More

    ಕರೊನಾದಿಂದ ಪಾಠ ಕಲಿತಿದ್ದೇವೆ

    ಯಾದಗಿರಿ: ಕರೊನಾ ಸೋಂಕು ಮನುಷ್ಯನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಕಲಿಸಿಕೊಟ್ಟಿದೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

    ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ಗುರಮಠಕಲ್ ಕ್ಷೇತ್ರದ 15 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಯಡಿ ಆರೋಗ್ಯ ಉಪಕರಣ ವಿತರಿಸಿ ಮಾತನಾಡಿದ ಅವರು, ಮನುಷ್ಯನಿಗೆ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ಕರೊನಾ ಮೊದಲೆರಡು ಅಲೆಗಳಿಂದ ಮನದಟ್ಟಾಗಿದೆ. ಹೀಗಾಗಿ ಮೂರನೇ ಅಲೆಯಲ್ಲಿ ನಾವು ಎಚ್ಚರದಿಂದ ಇರುವುದು ಅಗತ್ಯವಾಗಿದೆ ಎಂದರು.

    ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಪಾಡುವುದು ಹಾಗೂ ಸರ್ಕಾರದ ಮಾರ್ಗಸೂಚಿ ತಪ್ಪದೆ ಪಾಲಿಸಿದರೆ, ಈ ಸೋಂಕಿನಿಂದ ಪಾರಾಗಬಹುದು. ಗ್ರಾಮೀಣ ಜನರ ಆರೋಗ್ಯ ಕಾಪಾಡುವುದಕ್ಕಾಗಿ ಎನ್ 95 ಮಾಸ್ಕ್, ಸ್ಯಾನಿಟೈಸರ್, ಥರ್ಮಾಮೀಟರ್ ಸೇರಿ ಇನ್ನಿತರ ಪರಿಕರಗಳನ್ನು ವಿತರಿಸಲಾಗಿದೆ. ಇಲಾಖೆ ಅಧಿಕಾರಿಗಳು ಇವುಗಳ ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಪಾಟೀಲ್, ಶರಣಗೌಡ ಆಶನಾಳ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಯಾದಗಿರಿ ಇದರ ಜಿಲ್ಲಾ ವ್ಯವಸ್ಥಾಪಕ ಸಂತೋಷ, ಸುಭಾಶಚಂದ್ರ ಹೊನಗೇರಾ, ನರಸಪ್ಪ ಕವಡೆ ಬದ್ದೇಪಲ್ಲಿ, ಮಲ್ಲನಗೌಡ ಹಳಿಮನಿ, ಅನೀಲಕುಮಾರ ಹೆಡಗಿಮದ್ರಿ, ಈಶ್ವರ ರಾಠೋಡ, ಆನಂದರಡ್ಡಿ ವಡವಟ್, ಬಂದಪ್ಪ ಅರಳಿ ಇತರರಿದ್ದರು.

    ಪಂಪ್ಸೆಟ್, ಡ್ಯುಯಲ್ ಡೆಸ್ಕ್ ವಿತರಣೆ
    ಗುರಮಠಕಲ್ ಮತಕ್ಷೇತ್ರದ 5 ಜನ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪ್ ಸೆಟ್ ಮತ್ತು ಮೋಟಾರ್ ಸಾಮಾಗ್ರಿ ಹಾಗೂ ಕೆಕೆಆರ್ಡಿಬಿಯಿಂದ 71 ಪ್ರಾಥಮಿಕ ಶಾಲೆಗಳಿಗೆ ಡ್ಯುಯಲ್ ಡೆಸ್ಕ್ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts