More

    ಕರೊನಾ ಸೋಂಕಿತರ ಮನೆ ಸೀಲ್​ಡೌನ್

    ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಇದುವರೆಗೆ 13 ಕರೊನಾ ಸೋಂಕಿತರು ಕಂಡು ಬಂದಿದ್ದಾರೆ. ಸ್ಥಳೀಯ ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಸಹಾಯಕಿಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನೇತೃತ್ವದಲ್ಲಿ ಬುಧವಾರ ಸೋಂಕಿತರ ಮನೆಗಳ ಮುಂದೆ ಮುಳ್ಳಿನ ಕಂಟಿಗಳಿಂದ ಬೇಲಿ ಹಾಕಿ ಸೀಲ್​ಡೌನ್ ಮಾಡಲಾಯಿತು.

    ಸಮೀಪದ ಹನುಮನಕೊಪ್ಪದಲ್ಲಿ 1, ಸೈಬನಕೊಪ್ಪದಲ್ಲಿ 1 ಹಾಗೂ ಉಪ್ಪಿನಬೆಟಗೇರಿಯಲ್ಲಿ 11 ಕರೊನಾ ಪಾಸಿಟಿವ್ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಅಧಿಕೃತವಾಗಿ ಧೃಢಿಕರಿಸಿದೆ.

    ಸೋಂಕಿತರ ಓಡಾಟ:

    ಕರೊನಾ ಪಾಸಿಟಿವ್ ಬಂದವರಲ್ಲಿ ಕೆಲವರು ಹೋಂ ಕ್ವಾರಂಟೈನ್ ಆಗಿದ್ದಾರೆ. ಅವರಲ್ಲಿ ಒಂದಿಬ್ಬರು ನಿರಾತಂಕವಾಗಿ ತಿರುಗಾಡುತ್ತಿದ್ದು, ಸುತ್ತಲಿನ ಜನರಲ್ಲಿ ಭಯ ಹುಟ್ಟಿಸುವಂತಾಗಿದೆ. ಸೈಬನಕೊಪ್ಪದಲ್ಲಿ ಸೋಂಕಿತ ವ್ಯಕ್ತಿಯ ಮನೆಗೆ ಮಾಹಿತಿ ಪಡೆಯಲು ಹೋದ ಆಶಾ ಕಾರ್ಯಕರ್ತೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಈ ಕುರಿತಂತೆ ಆಶಾ ಕಾರ್ಯಕರ್ತೆಯರು ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಬೆಳಗ್ಗೆ ಜರುಗಿದ ಟಾಸ್ಕ್​ಫೋರ್ಸ್ ಸಭೆಯಲ್ಲಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಆಶಾ ಕಾರ್ಯಕರ್ತೆಯರಿಗೆ ಧೈರ್ಯ ತುಂಬಿದ ಅಧಿಕಾರಿಗಳು ಹಾಗೂ ಪೊಲೀಸರು ಕೆಲಸ ನಿರ್ವಹಿಸುವ ವೇಳೆ ಯಾರಾದರೂ ತೊಂದರೆ ನೀಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts