More

    ಕರೊನಾ ಹೋರಾಟಕ್ಕೆ ಖಾಸಗಿ ವೈದ್ಯರು ಕೈಜೋಡಿಸಿ

    ಔರಾದ್: ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಜತೆ ಖಾಸಗಿ ವೈದ್ಯರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಹೇಳಿದರು.
    ಕರೊನಾ ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತು ಶನಿವಾರ ತಹಸಿಲ್ ಕಚೇರಿಯಲ್ಲಿ ಖಾಸಗಿ ವೈದ್ಯರು ಹಾಗೂ ಮೆಡಿಕಲ್ ಅಂಗಡಿ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ಈಗ ಆರೋಗ್ಯ ತುತರ್ು ಪರಿಸ್ಥಿತಿ. ಒಗ್ಗಟ್ಟಿನಿಂದ ಕರೊನಾ ವಿರುದ್ಧ ನಡೆದಿರುವ ಹೋರಾಟಕ್ಕೆ ಖಾಸಗಿ ಆಸ್ಪತ್ರೆ ವೈದ್ಯರು ಸಹ ಸಹಕಾರ ನೀಡಬೇಕು ಎಂದು ಕೋರಿದರು.
    ತಾಲೂಕಿನ ವಿವಿಧೆಡೆ ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿದ್ದು ಕಂಡುಬಂದಿದೆ. ಮುಚ್ಚಿರುವ ಖಾಸಗಿ ಆಸ್ಪತ್ರೆಗಳು ತೆರೆಯಬೇಕು. ತುರ್ತು ಸಂದರ್ಭದಲ್ಲಿ ಖಾಸಗಿ ವೈದ್ಯರು ಮನೆಯಲ್ಲಿ ಕುಳಿತುಕೊಳ್ಳದೆ ಜನರ ಕಷ್ಟದಲ್ಲಿ ಭಾಗಿಯಾಗಬೇಕು. ಖಾಸಗಿ ಆಸ್ಪತ್ರೆಗಳು ಬಂದ್ ಮಾಡಿದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಸಿ ಮುಟ್ಟಿಸಿದರು.
    ಡಿಎಚ್ಒ ಡಾ.ವಿ.ಜಿ. ರೆಡ್ಡಿ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಪ್ರಾರಂಭಿಸಬೇಕು. ಹೊರ ರೋಗಿಗಳ ತಪಾಸಣೆ ಮಾಡಿ ಅವುಗಳ ವರದಿ ನೀಡಬೇಕು. ಯಾವುದೇ ಕಾರಣಕ್ಕೂ ಕ್ಲಿನಿಕ್ ಬಂದ್ ಮಾಡಬೇಡಿ ಎಂದರು. ಸಹಾಯಕ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿ, ಮಹಾರಾಷ್ಟ್ರ, ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಔರಾದ್ಗೆ ಅನೇಕ ಜನರು ಹೊರಗಿನಿಂದ ಬರುತ್ತಿದ್ದು, ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಬೇಕು. ಖಾಸಗಿ ಆಸ್ಪತ್ರೆ ವೈದ್ಯರು ಯಾವ ಕಾರಣಕ್ಕೂ ಆಸ್ಪತ್ರೆ ಬಂದ್ ಮಾಡಬಾರದು. ಒಂದು ವೇಳೆ ನಿರ್ಲಕ್ಷೃ ಮಾಡಿದರೆ ಆಸ್ಪತ್ರೆ ಅನುಮತಿ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದರು.
    ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್ ಮಾತನಾಡಿದರು. ತಹಸೀಲ್ದಾರ್ ಎಂ.ಚಂದ್ರಶೇಖರರಾವ, ತಾಪಂ ಇಒ ಮಾಣಿಕರಾವ ಪಾಟೀಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಾಂದ್ ಪಟೇಲ್, ಟಿಎಚ್ಒ ಡಾ.ಶರಣಯ್ಯ ಸ್ವಾಮಿ, ಡಾ.ಮಹೇಶ ಬಿರಾದಾರ, ಅನೀತಾ ಬಿರಾದಾರ, ತಾಪಂ ಸಹಾಯಕ ಯೋಜನಾಧಿಕಾರಿ ಶಿವಕುಮಾರ ಘಾಟೆ, ಕ್ರಾಂತಿಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts