More

    ಕರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ಕೆಲಸ ಅವಶ್ಯ

    ಸೇಡಂ: ಕರೊನಾ ನಿಯಂತ್ರಣಕ್ಕಾಗಿ ನಾವೆಲ್ಲರೂ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಸರ್ಕಾರದಿಂದ ಬರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ ತಾಕೀತು ಮಾಡಿದರು.
    ತಹಸಿಲ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್, ಕಂಟೇನ್ಮೆಂಟ್ ಜೋನ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೂ 55 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಬಹುತೇಕರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 17 ಕಂಟೇನ್ಮೆಂಟ್ ಜೋನ್ ನಿರ್ಮಿ ಸಲಾಗಿದ್ದು, ನೋಡಲ್ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು. ಸೆಕ್ಟ್ರಲ್ ಮ್ಯಾಜಿಸ್ಟ್ರೇಟ್ಗಳು ದಿನಕ್ಕೆ 2 ಗ್ರಾಮಕ್ಕಾದರೂ ಭೇಟಿ ನೀಡಿ ಕರೊನಾ ಬಗ್ಗೆ ಜಾಗೃತಿ ಮೂಡಿಸಬೇಕು. ಕ್ವಾರಂಟೈನ್ನಲ್ಲಿರುವವರ ಬಗ್ಗೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಿದರು.
    ತಾಲೂಕು ಆರೋಗ್ಯ ಅಧಿಕಾರಿ ಡಾ.ಸುರೇಶ ಮೇಕಿನ್ ಮಾತನಾಡಿ, ಈಗಾಗಲೇ ತಾಲೂಕಿನ ಕಂಟೇನ್ಮೆಂಟ್ ಜೋನ್ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗಿದೆ. ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಲ್ಲಿ ಗಂಟಲ ದ್ರವ ಪಡೆಯಲಾಗುತ್ತಿದೆ. ಇನ್ನು ಹಣ್ಣು, ತರಕಾರಿ, ಕಿರಾಣಿ ವ್ಯಾಪಾರಿಗಳು, ಆಟೋ ಚಾಲಕರು, ಝೆರಾಕ್ಸ್ ಅಂಗಡಿಯವರಿಗೆ ಪರೀಕ್ಷೆ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು. ಉಪ ತಹಸೀಲ್ದಾರ್ ನಾಗನಾಥ ತರಗೆ, ಪಿಎಸ್ಐ ಸುಶೀಲಕುಮಾರ, ಸೆಕ್ಟ್ರಲ್ ಮ್ಯಾಜಿಸ್ಟ್ರೆಟ್ಗಳಾದ ಚಂದ್ರಶೇಖರ ಮೋತಕಪಲ್ಲಿ, ಮುರುಗೇಶ ಗುಣಾರಿ, ರೇವಣಸಿದ್ದಪ್ಪ, ಸತೀಶ ಗುಡ್ಡೆ, ಮಾಧವರೆಡ್ಡಿ, ಆರತಿ, ಪ್ರಭಾಕರ ಇದ್ದರು.

    ಆತ್ಮ ನಿರ್ಭರ್ ಯೋಜನೆಯಡಿ ವಲಸಿಗರಿಗೆ ಉಚಿತವಾಗಿ ತಲಾ 5 ಕೆಜಿ ಅಕ್ಕಿ, ಕುಟುಂಬಕ್ಕೆ 1 ಕೆಜಿ ಕಡಳೆ ಬೇಳೆ ವಿತರಿಸಲಾಗುತ್ತಿದೆ. ಇದು ಆಯ್ದ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದ್ದು, ವಲಸಿಗರು ಹೆಚ್ಚಿರುವ ತಾಲೂಕಿನ 25 ಪಡಿತರ ಕೇಂದ್ರಗಳನ್ನು ಗುರುತಿಸಲಾಗಿದೆ.
    | ಬಸವರಾಜ ಬೆಣ್ಣೆಶಿರೂರ, ತಹಸೀಲ್ದಾರ್ ಸೇಡಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts