More

    ಕರೊನಾ ಚಿಕಿತ್ಸೆಗೆ ಕ್ರಿಮ್ಸ್​ನಲ್ಲಿ ವ್ಯವಸ್ಥೆ

    ಕಾರವಾರ: ಕ್ರಿಮ್್ಸ ಆಸ್ಪತ್ರೆಯಲ್ಲಿಯೇ ಕರೊನಾ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.

    ಕಾಲೇಜ್​ನ ಕಟ್ಟಡದ ನೆಲಮಹಡಿಯ ರ್ಪಾಂಗ್ ಲಾಟ್ ಪರಿವರ್ತಿಸಿ ಕೇಂದ್ರೀಕೃತ ಆಮ್ಲಜನಕ ವ್ಯವಸ್ಥೆ ಇರುವ 150 ಹಾಸಿಗೆಗಳ ಕರೊನಾ ವಿಶೇಷ ವಾರ್ಡ್ ಒಂದು ತಿಂಗಳಲ್ಲಿ ಸಿದ್ಧವಾಗಿದೆ.

    ಕೈಗಾ ಎನ್​ಪಿಸಿಐಎಲ್ ಸಾಮಾಜಿಕ ಕವಾಬ್ದಾರಿ ನಿಧಿಯಿಂದ 50 ಲಕ್ಷ ರೂ. ಹಾಗೂ ಅಂದಾಜು ಒಂದೂವರೆ ಕೋಟಿ ರೂ. ಎಸ್​ಡಿಆರ್​ಎಫ್ ನಿಧಿಯಿಂದ ಬಳಸಲಾಗಿದೆ. ಈ ವಾರ್ಡ್​ಗೆ ಇನ್ಪೋಸಿಸ್ ಫೌಂಡೇಷನ್ 6 ವೆಂಟಿಲೇಟರ್​ಗಳನ್ನು ನೀಡಿದೆ.

    ಅಧಿಕಾರಿಗಳು ಶುಕ್ರವಾರ ವಾರ್ಡ್ ಪರಿಶೀಲಿಸಿದರು. ಕರೊನಾ ರೋಗಿ ಬಂದಲ್ಲಿ ಯಾವ ರೀತಿ ಚಿಕಿತ್ಸೆ ನೀಡಲಾಗುತ್ತದೆ ಎಂಬ ಪ್ರಾತ್ಯಕ್ಷಿಕೆಯನ್ನು ಈ ಸಂದರ್ಭದಲ್ಲಿ ಕ್ರಿಮ್್ಸ ವೈದ್ಯರ ತಂಡ ತೋರಿಸಿತು. ಡಾ.ಹೇಮಗಿರಿ, ಡಾ.ಮಂಜುನಾಥ ಭಟ್, ಡಾ. ವಿ.ವೆಂಕಟೇಶ್ ಕರೊನಾ ಚಿಕಿತ್ಸೆಯ ಬಗ್ಗೆ ವಿವರ ನೀಡಿದರು.

    ಇನ್ನು ಇಲ್ಲೇ ಚಿಕಿತ್ಸೆ: ಭಟ್ಕಳದಲ್ಲಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕಾಗಿ ಅರಗಾ ಪತಂಜಲಿ ನೌಕಾ ಆಸ್ಪತ್ರೆಗೆ ಕರೊನಾ ರೋಗಿಗಳನ್ನು ಸೇರಿಸಲಾಗಿತ್ತು. ಇನ್ನು ಕರೊನಾ ರೋಗಿಗಳು ಕಂಡುಬಂದಲ್ಲಿ ಕ್ರಿಮ್ಸ್​ನಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಇನ್ನು 10 ದಿನದಲ್ಲಿ ವೈರಾಲಜಿ ಪ್ರಯೋಗಾಲಯ ಸಿದ್ಧವಾಗಲಿದ್ದು, ಇಲ್ಲಿಯೇ ಕರೊನಾ ಶಂಕಿತರ ಗಂಟಲ ದ್ರವದ ಮಾದರಿ ಪರಿಶೀಲನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಎಸ್​ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಆಸ್ಪತ್ರೆಗೆ ಬರುವ ಸಾಮಾನ್ಯ ರೋಗಿಗಳಿಗೆ ಹಾಗೂ ಕರೊನಾ ರೋಗಿಗಳಿಗೆ ಯಾವುದೇ ಸಂಪರ್ಕ ಇರದಂತೆ ಬ್ಯಾರಿಕೇಡಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

    ಜಿಪಂ ಸಿಇಒ ಎಂ.ರೋಶನ್, ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಡಿಎಚ್​ಒ ಡಾ.ಜಿ.ಎನ್.ಅಶೋಕ ಕುಮಾರ್, ಜಿಲ್ಲಾ ಸರ್ಜನ್ ಡಾ. ಶಿವಾನಂದ ಕುಡ್ತಲಕರ್ ಇದ್ದರು.

    ಲಾಕ್​ಡೌನ್ ಸಡಿಲ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ಮಾರ್ಗಸೂಚಿಯಂತೆ ಲಾಕ್​ಡೌನ್ ನಿಯಮಾವಳಿಗಳನ್ನು ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು. ಸದ್ಯ ಗ್ರಾಮೀಣ ಭಾಗದಲ್ಲಿ ಯಾವುದೇ ನಿರ್ಬಂಧ ವಿಧಿಸುತ್ತಿಲ್ಲ. ನಗರದಲ್ಲೂ ಅಂಗಡಿಗಳನ್ನು ತೆರೆಯಲಾಗಿದೆ. ಉದ್ಯೋಗಕ್ಕೆ ಹೊರ ರಾಜ್ಯ, ಜಿಲ್ಲೆಗೆ ತೆರಳುವವರು ಮೇ 4ರವರೆಗೆ ಕಾಯಿರಿ ಎಂದರು.

    ಕರೊನಾ ರೋಗಿಯ ಸಂಪರ್ಕಕ್ಕೆ ಬಂದ ವೈದ್ಯಕೀಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಹಳದಿ ಚೀಲದಲ್ಲಿ ಕೋವಿಡ್-19 ವೇಸ್ಟ್ ಎಂದು ಬರೆದು, ಅಂಕೋಲಾದಲ್ಲಿರುವ ವೈದ್ಯಕೀಯ ತ್ಯಾಜ್ಯ ಘಟಕದಲ್ಲಿ ಅದನ್ನು ವಿಲೇವಾರಿ ಮಾಡಲಾಗುವುದು. ತಪಾಸಣೆ, ಚಿಕಿತ್ಸೆಯಲ್ಲಿ ಪಾಲಿಸುವ ಎಲ್ಲ ನಿಯಮಾವಳಿಗಳನ್ನು, ಮುನ್ನೆಚ್ಚರಿಕೆಯನ್ನು ವೈದ್ಯಕೀಯ ತ್ಯಾಜ್ಯ ನಿರ್ವಹಣೆಯಲ್ಲೂ ಬಳಸಲಾಗುತ್ತಿದೆ. ಎಂ.ರೋಶನ್, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts