More

    ಕರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ಅವಶ್ಯ

    ಯಾದಗಿರಿ: ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗ ಕರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯವಾಗಿದೆ ಎಂದು ಬಾಗಲಕೋಟೆ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ.ರೇವಣಪ್ಪ ಸಲಹೆ ನೀಡಿದರು.

    ಶಿಕ್ಷಣ ಘಟಕದ ಕಚೇರಿಯಲ್ಲಿ ರೈತರಿಗೆ ಚಿಯಾ ಬೇಸಾಯ ಕುರಿತ ಆನ್ಲೈನ್ ತರಬೇತಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚಿಯಾ ಬೆಳೆ ಚಳಿಗಾಲದಲ್ಲಿ ಬೆಳೆಯಲು ಸೂಕ್ತ. ಈ ಬೆಳಯನ್ನು ಎಲ್ಲ ತರಹದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಅತ್ಯಂತ ಕಡಿಮೆ ಖರ್ಚು, ಕಡಿಮೆ ನೀರು, ಕಡಿಮೆ ಶ್ರಮ, ಕಡಿಮೆ ಅವಧಿ (4 ತಿಂಗಳು) ಹಾಗೂ ಕಡಿಮೆ ಕುಶಲತೆಯಿಂದ ಬೆಳೆದು ಹೆಚ್ಚಿನ ಲಾಭ ಪಡೆಯಬಹುದಾಗಿದೆ ಎಂದರು.

    ಯಾವ ಕಾರಣಕ್ಕೂ ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳನ್ನು ಉಪಯೋಗಿಸಬಾರದು. ಈ ಬೆಳೆಯಲ್ಲಿ ಯಾವುದೇ ನಾಮಾಂಕಿತ ತಳಿಗಳು ಅಭಿವೃದ್ದಿಗೊಂಡಿಲ್ಲವಾದರೂ ವಿವಿಧ ಬಣ್ಣದ (ಬಿಳಿ, ಕಪ್ಪು, ಕಂದು, ತಿಳಿಹಸಿರು) ಬೀಜಗಳು ಲಭ್ಯ. ಅಲ್ಲದೆ ಬಿಳಿ ಬಣ್ಣದ ಬೀಜಗಳಿಗೆ ಹೆಚ್ಚಿನ ಬೇಡಿಕೆ ಇದೆ. ಚಿಯಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದೇಹಕ್ಕೆ ಬೇಕಾದ ವಿಟಮಿನ್ಗಳು, ಆಂಟಿ ಆಕ್ಸಿಡೆಂಟ್ಸಗಳು ಹಾಗೂ ಲವಣಗಳನ್ನು ಹೊಂದಿದೆ ಎಂದು ವಿವರಿಸಿದರು.ಒಮೆಗಾ-3 ಹಾಗೂ ಒಮೆಗಾ-6 ಕೊಬ್ಬಿನಾಂಶಗಳು ಮಾಂಸಹಾರದಲ್ಲಿ ಮಾತ್ರ ಲಭ್ಯವಿದ್ದು ಹೇರಳವಾಗಿ ದೊರೆಯುವ ಸಸ್ಯದ ಮೂಲ ಅಂದ್ರೆ ಚಿಯಾ. ಚಿಯಾ ಬೆಳೆಯನ್ನು ಅದರ ಬೀಜಗಳಿಗಾಗಿ ಬೆಳೆಯಲಾಗುತ್ತಿದೆ. ಈ ಬೀಜಗಳನ್ನು ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಮೆಕ್ಸಿಕೊ ದೇಶದ ಚಿಯಾ ಬೆಳೆಯು ಭಾರತದಲ್ಲೂ ಕೂಡ ವಾಣಿಜ್ಯ ಬೆಳೆಯಾಗಿ ಮಾಪರ್ಾಡಾಗುತ್ತಿದೆ ಎಂದು ತಿಳಿಸಿದರು.

    ಒಮೆಗಾ-3 ಹಾಗೂ ಒಮೆಗಾ-6 ಕೊಬ್ಬಿನಾಂಶಗಳು ಮಾಂಸಹಾರದಲ್ಲಿ ಮಾತ್ರ ಲಭ್ಯವಿದ್ದು ಹೇರಳವಾಗಿ ದೊರೆಯುವ ಸಸ್ಯದ ಮೂಲ ಅಂದ್ರೆ ಚಿಯಾ. ಚಿಯಾ ಬೆಳೆಯನ್ನು ಅದರ ಬೀಜಗಳಿಗಾಗಿ ಬೆಳೆಯಲಾಗುತ್ತಿದೆ. ಈ ಬೀಜಗಳನ್ನು ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಮೆಕ್ಸಿಕೊ ದೇಶದ ಚಿಯಾ ಬೆಳೆಯು ಭಾರತದಲ್ಲೂ ಕೂಡ ವಾಣಿಜ್ಯ ಬೆಳೆಯಾಗಿ ಮಾರ್ಪಾಡಾಗುತ್ತಿದೆ ಎಂದು ತಿಳಿಸಿದರು.

    ಸಂಪನ್ಮೂಲವ್ಯಕ್ತಿ ಡಾ. ಶ್ರೀಪಾದ ವಿಶ್ವೇಶ್ವರ, ಡಾ.ಪ್ರಶಾಂತ ಸೇರಿದಂತೆ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts