಿಳಾ ಪೊಲೀಸ್ ಠಾಣೆ, ಸೈಬರ್ ಕ್ರೖೆಂ ಪೊಲೀಸ್ ಠಾಣೆ ಸೇರಿ ಸಂಪೂರ್ಣ ಕಟ್ಟಡವನ್ನು ಸೀಲ್​ಡೌನ್ ಮಾಡಲಾಗಿದೆ. ಹಲವು ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಹುಬ್ಬಳ್ಳಿ ನಗರದ ದುರ್ಗದ ಬೈಲ್ ಬಳಿ ಇರುವ ಶಹರ ಪೊಲೀಸ್ ಠಾಣೆಯ 45 ವರ್ಷದ ಮುಖ್ಯ ಪೇದೆಗೆ ಕರೊನಾ ಸೋಂಕು ತಗುಲಿದ್ದು, ಠಾಣೆಯನ್ನು ಸೀಲ್​ಡೌನ್ ಮಾಡಲಾಗಿದೆ. ವಾರಂಟ್ ಡ್ಯೂಟಿ ಮಾಡುತ್ತಿದ್ದ ಮುಖ್ಯ ಪೇದೆಗೆ ಐದಾರು ದಿನಗಳ ಹಿಂದೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಕೂಡಲೆ, ರಜೆ ಹಾಕಿ ಕಿಮ್ಸ್​ನಲ್ಲಿ ಪರೀಕ್ಷೆ ಮಾಡಿಸಿದ್ದರು. ಇದೀಗ ಅವರ ವರದಿ ಪಾಸಿಟಿವ್ ಬಂದಿದೆ. ಸದ್ಯ ಸಂಪೂರ್ಣ ಠಾಣೆ ಸ್ಯಾನಿಟೈಸ್ ಮಾಡಲಾಗಿದೆ. ಠಾಣೆ ಎದುರು ಬ್ಯಾರಿಕೇಡ್ ಇಟ್ಟು ಸೀಲ್​ಡೌನ್ ಮಾಡಲಾಗಿದೆ.

    ಒಂದೇ ದಿನ ನಾಲ್ಕು ಪೊಲೀಸರಿಗೆ ವೈರಸ್: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಒಬ್ಬ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ಸೇರಿ ನಾಲ್ವರು ಪೊಲೀಸರಿಗೆ ಕರೊನಾ ವೈರಸ್ ತಗುಲಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಖಾಕಿ ಪಡೆ ಹರಸಾಹಸ ಪಡುತ್ತಿದೆ. ವಿದ್ಯಾನಗರ ಪೊಲೀಸ್ ಠಾಣೆಯ 54 ವರ್ಷದ ಎಎಸ್​ಐ, ಘಂಟಿಕೇರಿ ಪೊಲೀಸ್ ಠಾಣೆಯ 36 ವರ್ಷದ ಮಹಿಳಾ ಕಾನ್ಸ್​ಟೇಬಲ್, ದಕ್ಷಿಣ ಸಂಚಾರ ಠಾಣೆಯ 31 ವರ್ಷದ ಕಾನ್ಸ್​ಟೇಬಲ್ ಮತ್ತು ಉಪನಗರ ಪೊಲೀಸ್ ಠಾಣೆ 31 ವರ್ಷದ ಕಾನ್ಸ್​ಟೇಬಲ್​ಗೆ ಗುರುವಾರ ಕರೊನಾ ದೃಢಪಟ್ಟಿದೆ.

    ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಹರಡುತ್ತಿರುವ ಕಾರಣ ಜಾಗ್ರತೆ ವಹಿಸುವಂತೆ ನಮ್ಮ ಸಿಬ್ಬಂದಿಗೆ ಸೂಚಿಸಿದ್ದೇವೆ. ಸಾರ್ವಜನಿಕರು ಅನಗತ್ಯವಾಗಿ, ಸಣ್ಣ ಪುಟ್ಟ ವಿಷಯಕ್ಕೆ ಪೊಲೀಸ್ ಠಾಣೆಗಳಿಗೆ ಬರಬಾರದು. ಅಗತ್ಯವಿದ್ದಲ್ಲಿ ಠಾಣೆಯ ದೂರವಾಣಿ ಸಂಖ್ಯೆ ಅಥವಾ ಕಂಟ್ರೋಲ್ ರೂಮ್ ಸಂರ್ಪಸಬಹುದು.

    | ಆರ್. ದಿಲೀಪ, ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts