More

    ಕರೊನಾಘಾತದಿಂದ ಹೊರಬರಲು ಬೇಕು ಚೇತನ

    ಶಿರಸಿ: ಅಂಗವಿಕಲರಿಗೆ ಔದ್ಯೋಗಿಕ ಮಾರ್ಗದರ್ಶನದ ಜತೆ ಆರ್ಥಿಕ ಸಹಾಯ ನೀಡುತ್ತಿದ್ದ ಇಲ್ಲಿನ ಪ್ರಶಾಂತಿ ಫೌಂಡೇಷನ್​ನ ‘ಚೇತನಾ’ ಕೇಂದ್ರವು ಕರೊನಾಘಾತದಿಂದ ಆರ್ಥಿಕ ತೊಂದರೆಗೆ ಸಿಲುಕಿದ್ದು, ಸಹೃದಯಿಗಳಿಂದ ಆರ್ಥಿಕ ಸಹಾಯ ಕೋರಿದ್ದಾರೆ.

    ಅಂಗವಿಕಲರಿಗೆ ಸ್ವಾವಲಂಬನೆ ಪಾಠ ಮಾಡಲು ಹೆಜ್ಜೆಯಿಟ್ಟಿದ್ದ ಪ್ರಶಾಂತಿ ಫೌಂಡೇಷನ್ ಶಿರಸಿಯಲ್ಲಿ ಚೇತನಾ ಕೇಂದ್ರವನ್ನು ಸ್ಥಾಪಿಸಿದೆ. ಕಳೆದ ಸುಮಾರು 14 ವರ್ಷಗಳಿಂದ ಇಲ್ಲಿನ ಬನವಾಸಿ ರಸ್ತೆಯ ಇಂಡಸ್ಟ್ರಿಯಲ್ ಎಸ್ಟೇಟ್​ನಲ್ಲಿ ವಿವಿಧ ಬಗೆಯ ವೈಕಲ್ಯತೆ ಹೊಂದಿರುವ ವ್ಯಕ್ತಿಗಳಿಗೆ ಉದ್ಯೋಗ ನೀಡಿದೆ. 30 ವ್ಯಕ್ತಿಗಳು ತಮ್ಮ ಸಾಮರ್ಥಕ್ಕೆ ಅಗುಣವಾಗಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು ಕೇಂದ್ರಕ್ಕೆ ಬಂದು ಬಂದು ಹೋಗಲು ಉಚಿತ ವಾಹನದ ವ್ಯವಸ್ಥೆ ಇದೆ. ಅಲ್ಲದೆ, ಮಧ್ಯಾಹ್ನದ ಊಟದ ವ್ಯವಸ್ಥೆಯಿದೆ. ಇಲ್ಲಿಯವರೆಗೆ ಬಾಳೆಪಟ್ಟೆ, ಬಾಳೆನಾರು, ರಟ್ಟು, ಬಟ್ಟೆ ಉಪಯೋಗಿಸಿ ಹಲವಾರು ಪರಿಸರ ಸ್ನೇಹಿ ಕರಕುಶಲ ವಸ್ತುಗಳನ್ನು ತಯಾರಿಸಲಾಗುತ್ತಿತ್ತು. ಉತ್ಪನ್ನ ಮಾರಾಟದಿಂದ ಆರ್ಥಿಕವಾಗಿ ಸ್ವಾವಲಂಬನೆಯಾಗುವ ಪ್ರಯತ್ನ ನಡೆದಿತ್ತು. ಆದರೆ ಕರೊನಾ ಪರಿಣಾಮದಿಂದಾಗಿ ಚೇತನ ಮತ್ತೆ ಚೇತರಿಸಿಕೊಳ್ಳಲಾಗದೇ ಸಂಕಷ್ಟದಲ್ಲಿದೆ. ಈಗ ದಾನಿಗಳ ಸಹಾಯದ ಅನಿವಾರ್ಯತೆ ಕೇಂದ್ರಕ್ಕೆ ಎದುರಾಗಿದೆ. ಸಹಾಯ ಮಾಡಲು ಆಸಕ್ತಿ ಇರುವವರು, ದೂರವಾಣಿ ಸಂಖ್ಯೆ- 9482163259 ಸಂರ್ಪಸಬಹುದು. ಕಾರ್ಪೆರೇಷನ್ ಬ್ಯಾಂಕ್ ಅಕೌಂಟ್ ನಂ: 520101231380964 ಐಎಫ್​ಎಸ್​ಸಿ ಕೋಡ್: 0000116

    ಕರೊನಾ ಹಿನ್ನೆಲೆಯಲ್ಲಿ ಆರ್ಥಿಕ ತೊಂದರೆಯಲ್ಲಿ ಸಂಸ್ಥೆ ಸಿಲುಕಿದೆ. ಶಿರಸಿ ನಗರದ ಹಾಗೂ ಸುತ್ತಮುತ್ತಲಿನ ಜನರಿಗಾಗಿ ನಡೆಯುತ್ತಿರುವ ಪ್ರಯತ್ನವಾಗಿರುವುದರಿಂದ ಸಹ್ರದಯಿ ನಾಗರಿಕರು ಕೈ ಜೋಡಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ.
    | ಡಾ. ಗಿರಿಧರ- ಫೌಂಡೇಷನ್ ಪ್ರಮುಖ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts