More

    ಕಲಬುರಗಿಗೆ ಕಿತ್ತೂರು ರಾಣಿ ಚೆನ್ನಮ್ಮನ ಜ್ಯೋತಿ ಯಾತ್ರೆ ಆಗಮನ

    ಕಲಬುರಗಿ: ಇದೇ ಅಕ್ಟೋಬರ್ 23 ರಿಂದ‌ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಈ ಬಾರಿ ರಾಜ್ಯ ಮಟ್ಟದ ಉತ್ಸವವಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕಳೆದ ಅ.2 ರಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಬೆಂಗಳೂರಿನಲ್ಲಿ ಚಾಲನೆಗೊಂಡು ವಿವಿಧ ಜಿಲ್ಲೆಗಳಲ್ಲಿ‌ ಸಂಚರಿಸಿ ಮಂಗಳವಾರ ಸಂಜೆ ಯಾದಗಿರಿ ಜಿಲ್ಲೆ ಮೂಲಕ ಕಿತ್ತೂರು ರಾಣಿ ಚೆನ್ನಮ್ಮನ ಜ್ಯೋತಿ ಯಾತ್ರೆಯ ರಥ ಕಲಬುರಗಿ ಜಿಲ್ಲೆಗೆ ಅಗಮಿಸಿದೆ.

    ಕಿತ್ತೂರು ಉತ್ಸವಕ್ಕೆ‌ ಸರ್ವರನ್ನು ಸ್ವಾಗತಿಸುವ ಈ ವೀರ ಜ್ಯೋತಿ ಯಾತ್ರೆಯ ರಥಕ್ಕೆ ಚಿತ್ತಾಪೂರ ತಾಲೂಕಿನ ನಾಲವಾರದಲ್ಲಿ ತಹಶೀಲ್ದಾರು, ಕಲಬುರಗಿ ತಾಲೂಕಿನ ನಂದೂರು ಗ್ರಾಮದಲ್ಲಿ ಜಿಲ್ಲಾಡಳಿತದಿಂದ ತಹಶೀಲ್ದಾರ ಮಹಾಂತೇಷ ಮುಡಬಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ‌ ನಿರ್ದೇಶಕ ದತ್ತಪ್ಪ ಸಾಗನೂರ ಅವರು ಪೂಜೆ ಸಲ್ಲಿಸುವ‌ ಮೂಲಕ ಜಿಲ್ಲೆಗೆ ಬರಮಾಡಿಕೊಂಡರು.

    ಈ ವಿಜಯ ಜ್ಯೋತಿ ರಥ ಅ.14 ರಂದು ಬೆಳಗ್ಗೆ 8 ಗಂಟೆಗೆ ಕಲಬುರಗಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮೆರವಣಿಗೆ ಮೂಲಕ ಕಮಲಾಪೂರ ಮಾರ್ಗವಾಗಿ ಬೀದರ ಜಿಲ್ಲೆಗೆ ಪ್ರಯಾಣಿಸಲಿದೆ. ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಗೌರವಯುತವಾಗಿ ರಥಕ್ಕೆ‌ ಜಿಲ್ಲೆಯಲ್ಲಿ ಬೀಳ್ಕೊಡಲಿದ್ದಾರೆ.

    ವಿಜಯ ರಥವು ಮುಂದೆ ಬೀದರ, ವಿಜಯಪುರ, ಬಾಗಲಕೋಟೆ ಮಾರ್ಗವಾಗಿ ಬೆಳಗಾವಿ ಜಿಲ್ಲೆಗೆ ಅ.23ಕ್ಕೆ ತಲುಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts