More

    ಕರೊನಾ ಸೇನಾನಿಗಳ ಸೇವೆ ಶ್ಲಾಘನೀಯ

    ಬೋರಗಾಂವ: ಕರೊನಾ ಸಂಕಷ್ಟದ ದಿನಗಳಲ್ಲಿ ತಮ್ಮ ವೈಯಕ್ತಿಕ ಸುಖ, ಸಂತೋಷ ಪಕ್ಕಕ್ಕಿಟ್ಟು ಜನರಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಕರೊನಾ ಸೇನಾನಿಗಳ ಸೇವೆ ಶ್ಲಾಘನೀಯ ಎಂದು ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ, ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಅರಿಹಂತ ಉದ್ಯೋಗ ಸಮೂಹ ವತಿಯಿಂದ 72 ಕರೊನಾ ಸೇನಾನಿಗಳಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ನಿಪ್ಪಾಣಿ ತಾಲೂಕಿನಲ್ಲಿ ದಿನೇ ದಿನೆ ಕರೊನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅರಿಹಂತ ವತಿಯಿಂದ ಕೋವಿಡ್ ಸೆಂಟರ್ ಸ್ಥಾಪಿಸಲು ತಾಲೂಕಾಡಳಿತದ ಗಮನಕ್ಕೆ ತರಲಾಗಿತ್ತು. ಜಿಲ್ಲಾಡಳಿತ ಗಮನಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ನಾಗರಿಕರು ಕೂಡ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುತ್ತ ಮನೆಯಲ್ಲೇ ಸುರಕ್ಷಿತರಾಗಿರಬೇಕು ಎಂದರು.

    ಆರೋಗ್ಯಾಧಿಕಾರಿ, ಸಿಬ್ಬಂದಿ, ಅಂಗನವಾಡಿ, ಆಶಾ, ಪೊಲೀಸರು, ಪೌರ ಕಾರ್ಮಿಕರು ಹಾಗೂ ಪಪಂ ಕಾರ್ಮಿಕರು ನಿರಂತರ ಶ್ರಮಿಸುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಿ ನಮ್ಮನ್ನು ರಕ್ಷಿಸುತ್ತಿರುವ ಸೇನಾನಿಗಳ ಕಾರ್ಯ ಶ್ಲಾಘನೀಯ ಎಂದರು. ಉದ್ಯಮಿ ಅಭಿನಂದನ ಪಾಟೀಲ ಮಾತನಾಡಿ, ಕರೊನಾ ಸೇನಾನಿಗಳನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಬೋರಗಾಂವ ಪಟ್ಟಣದಲ್ಲಿ ಆರೋಗ್ಯ ವಿಭಾಗದಿಂದ ಲಸಿಕೆ ನೀಡಲಾಗುತ್ತಿದ್ದು, ಕ್ರಮೇಣವಾಗಿ ಎಲ್ಲರೂ ಲಸಿಕೆ ಪಡೆಯಬೇಕು ಎಂದರು. ಅರಿಹಂತ ಸಂಸ್ಥೆ ಉಪಾಧ್ಯಕ್ಷ ಸುಭಾಷ ಶೆಟ್ಟಿ, ಅನುರಾಗ ಪಾಟೀಲ, ಪಪಂ ಅಧ್ಯಕ್ಷ ಸಂಗಪ್ಪ ಐದಮಾಳೆ, ಸದಸ್ಯ ಪ್ರದೀಪ ಮಾಳಿ, ಅಭಯಕುಮಾರ ಮಗದುಮ್ಮ, ಫಾರೂಕ್ ಮುಜಾವರ, ಮಾಣಿಕ ಕುಂಬಾರ, ಬಾಹುಬಲಿ ಸೋಬಾನೆ, ಅಭಯಕುಮಾರ ಕರೋಲೆ, ರಾಜು ಮಗದುಮ್ಮ, ಸತೀಶ ಪಾಟೀಲ, ದಿಗಂಬರ ಕಾಂಬಳೆ, ಜನರಲ್ ಮ್ಯಾನೇಜರ್ ಅಶೋಕ ಬಂಕಾಪುರೆ, ಪ್ರಕಾಶ ಜಂಗಟೆ, ಬಾಬಾಸಾಬ ವಠಾರೆ, ಅನಿಲ ಗುರವ, ಆರ್.ಟಿ.ಚೌಗುಲಾ, ಸುಮಿತ್ ರೊಡ್ಡ, ದರ್ಶನ ಪಾಟೀಲ, ರಾಕೇಶ ಫಿರಗಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts