More

    ಕರೊನಾ ಗೆದ್ದ ಒಂದೇ ಕುಟುಂಬದ 16 ಜನ!

    ಹುಬ್ಬಳ್ಳಿ: ಆತ್ಮಸ್ಥೈರ್ಯ ಮತ್ತು ಧೈರ್ಯದಿಂದ ಕರೊನಾ ಗೆಲ್ಲಬಹುದು ಎಂಬುದನ್ನು ತಾಲೂಕಿನ ಸುಳ್ಳ ಗ್ರಾಮದ ಶಿವಳ್ಳಿಮಠ ಕುಟುಂಬ ತೋರಿಸಿಕೊಟ್ಟಿದೆ. ಕರೊನಾ ಸೋಂಕಿತರಾಗಿದ್ದ ಈ ಕುಟುಂಬದ 16 ಜನರೂ ಸ್ವಯಂ ನಿರ್ಬಂಧ ಮತ್ತು ಸೂಕ್ತ ಚಿಕಿತ್ಸೆಯಿಂದ ಗುಣವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಗ್ರಾಮದ ಶಿವಳ್ಳಿಮಠ ಕುಟುಂಬದ ಸದಸ್ಯರೊಬ್ಬರು ಇತ್ತೀಚೆಗೆ ಶ್ರೀಶೈಲ ಪ್ರವಾಸಕ್ಕೆ ತೆರಳಿದ್ದರು. ವಾಪಸ್ ಬಂದ ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೆ, ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದರು. ವೈರಸ್ ತಗುಲಿದ್ದು ದೃಢವಾಗಿತ್ತು. ಧೃತಿಗೆಡದ ಅವರು ಸ್ವಯಂ ನಿರ್ಬಂಧದ ಮೂಲಕ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡರು. ಈ ನಡುವೆ ಕುಟುಂಬದ ಇತರ ಸದಸ್ಯರಿಗೂ ಸೋಂಕು ವ್ಯಾಪಿಸಿತ್ತು. ಕೆಲವರಿಗೆ ಶೀತ, ಜ್ವರ, ಕೆಮ್ಮು ಲಕ್ಷಣಗಳು ಕಾಣಿಸಿಕೊಂಡಿದ್ದವು. ಮೇ ಮೊದಲ ವಾರದಲ್ಲಿ 9 ತಿಂಗಳ ಮಗುವಿನಿಂದ ಹಿಡಿದು 64 ವರ್ಷದ ವೃದ್ಧರಿಗೂ ಸೋಂಕು ಕಾಣಿಸಿಕೊಂಡಿತ್ತು. ಮೂವರ ವರದಿ ಮಾತ್ರ ನೆಗೆಟಿವ್ ಬಂದಿತ್ತು. ಕರೊನಾ ಸೋಂಕಿತ ಎಲ್ಲರೂ ಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆದುಕೊಂಡರು. ಆತ್ಮವಿಶ್ವಾಸದಿಂದ ವೈರಸ್ ಎದುರಿಸಿದರು. ಈಗ ಕುಟುಂಬದ ಎಲ್ಲರೂ ಚೇತರಿಸಿಕೊಂಡಿದ್ದಾರೆ.

    ಆಶಾ ಕಾರ್ಯಕರ್ತೆಯರ ಸಾಥ್

    ಶಿವಳ್ಳಿಮಠ ಕುಟುಂಬದವರಿಗೆ ಸುಳ್ಳ ಗ್ರಾಮದ ಆಶಾ ಕಾರ್ಯಕರ್ತೆಯರು ಸೂಕ್ತ ಸಲಹೆ, ನೆರವು ನೀಡಿದರು. ಕರೊನಾ ಪಾಸಿಟಿವ್ ಬರುತ್ತಿದ್ದಂತೆ ಅಗತ್ಯ ಔಷಧವನ್ನು ಮನೆಗೆ ತಲುಪಿಸಿದರು. ನಿರಂತರವಾಗಿ ಸಂಪರ್ಕದಲ್ಲಿದ್ದು ಆರೋಗ್ಯ ವಿಚಾರಿಸುತ್ತಿದ್ದರು. ಎಲ್ಲರೂ ಅವರ ಸೂಚನೆ ಪಾಲಿಸಿದ್ದರಿಂದ ಶೀಘ್ರವಾಗಿ ಗುಣವಾದೆವು ಎನ್ನುತ್ತಾರೆ ಕುಟುಂಬದ ಸದಸ್ಯ ಮಲ್ಲಿಕಾರ್ಜುನ ಶಿವಳ್ಳಿಮಠ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts