More

    ಕಳವು ಪ್ರಕರಣ ಪತ್ತೆಗೆ ಕ್ಯಾಮರಾ ಅಳವಡಿಕೆ, ಕೆಂದ್ರ ವಲಯ ಐಜಿಪಿ ಚಂದ್ರಶೇಖರ್ ಮಾಹಿತಿ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಸೇವೆಗೆ ಚಾಲನೆ

    ನೆಲಮಂಗಲ: ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ) ನಿಟ್ಟಿನಲ್ಲಿ ವಿವಿಧೆಡೆ ಸಿಸಿ ಕ್ಯಾಮರಾ ಅಳವಡಿಕೆ ಮಾಡಿದ್ದು, ವಾಹನ ಕಳವು ಪ್ರಕರಣ ಪತ್ತೆಗೆ ಸಹಕಾರಿಯಾಗಲಿದೆ ಎಂದು ಕೆಂದ್ರ ವಲಯ ಐಜಿಪಿ ಚಂದ್ರಶೇಖರ್ ತಿಳಿಸಿದರು.

    ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿವಿಧ ಕಂಪನಿಗಳ ಸಿಎಸ್‌ಆರ್ ಯೋಜನೆಯಡಿ ನಿರ್ಮಾಣ ಮಾಡಿದ್ದ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮರಾ ನಿಯಂತ್ರಣ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

    ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದಲ್ಲಿ ವಾಹನಕಳ್ಳತನ ಪ್ರಕರಣ ಹೆಚ್ಚುತ್ತಿರುವ ಜತೆಗೆ ಹೆದ್ದಾರಿಯಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುತ್ತಿದೆ. ಇದನ್ನು ತಡೆಯಲು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮಾರಾ ಪೂರಕವಾಗಲಿದೆ ಎಂದು ಹೇಳಿದರು.

    ಕ್ಯಾಮಾರಾ ಅಳವಡಿಕೆ: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಮುಖ್ಯರಸ್ತೆ, ಹುಸ್ಕೂರು ಮುಖ್ಯರಸ್ತೆ, ಟಿಸಿಐ ರಸ್ತೆ ಬಳಿ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ದಿನದ 24 ಗಂಟೆಗಳ ಕಾಲ ಕ್ಯಾಮರಾ ಕೆಲಸ ಮಾಡಲಿದ್ದು, ಇದರ ನಿಗಾವಣೆಗೆ 3 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಚಂದ್ರಶೇಖರ್ ತಿಳಿಸಿದರು.

    1 ತಿಂಗಳವರೆಗೂ ಸಂಚಾರ ಮಾಡಿರುವ 7 ಲಕ್ಷಕ್ಕೂ ಅಧಿಕ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಗುರುತಿಸಿ ಮಾಹಿತಿ ಕಲೆ ಹಾಕಲಾಗಿದೆ. ಠಾಣೆಯ ಮೇಲ್ಬಾಗದಲ್ಲಿ ಮಾಕಳಿ ಬಳಿಯ ಹಿಮಾಲಯ ಕಂಪನಿ ಮತ್ತು ಬಿಯೆಸ್ಸೆ ಇಂಡಿಯಾ ಕಂಪನಿಯ ಸಿಎಸ್‌ಆರ್ ಯೋಜನೆಯಡಿ ಕ್ಯಾಮರಾ ನಿಗಾವಣೆಗೆ ಅಗತ್ಯವಿರುವ ಶೆಡ್ ನಿರ್ಮಾಣ ಹಾಗೂ ಕ್ಯಾಮರಾ ಅಳವಡಿಕೆ ಮಾಡಲಾಗಿದೆ ಎಂದು ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್ ತಿಳಿಸಿದರು.

    ಕಳ್ಳತನ ಪ್ರಕರಣ ಪತ್ತೆ: ಬಾಗಲುಗುಂಟೆ, ಸೋಲದೇವನಹಳ್ಳಿ, ಪೀಣ್ಯ, ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳನ್ನು ಇದೇ ಕ್ಯಾಮರಾಗಳ ನೆರವಿನಿಂದ ಪತ್ತೆ ಮಾಡಲಾಗಿದೆ ಎಂದು ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್ ಮಾಹಿತಿ ನೀಡಿದರು.

    ಡಿವೈಎಸ್‌ಪಿ ಎಚ್.ಪಿ.ಜಗದೀಶ್, ವೃತ್ತ ನಿರೀಕ್ಷಕರಾದ ಎಂ.ಆರ್.ಹರೀಶ್, ಎ.ವಿ.ಕುಮಾರ್, ಅರಣ್‌ಸಾಲುಂಕೆ, ಎಸ್‌ಐಗಳಾದ ದಾಳೇಗೌಡ, ಎಚ್.ಟಿ.ವಸಂತ್, ವಿ.ಅಂಜನ್‌ಕುಮಾರ್, ಡಿ,ಆರ್.ಮಂಜುನಾಥ್, ಎನ್.ಸುರೇಶ್, ಚಿಕ್ಕನರಸಿಂಹಯ್ಯ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts