More

    ಕಳುವಾಗಿದ್ದ ಹನುಮಂತದೇವರ ಮೂರ್ತಿ ಪತ್ತೆ

    ಕ್ಷೆ್ಮೕಶ್ವರ: ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೂರ- ಸುವರ್ಣಗಿರಿತಾಂಡಾ- ಯಲ್ಲಾಪುರ ಮಾರ್ಗಕ್ಕೆ ಹೊಂದಿಕೊಂಡಿರುವ ಮರಡಿ ಹನುಮಂತದೇವರ ದೇವಸ್ಥಾನದಲ್ಲಿನ ಹನುಮಂತದೇವರ ಕಲ್ಲಿನ ಮೂರ್ತಿ ಶನಿವಾರ ಕಳ್ಳತನವಾಗಿತ್ತು.

    ದೇವಸ್ಥಾನದಿಂದ 100 ಮೀಟರ್ ದೂರದ ರಸ್ತೆ ಪಕ್ಕದ ಪೊದೆಯ ತಗ್ಗು ಗುಂಡಿಯಲ್ಲಿ ಭಾನುವಾರ ಬೆಳಗ್ಗೆ ಮೂರ್ತಿ ಪತ್ತೆಯಾಗಿದೆ. ಇದರಿಂದ ದೇವಸ್ಥಾನ ಕಮಿಟಿ ಸದಸ್ಯರು ಮತ್ತು ಭಕ್ತರಲ್ಲಿ ಹರ್ಷವನ್ನುಂಟು ಮಾಡಿದೆ. ಆದರೂ ಮೂರ್ತಿ ಕಳ್ಳತನ ಯಾಕೆ ಮತ್ತು ಯಾರು ಮಾಡಿದರು ಎಂಬುದು ಸಾರ್ವಜನಿಕರಿಗೆ ಯಕ್ಷಪ್ರಶ್ನೆಯಾಗಿದೆ.

    ಭಕ್ತರ ಇಷ್ಟಾರ್ಥ ಸಿದ್ಧಿಸುವ ಅತ್ಯಂತ ಪುರಾತನವಾದ ದೇವಸ್ಥಾನಕ್ಕೆ ಇತ್ತೀಚೆಗೆ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದೇವಸ್ಥಾನದ ಅಭಿವೃದ್ಧಿಗೆ ಗ್ರಾಮಸ್ಥರು, ಭಕ್ತರು ಮುಂದಾಗಿದ್ದರು. ಆದರೆ, ದೇವರ ಮೂರ್ತಿ ಕಳ್ಳತನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದರು.

    ಭಾನುವಾರ ಬೆಳಗ್ಗೆ ಸ್ಥಳ ಮಹಜರ್ ಮಾಡಿ ಮಾಹಿತಿ ಕಲೆಹಾಕಲು ಹೋದ ಸಂದರ್ಭದಲ್ಲಿ ಗ್ರಾಮಸ್ಥರೊಂದಿಗೆ ಸುತ್ತ್ತನ ಸ್ಥಳ ಪರಿಶೀಲನೆ ಮಾಡುವ ವೇಳೆ ಪೊದೆಯ ತಗ್ಗಿನಲ್ಲಿ ದೇವರ ಮೂರ್ತಿಯನ್ನು ದುಷ್ಕರ್ವಿುಗಳು ಎಸೆದು ಹೋಗಿದ್ದು ಕಂಡು ಬಂದಿದೆ. ಕೂಡಲೆ ಪೊಲೀಸರು ಜನರ ಸಹಾಯದಿಂದ ಹನುಮಂತ ದೇವರ ಮೂರ್ತಿ, ನಾಗರಕಲ್ಲು, ದೀಪ, ಹುಂಡಿಯನ್ನು ದೇವಸ್ಥಾನಕ್ಕೆ ತಂದು ಕಮಿಟಿಯವರಿಗೆ ಒಪ್ಪಿಸಿದ್ದಾರೆ ಎಂದು ಪಿಎಸ್​ಐ ಡಿ. ಪ್ರಕಾಶ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts