More

    ಕರಿಮಸೂತಿ ಕಾಲುವೆಗೆ ನೀರು ಹರಿಸಲು ಆಗ್ರಹ

    ಅಥಣಿ ಗ್ರಾಮೀಣ, ಬೆಳಗಾವಿ: ಅಥಣಿ ತಾಲೂಕಿನ ಪೂರ್ವ ಭಾಗದ ಬಾಡಗಿ, ಯಲ್ಲಮ್ಮವಾಡಿ, ಅರಟಾಳ, ಕೊಕಟನೂರ ಉತ್ತರ ಹಾಗೂ ಐಗಳಿ ಗ್ರಾಮದ ದಕ್ಷಿಣ ಭಾಗಕ್ಕೆ ಕರಿಮಸೂತಿ ಕಾಲುವೆ ನೀರು ತಲುಪುತ್ತಿಲ್ಲ. ಡಿ.7ರೊಳಗೆ ನೀರು ಹರಿಸಬೇಕು ಇಲ್ಲದಿದ್ದರೆ ಡಿ.8ರಂದು ಜೇವರ್ಗಿ-ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ತಡೆದು ಐಗಳಿ ಕ್ರಾಸ್‌ನಲ್ಲಿ ಪ್ರತಿಭಟಿಸಲಾಗುವುದು ಎಂದು ಶನಿವಾರ ಬಾಡಗಿ ಯಲ್ಲಮ್ಮನವಾಡಿ ಕಾಲುವೆ ಬಳಿ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತರು ನಿರ್ಣಯ ಕೈಗೊಂಡರು.

    ತಾಪಂ ಮಾಜಿ ಸದಸ್ಯ ಮಲ್ಲು ಡಂಗಿ ಮಾತನಾಡಿ, ಅಂತರ್ಜಲ ಹೆಚ್ಚಿಸಲು ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವಾಗದಂತೆ ಕರಿಮಸೂತಿ ಹಾಗೂ ತುಂಗಳ-ಸಾವಳಗಿ ಏತ ನೀರಾವರಿ ಮೂಲಕ ಕಾಲುವೆಗಳಿಗೆ ನೀರು ಹರಿಬಿಡಲಾಗಿದೆ. ಆದರೆ, ಮಧ್ಯದಲ್ಲಿ ಘಟನಟ್ಟಿ, ನಂದಗಾಂವ, ಕಟಗೇರಿ, ಬಡಚಿ, ಯಕ್ಕಂಚಿ, ಯಲಿಹಡಲಗಿ ಗ್ರಾಮಸ್ಥರು ಹಳ್ಳ, ಕೊಳ್ಳಗಳಿಗೆ ನೀರು ಹರಿಸುತ್ತಿರುವುದರಿಂದ ನೀರು ಪೋಲಾಗಿ ಕೃಷ್ಣಾ ನದಿ ಸೇರುತ್ತಿದೆ ಎಂದರು.

    ಹಿಪ್ಪರಗಿ ಅಣೆಕಟ್ಟೆ ಯೋಜನೆ ಮೂಲಕ ನಿರ್ವಹಣೆ ಮಾಡಬೇಕಾದ ನೀರಾವರಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಇದರಿಂದ ಪ್ರತಿವರ್ಷ ಈ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ. ಕೊನೆಯ ಹಳ್ಳಿಗಳಿಗೆ ನೀರು ಹರಿಸಿ ನಂತರ ಸಮೀಪದ ಹಳ್ಳಿಗಳಿಗೆ ನೀರು ಕೊಡಬೇಕೆನ್ನುವ ಕನಿಷ್ಠ ಸೌಜನ್ಯ ಕೂಡ ನೀರಾವರಿ ಅಧಿಕಾರಿಗಳಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಕುರಿತು ಮೇಲಧಿಕಾರಿಗಳಿಗೆ ಶಾಸಕ ಮಹೇಶ ಕುಮಠಳ್ಳಿ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ ಅವರಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ನೀರು ಹರಿಸದಿದ್ದಲ್ಲಿ 5 ಗ್ರಾಮಗಳ ರೈತರೊಂದಿಗೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಶಿವಾನಂದ ನೇಮಗೌಡ, ಮನೋಹರ ಜಂಬಗಿ, ಮಹಾಂತೇಶ ಹಲವಾಯಿ, ಅಪ್ಪಾಸಾಬ ತೆಲಸಂಗ, ಟೋಪಣ್ಣ ಅಂಕಟಗಿ, ಕೇದಾರಿ ತೆಲಸಂಗ, ಮಲ್ಲಪ್ಪ ಹಾಲಳ್ಳಿ, ಅಪ್ಪಾಸಾಬ ಯಳ್ಳೂರ, ರಘು ತಳವಾರ, ವಿಠ್ಠಲ ಹಿರೇಕುರಬರ, ಸದಾಶಿವ ಚಮಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts