More

    ಕಲ್ಯಾಣದ ಬಿಕೆಡಿಬಿ ಸಭಾಭವನಕ್ಕೆ ವಾರದ ಹೆಸರಿಡಿ

    ಬಸವಲ್ಯಾಣ: ನಗರದ ರಥ ಮೈದಾನದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ(ಬಿಕೆಡಿಬಿ)ಯ ಸಭಾ ಭವನಕ್ಕೆ ಬಾಬಾಸಾಹೇಬ್ ವಾರದ ಅವರ ಹೆಸರು ನಾಮಕರಣ ಮಾಡಬೇಕು ಎಂದು ಇಲ್ಲಿಯ ಶ್ರೀ ಬಸವೇಶ್ವರ ನಂದಿ ಧ್ವಜ ಸೇವಾ ಸಮಿತಿಯಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

    ಶಾಸಕ ಶರಣು ಸಲಗರ ನೇತೃತ್ವದಲ್ಲಿ ಸಮಿತಿಯ ಪ್ರಮುಖರ ನಿಯೋಗದಿಂದ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಮನವಿ ಪತ್ರ ಸಲ್ಲಿಸಲಾಗಿದೆ. ಮನವಿಗೆ ಸಿಎಂ ಸ್ಪಂದಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.

    ಮಹಾರಾಷ್ಟ್ರದ ಸೊಲ್ಲಾಪುರದವರಾದ ಬಾಬಾಸಾಹೇಬ್ ವಾರದ ಅವರು ಅಂದು ಕಲ್ಯಾಣಕ್ಕೆ ಬಂದು ಇಲ್ಲಿಯ ಶರಣ ಸ್ಮಾರಕಗಳನ್ನು ಗುರುತಿಸಿ ಸಂರಕ್ಷಣೆಗೆ ಕಾಳಜಿ ವಹಿಸಿದ್ದರು. ಬಸವಣ್ಣನವರ ಹಾಗೂ ಶರಣರ ತತ್ವ ಪ್ರಸಾರಕ್ಕೆ ತಮ್ಮೆಲ್ಲ ಆಸ್ತಿ, ಅಂತಸ್ತು ವ್ಯಯಿಸಿದ ಮಹಾನುಭಾವರು.

    ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ರಚಿಸಿದ್ದರು. ಈ ಮೂಲಕ ಸಾಮಾಜಿಕ ಶೈಕ್ಷಣಿಕ, ಧಾರ್ಮಿಕ ಕೆಲಸ ಕಾರ್ಯಗಳಿಗೆ ಚಾಲನೆ ನೀಡಿದ್ದರು. ಕಲ್ಯಾಣವನ್ನು ಬಸವಕಲ್ಯಾಣ ಎಂದು ನಾಮಕರಣ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಸಫಲರಾಗಿದ್ದರು. ಅಂದು ಅವರು ಖರೀದಿಸಿದ ಭೂಮಿಯಲ್ಲಿಯೇ ಸದ್ಯದ ರಥ ಮೈದಾನವಿದೆ. ಇಲ್ಲಿ ಮಂಡಳಿಯಿಂದ ನಿರ್ಮಿಸಿರುವ ಸಭಾ ಭವನಕ್ಕೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ನಿಯೋಗ ಮನವಿ ಮಾಡಿದೆ.

    ಬಸವ ಜಯಂತಿ ನಿಮಿತ್ತ ಬಸವಕಲ್ಯಾಣದಲ್ಲಿ ನಡೆಯುವ ಮಹಾತ್ಮ ಬಸವೇಶ್ವರರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಮುಖ್ಯಂಂತ್ರಿಗಳಿಗೆ ನಿಯೋಗದಿಂದ ಆವ್ಹಾನ ಕೂಡ ನೀಡಲಾಯಿತು.

    ಸಮಿತಿಯ ಗುರುಪಾದಪ್ಪ ಖರುಣೆ, ಶಿವರಾಜ ಬಾಲಿಕಿಲೆ, ಮಲ್ಲಿಕಾಜರ್ುನ ವಾಂಜರಖೇಡೆ, ಸುಭಾಷ ಬಾವುಗೆ, ಕಲ್ಲಯ್ಯ ಸ್ವಾಮಿ, ಉಮೇಶ ಬಿಜಾಪುರೆ, ದಿಲೀಪ ಬುಡಗೆ, ಸಂಜು ಶಾಶೆಟ್ಟೆ, ಸಚಿನ ಪಾಟೀಲ್, ಸಾಗರ ಲಾಡ್, ಅನೀಲ ವಾಂಜರಖೇಡೆ, ರಾಜಪ್ಪ ಶೀಲವಂತ, ಸಂಗಯ್ಯ ಕಟಗಿಮಠ, ಕಿರಣ ಬುಡಗೆ ನಿಯೋಗದಲ್ಲಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಪ್ರಮುಖರಾದ ರಾಜಕುಮಾರ ಸಿಗರ್ಾಪುರ, ಸುನೀಲ ರಾಯವಾಡೆ, ಲಿಂಗರಾಜ ಶಾಶೆಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts