More

    ಕರುಳಬಳ್ಳಿ ಉಳಿಸಲು ಬೇಕಿದೆ ಸಹಾಯ

    ಅಥಣಿ: ಬಡವರಿಗೆ ಮಾರಣಾಂತಿಕ ಕಾಯಿಲೆ ಬಂದರೆ ದಿಕ್ಕುತೋಚದಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅದರಲ್ಲೂ ಬಡವರ ಮಕ್ಕಳಿಗೆ ಗಂಭೀರ ರೋಗರುಜಿನ ಎದುರಾದರೆ ನಿರ್ವಹಣೆ ಕಡುಕಷ್ಟ. ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಖಾಸಗಿ ಶಾಲಾ ಶಿಕ್ಷಕ ಹಣಮಂತ ಕಾಂಬಳೆ ಹಾಗೂ ಕುಸುಮಾ ಕಾಂಬಳೆ ಅವರ 3 ವರ್ಷದ ಮಗುವಿಗೆ ವಿಸ್ಕಾಟ್ ಆಲ್ಡ್ರಿಚ್ ಸಿಂಡ್ರೋಮ್ (ಬಿಳಿ ರಕ್ತಕಣಗಳ ಕೊರತೆ) ಎಂಬ ಕಾಯಿಲೆ ಬಂದಿದ್ದು, ಚಿಕಿತ್ಸಾ ವೆಚ್ಚ ಭರಿಸಲಾಗದೆ ಕುಟುಂಬ ಹೈರಾಣಾಗಿದೆ.

    ಹಣಮಂತ ಅವರಿಗೆ ಪಿತ್ರಾರ್ಜಿತ ಆಸ್ತಿ ಇಲ್ಲ. ಖಾಸಗಿ ಶಾಲೆಯ ಶಿಕ್ಷಕರಾಗಿರುವ ಅವರು ಸಿಗುವ ಅಲ್ಪ ಸಂಬಳದಲ್ಲಿ ಜೀವನ ಮಾಡುತ್ತಿದ್ದಾರೆ. ಪುಟ್ಟ ಮನೆ ಇದ್ದು, ತಂದೆ-ತಾಯಿ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪುಟ್ಟ ಮಗುವಿಗೆ ವಕ್ಕರಿಸಿದ ಕಾಯಿಲೆಯಿಂದ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

    ಹುಟ್ಟಿದಾಗ ಆರೋಗ್ಯವಾಗಿಯೇ ಇದ್ದ ರೈನೇಶ್ ಬರಬರುತ್ತ ಡಿಜಿಟಠಿಠಿಅ್ಝಛ್ಟಜ್ಚಿ ಢ್ಞಛ್ಟಟಞಛಿ ಎಂಬ ಬಿಳಿ ರಕ್ತ ಕಣಗಳ ಕೊರತೆ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈಗಾಗಲೇ ಮುಂಬೈನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡು ತಿಂಗಳಲ್ಲಿ ಆಪರೇಷನ್ ಮಾಡಬೇಕಾಗಿದೆ.

    ಈವರೆಗೂ ಶಕ್ತಿ ಮೀರಿ ಆಸ್ಪತ್ರೆ ಖರ್ಚು ನಿಭಾಯಿಸಿರುವ ತಂದೆ ಹಣಮಂತ ಗ ಕೈಚೆಲ್ಲಿ ಕುಳಿತಿದ್ದಾರೆ. ಕರುಳ ಬಳ್ಳಿಯ ಜೀವ ಉಳಿಸಲು ಹಾತೊರೆಯುತ್ತಿರುವ ಹನುಮಂತ ಈಗ ಸಹಾಯದ ಮೊರೆ ಹೋಗಿದ್ದಾರೆ. ಆಪರೇಷನ್‌ಗೆ ಅಂದಾಜು 18 ಲಕ್ಷ ರೂ. ಖರ್ಚು ಆಗಲಿದ್ದು, ಮಗುವಿನ ಜೀವ ಉಳಿಸಲು ಕುಟುಂಬ ಚಡಪಡಿಸುತ್ತಿದೆ. ದಾನಿಗಳು ಸಹಾಯಹಸ್ತ ಚಾಚಿದರೆ ಮಗುವಿನ ಜೀವ ಉಳಿಸಬಹುದಾಗಿದೆ. ಮಾಹಿತಿಗಾಗಿ ಹಣಮಂತ ಅವರ ಮೋ.ಸಂ. 9527531835 ಸಂಪರ್ಕಿಸಬಹುದಾಗಿದೆ.

    ನನ್ನ ಮಗು ಬಿಳಿ ರಕ್ತ ಕಣದ ಕೊರತೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ 18 ಲಕ್ಷ ರೂ.ಖರ್ಚು ಬರಲಿದೆ ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಒಬ್ಬ ಮಗನನ್ನು ಕಳೆದುಕೊಂಡಿದ್ದೇನೆ. ನನ್ನ ಎರಡನೇ ಮಗು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ದಾನಿಗಳು ದೊಡ್ಡ ಮನಸ್ಸು ಮಾಡಿ ನೆರವು ನೀಡಿದರೆ ನನ್ನ ಮಗ ಬದುಕುಳಿಯುತ್ತಾನೆ.
    | ಹಣಮಂತ ಕಾಂಬಳೆ, ಮಗುವಿನ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts