More

    ಕಳತ್ಮಾಡು ಲಯನ್ಸ್ ಶಾಲಾ ತಂಡ ಚಾಂಪಿಯನ್

    ಗೋಣಿಕೊಪ್ಪ: ಪಟ್ಟಣದ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿರಾಜಪೇಟೆ ತಾಲೂಕು ಮಟ್ಟದ ಕಾವೇರಿ ಕಲರವ ಸ್ಪರ್ಧೆಯಲ್ಲಿ 300ಕ್ಕೂ ಹೆಚ್ಚು ಪ್ರೌಢಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು.
    ಹಗ್ಗಜಗ್ಗಾಟ, ಗುಂಪು ನೃತ್ಯ ಮತ್ತು ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮೂರು ವಿಭಾಗದಲ್ಲಿ ಮೂರು ಬಹುಮಾನ ಪಡೆದ ಕಳತ್ಮಾಡು ಲಯನ್ಸ್ ಪ್ರೌಢಶಾಲಾ ತಂಡ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಗೋಣಿಕೊಪ್ಪ ಅನುದಾನಿತ ಪ್ರೌಢಶಾಲೆ(ಪ್ರ), ಕಳತ್ಮಾಡು ಲಯನ್ಸ್ (ದ್ವಿ), ಅರ‌್ವತೊಕ್ಲು ಸರ್ವದೈವತಾ (ತೃ). ಗುಂಪು ನೃತ್ಯದಲ್ಲಿ ಲಯನ್ಸ್ (ಪ್ರ), ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ (ದ್ವಿ), ಸರ್ವದೈವತಾ (ತೃ), ವೇಷಭೂಷಣದಲ್ಲಿ ಲಯನ್ಸ್ (ಪ್ರ), ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ (ದ್ವಿ), ಸರ್ವದೈವತಾ (ತೃ)ಸ್ಥಾನ ಪಡೆದುಕೊಂಡಿತು.
    ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಚೆಪ್ಪುಡೀರ ಕಿರಣ್ ಅಪ್ಪಯ್ಯ ಮಾತನಾಡಿ, ತಂತ್ರಜ್ಞಾನದ ಬಳಕೆ ವಿದ್ಯಾಥಿಗಳ ಬೆಳವಣಿಗೆಗೆ ಪೂರಕವಾಗಿದ್ದು, ದುರ್ಬಳಕೆಯಾಗದಂತೆ ಎಚ್ಚರ ವಹಿಸಬೇಕಿದೆ. ಪ್ರತಿಭೆ ಅನಾವರಣಕ್ಕೆ ಹಿಂದೇಟು ಹಾಕಬಾರದು ಎಂದು ಸಲಹೆ ನೀಡಿದರು.

    ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ ಉದ್ಘಾಟಿಸಿದರು. ಕಾವೇರಿ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಕುಲ್ಲಚಂಡ ಪಿ. ಬೋಪಣ್ಣ, ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ, ಕಾಫಿ ಬೆಳೆಗಾರ ಕಾಳಪಂಡ ಬಿದ್ದಪ್ಪ, ಉದ್ಯಮಿ ಆದೇಂಗಡ ತನುಜಾ ಅಚ್ಚಯ್ಯ, ಸೌಮ್ಯಾ ನಾಗೇಶ್, ಮಾಯಮುಡಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಚಟ್ಟಂಡ ವಾಣಿ ನಾಚಪ್ಪ, ಸಂಚಾಲಕಿ ಎಂ. ಕೆ ಪದ್ಮಾ, ಪಿ. ಸಿ. ಬ್ರೈಟಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts