More

    ಕರೊನಾ ನಿರ್ವಹಣೆಗೆ ಸಂಘಟಿತ ಪ್ರಯತ್ನ ನಡೆಸಿ

    ಬೀದರ್: ಕಾರ್ಯಪಡೆ ಮಾದರಿ ಚಟುವಟಿಕೆ ಮತ್ತು ಸಂಘಟಿತ ಪ್ರಯತ್ನ ನಡೆಸಿದಲ್ಲಿ ಕರೊನಾ ನಿರ್ವಹಣೆ ಇನ್ನಷ್ಟು ಸರಳವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್​ ವಿನ್ಸೆಂಟ್ ಡಿಸೋಜಾ ಹೇಳಿದರು.
    ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಕರೊನಾ ಸೋಂಕಿತರಿಗೆ ಬ್ರಿಮ್ಸ ನಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಕೋವಿಡ್ ಕೇರ್ ಸೆಂಟರ್​ನಲ್ಲಿ ಇರುವವರಿಗೆ ಉತ್ತಮ ರೀತಿಯ ಆಹಾರ ಮತ್ತು ಚಿಕಿತ್ಸೆ ಲಭ್ಯವಾಗುತ್ತಿದೆ ಎಂಬ ಮಾಹಿತಿ ಜನತೆಗೆ ತಿಳಿಸಿ ವಿಶ್ವಾಸ ಮೂಡುವಂತಾಗಬೇಕು ಎಂದರು.
    ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಮಾತನಾಡಿ, ಈಗಾಗಲೇ 61 ವೆಂಟಿಲೇಟರ್ಸ್​ ಮತ್ತು ಅಗತ್ಯಕ್ಕೆ ತಕ್ಕಂತೆ ಐಸಿಯು ಅಳವಡಿಕೆ ಜತೆಗೆ ಜಿಲ್ಲೆಯ ನಿಗದಿತ ಕರೊನಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 12ರವರೆಗೆ ದೃಢಪಟ್ಟ 3151 ಸೋಂಕಿತ ಪ್ರಕರಣಗಳ ಪೈಕಿ 2182 ಜನರು ಚೇತರಿಸಿಕೊಂಡಿದ್ದಾರೆ. 55,157 ಜನರ ಗಂಟಲ ದ್ರವ ಪರೀಕ್ಷೆ ನಡೆಸಿದ ಪೈಕಿ 51,288 ಜನರ ವರದಿ ನೆಗಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.
    ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡುವ ನಿಟ್ಟಿನಲ್ಲಿ 15 ಹೈ ಫ್ಲೋ ಆಕ್ಸಿಜೆನ್ ಯಂತ್ರ ಅಳವಡಿಸಲಾಗುತ್ತಿದೆ. ಹಳೆಯ ಬೋಧಕ ಆಸ್ಪತ್ರೆ ಕಟ್ಟಡವನ್ನು ಅಗತ್ಯಕ್ಕೆ ಅನುಗುಣ ನವೀಕರಣಗೊಳಿಸಿ ಸಂಪೂರ್ಣ ಕೋವಿಡ್-19 ಆಸ್ಪತ್ರೆಯನ್ನಾಗಿ ಮಾಡಿ 550 ಹಾಸಿಗೆಗಳ ಸಾಮಥ್ರ್ಯದಂತೆ ಮಾರ್ಪಾಡು ಮಾಡಲಾಗುತ್ತಿದೆ ಎಂದು ತಿಳಿಸಿದರು.
    ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸ್ಪಿ ಡಿ.ಎಲ್. ನಾಗೇಶ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಭಂವರಸಿಂಗ್ ಮೀನಾ, ಬ್ರಿಮ್ಸ್ ನಿದರ್ೇಶಕ ಡಾ.ಶಿವಕುಮಾರ, ಜಿಲ್ಲಾ ಕಣ್ಗಾವಲು ಘಟಕದ ಅಧಿಕಾರಿ ಡಾ.ಕೃಷ್ಣಾರಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರತಿಕಾಂತ ಸ್ವಾಮಿ, ವೈದ್ಯಕೀಯ ಅಧೀಕ್ಷಕ ವಿಜಯಕುಮಾರ ಅಂತಪ್ಪನವರ್ ಇತರರಿದ್ದರು. ಈ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕರೊನಾ ಸ್ಥಿತಿಗತಿ ಬಗ್ಗೆ ತಾಲೂಕುವಾರು ಸಮಗ್ರ ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts