More

    ಕರೊನಾ ವಿರುದ್ಧ ಲಸಿಕೆ,ಕೇಂದ್ರಕ್ಕೆ ಶೀಘ್ರ ರಾಜ್ಯದಿಂದ ಪಟ್ಟಿ ಶಿಕ್ಷಣ,ತಂತ್ರಜ್ಞಾನ,ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡಕ್ಕೆ ಸ್ಥಾನ

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಏಕೀಕೃತ ಕರ್ನಾಟಕದ ಸಂಭ್ರಮವನ್ನು ನವೆಂಬರ್ 1ರಂದು ಆಚರಿಸದೇ,ಈ ನಮ್ಮ ಕನ್ನಡ ಹಬ್ಬ ನಿತ್ಯೋತ್ಸವ ಆಗ ಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಪೊಲೀಸ್ ಕವಾಯಿತು ಮೈದಾನದಲ್ಲಿ 65ನೇ ಕನ್ನಡ ರಾಜ್ಯೋ ತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ,ಕರ್ನಾಟಕ ಏಕೀಕರಣ ಹೋರಾಟಕ್ಕೆ ಚಿತ್ರದುರ್ಗದ ನಂಟಿದೆ.
    ರಾಷ್ಟ ನಾಯಕ ಎಸ್.ನಿಜಲಿಂಗಪ್ಪ,ಹುಲ್ಲೂರು ಶ್ರೀನಿವಾಸ ಜೋಯಿಸರು,ಆರ್.ಎಚ್.ದೇಶಪಾಂಡೆ,ಬಿಎಂಶ್ರೀ,ಬೆಳಗಲ್ ರಾಮರಾ ಯರು,ಹೊನ್ನಾಪುರಮಠ,ಡ್ಯೆಪುಟಿ ಚೆನ್ನಬಸಪ್ಪ,ಆಲೂರು ವೆಂಕಟರಾಯರು,ಕುವೆಂಪು,ಯು.ರಾಮರಾವ್,ಹರ್ಡೆಕರ್ ಮಂಜಪ್ಪ, ಕಾರ್ನಾಡ್ ಸದಶಿವರಾವ್ ಮೊದಲಾದ ತಂದೆತಾಯಿಂದರ ಹೋರಾಟದ ಫಲವಾಗಿ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕ ನ್ನಡ ನಾಡು ಒಂದಾಗಿದೆ.
    1946ರಲ್ಲಿ ಸಂಪುಟದಲ್ಲಿ ಸ್ಥಾನ ಕೊಡುವುದಾಗಿ ಅಂದಿನ ಪ್ರಧಾನಿ ನೆಹರು ಹೇಳಿದ್ದರೂ ಅದನ್ನು ತಿರಸ್ಕರಿಸಿದ್ದ,ಅಖಿಲ ಕರ್ನಾಟಕ ಏಕೀಕರಣ ಪರಿಷತ್ ರುವಾರಿ ಎಸ್.ನಿಜಲಿಂಗಪ್ಪ,1956ರಲ್ಲಿ ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿದ್ದರೆಂದು ಸ್ಮರಿಸಿದರು. ಕನ್ನಡ ನಾಡು-ನುಡಿಗೆ ಅನೇಕ ಬರಹಗಾರರು,ಜನಸಾಮನ್ಯರ ಹೋರಾಟದ ಫಲವಾಗಿ ನಾವು ರಾಜ್ಯೋತ್ಸವದ ಆಚರಣೆಗೆ ಕಾರಣವಾಗಿದೆ. ಇಂದಿನ ಗತ ವೈಭವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಹೊಣೆ ನಮ್ಮೆಲ್ಲರ ಮೇಲಿದೆ,ನವ ಕರ್ನಾಟಕದ ಉದಯದ ಬಳಿಕ ರಾಜ್ಯಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
    ಇದೇ ವೇಳೆ ಸಚಿವರು ಜಿಲ್ಲಾಡಳಿತ ಆಯ್ಕೆ ಮಾಡಿದ್ದ ವಿವಿಧ ಕ್ಷೇತ್ರಗಳ ಸಾಧಕರು,ಬೆಳೆ ಸಮೀಕ್ಷೆಯಲ್ಲಿ ಸಾಧನೆ ಮಾಡಿದವರನ್ನು ಗೌರವಿಸಿದರು. ಆರೋಗ್ಯ ಕಾರ‌್ಯಕರ್ತೆಯರು ಕರೊನಾ ವಿರುದ್ಧ ಜಾಗೃತಿ ಕುರಿತ ಕಿರು ನಾಟಕ ಪ್ರದರ್ಶಿಸಿದರು. ಶಾಸಕ ಜಿ.ಎಚ್.ತಿಪ್ಪಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು,ಸಿಇಒ ಟಿ.ಯೋಗೇಶ್,ಡಿಸಿ ಕವಿತಾ ಎಸ್.ಮನ್ನಿಕೇರಿ,ಎಸ್ಪಿ ಜಿ. ರಾಧಿಕಾ,ಎಡಿಸಿ ಸಿ.ಸಂಗಪ್ಪ, ಎಎಸ್ಪಿ ಎಂ.ಬಿ.ನಂದಗಾವಿ,ಎಸಿ ವಿ.ಪ್ರಸನ್ನ, ಕುಡಾ ಅಧ್ಯಕ್ಷ ಟಿ.ಬದ್ರಿನಾಥ್,ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಸದಾಶಿವ,ನಗರಸಭೆ ಆಯುಕ್ತ ಜೆ.ಟಿ.ಹನುಮಂತರಾಜು,ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಸೇರಿದಂತೆ ನಾನಾ ಇಲಾಖೆ ಅಧಿಕಾರಿ,ಸಿಬ್ಬಂದಿ ಇದ್ದರು.
    ಪ್ರಧಾನಿ ಹಾರೈಕೆಗೆ ಹರ್ಷ

    ಸುದ್ದಿಗಾರರ ಜತೆ ಮಾತನಾಡಿದ ಸಚಿವ ಶ್ರೀರಾಮುಲು,ರಾಜ್ಯೋತ್ಸವ ಶುಭಾಶಯಗಳನ್ನು ತಿಳಿಸುವ ಸಂದರ್ಭದಲ್ಲಿ ಕರ್ನಾಟಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗೆ ಹರ್ಷ ವ್ಯಕ್ತಪಡಿಸಿದರು. ಕಲಬುರಗಿಯಲ್ಲಿ ನಡೆದ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು,ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ, ತಂತ್ರಜ್ಞಾನದಲ್ಲಿ ಕನ್ನಡದ ಅಳವಡಿಕೆ ಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಸರ್ಕಾರ ಬದ್ಧವಾಗಿದೆ. ಕಲ್ಯಾಣ ಕರ್ನಾಟಕಕ್ಕೆ ರಾಜ್ಯಸರ್ಕಾರ 3ಸಾವಿರ ಕೋಟಿ ರೂ. ಅನುದಾನ ತೆಗೆದಿರಿಸಿದೆ. ಸಿಎಂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಕೇಂದ್ರದ ಎಸ್‌ಒಪಿಯಂತೆ ಕೊರನಾ ವಿರುದ್ಧ ಆದ್ಯತೆ ಮೇರೆಗೆ ಲಸಿಕೆ ಹಂಚಿಕೆ ಕುರಿತಂತೆ ಕೇಂದ್ರಕ್ಕೆ ರಾಜ್ಯಸರ್ಕಾರ ಶೀಘ್ರಪಟ್ಟಿ ಕಳಿಸಿಕೊಡಲಿದೆ,ಜಿಲ್ಲಾಡಳಿತವೂ ಸಜ್ಜಾಗುತ್ತಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts