More

    ಕರೊನಾ ಪಾಸಿಟಿವ್ ಪ್ರಕರಣ 300ರ ಆಸುಪಾಸು

    ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 297 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಪೀಡಿತರ ಸಂಖ್ಯೆ 12,460ಕ್ಕೆ ಏರಿದೆ. ಇದುವರೆಗೆ 9393 ಜನ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2711 ಪ್ರಕರಣಗಳು ಸಕ್ರಿಯವಾಗಿವೆ. 72 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 356 ಜನ ಮೃತಪಟ್ಟಿದ್ದಾರೆ.

    ಶುಕ್ರವಾರದ ಪ್ರಯೋಗಾಲಯ ವರದಿಯಲ್ಲಿ ಧಾರವಾಡ ಶಹರ ಹಾಗೂ ಗ್ರಾಮೀಣ ತಾಲೂಕು ಸೇರಿ 69 ಸ್ಥಳಗಳಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕುಗಳಲ್ಲಿ ಕರೊನಾ ಪ್ರಕರಣ ಏರುಗತಿಯಲ್ಲಿ ಸಾಗುತ್ತಿದ್ದು, ಶುಕ್ರವಾರ 75 ಜನರಲ್ಲಿ ಸೋಂಕು ಪತ್ತೆಯಾಗಿದೆ.

    ಕಲಘಟಗಿ ತಾಲೂಕಿನ ಗಂಜಿಗಟ್ಟಿ, ಶಿಂಗಟ್ಟಿ, ಹುಲಕೊಪ್ಪ, ಹೊನ್ನಳ್ಳಿ ಗ್ರಾಮ; ನವಲಗುಂದ ತಾಲೂಕಿನ ಶಿರೂರ, ಬಸವೇಶ್ವರನಗರ; ಕುಂದಗೋಳ ತಾಲೂಕಿನ ಕೊಂಕಣ ಕುರಹಟ್ಟಿ, ಪಶುಪತಿಹಾಳ ಗ್ರಾಮದ ವಾಲ್ಮೀಕಿ ಓಣಿ, ಕುಂದಗೋಳ ಕಾಳಿದಾಸ ನಗರ, ಹೊಸಕಟ್ಟಿಯಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

    ಕರೊನಾದಿಂದ ತಂದೆ-ಮಗ ಸಾವು?

    ಧಾರವಾಡ: ಕರೊನಾದಿಂದ ತಂದೆ, ಮಗ ಒಂದೇ ದಿನ ಮೃತಪಟ್ಟ ಘಟನೆ ನಗರದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.

    ನಗರದ ವ್ಯಾಪಾರಸ್ಥರ ಕುಟುಂಬವೊಂದರಲ್ಲಿ ಕೆಲ ದಿನಗಳ ಹಿಂದೆ ತಂದೆ ಮತ್ತು ಮಗನಿಗೆ ಕರೊನಾ ಸೋಂಕು ಅಂಟಿತ್ತು. ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಬೆಳಗ್ಗೆ ತಂದೆ ಮೃತಪಟ್ಟರು. ಅಂತ್ಯಕ್ರಿಯೆ ಮುಗಿದ ಕೆಲವೇ ಸಮಯದಲ್ಲಿ ಮಗನ ಸಾವಿನ ಸುದ್ದಿ ಬಂದಿತು ಎಂದು ಕೇಳಿಬಂದಿದೆ. ನಗರದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಷಯದಲ್ಲಿ ಸ್ಪಷ್ಟತೆ ಇಲ್ಲವಾದರೂ, ಕರೊನಾ ಎಂತೆಂಥ ಸಂಕಟ-ಶೋಕಗಳನ್ನು ತರುತ್ತದೆಯೋ ಎಂಬ ಆತಂಕ ಉಂಟಾಗಿದೆ.

    ಕರೊನಾ ಭೀತಿ, ವೃದ್ಧ ಆತ್ಮಹತ್ಯೆ

    ಅಣ್ಣಿಗೇರಿ: ಕರೊನಾ ವೈರಸ್ ತಗುಲಿದೆ ಎಂಬುದನ್ನು ಮನಸ್ಸಿಗೆ ಹಚ್ಚಿಕೊಂಡ ವೃದ್ಧನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದುಂದೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಕಲ್ಲನಗೌಡ ಹನಮಂತಗೌಡ ಕಡಪಟ್ಟಿ (68) ನೇಣಿಗೆ ಶರಣಾದವ. ಈ ಕುರಿತು ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಠಾಣಾಧಿಕಾರಿ ಎಲ್.ಕೆ. ಜೂಲಕಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts