More

    ಕರಿಬಸವೇಶ್ವರ ಸ್ವಾಮಿ ರಥೋತ್ಸವ ಅದ್ದೂರಿ

    ಚಿತ್ರದುರ್ಗ: ಜಿಲ್ಲೆಯ ಹಲವೆಡೆ ಸೇರಿ ಕೋಟೆನಗರಿಯ ಜೋಗಿಮಟ್ಟಿ ರಸ್ತೆ 6ನೇ ತಿರುವಿನಲ್ಲಿರುವ ಶ್ರೀಗುರು ಕರಿಬಸವೇಶ್ವರ ಸ್ವಾಮಿಯ ಗದ್ದಗೆ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಅದ್ದೂರಿಯಾಗಿ ಜರುಗಿತು.

    ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲದ ಮುಂಭಾಗದಿಂದ ಸೇತುವೆವರೆಗೂ ರಥವನ್ನು ಎಳೆದ ಭಕ್ತರು ಅಜ್ಜಯ್ಯ ಸ್ವಾಮಿ ಉೇ ಉೇ, ಹರ ಹರ ಮಹಾದೇವ ಎಂಬುದಾಗಿ ಜಯಘೋಷ ಮೊಳಗಿಸಿದರು. ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿ, ದೇವರ ಮೂರ್ತಿ ಕಣ್ತುಂಬಿಕೊಂಡು ಪುನೀತರಾದರು.

    ಸ್ವಾಮಿಯ ರಥೋತ್ಸವದ ಅಂಗವಾಗಿ ಬೆಳಗ್ಗೆ 5ರಿಂದ 8ರವರೆಗೆ ಗಂಗಾಪೂಜೆ, ಸ್ವಾಮಿ ಮತ್ತು ಗಾಯತ್ರಿ ದೇವಿಗೆ ಅಭಿಷೇಕ, ಹೋಮ, ಹವನ ಹಾಗೂ ರುದ್ರಾಭಿಷೇಕ ಕಾರ್ಯಕ್ರಮ ನೇರವೇರಿತು.

    ನಂತರ ದೇವರ ಉತ್ಸವ ಮೂರ್ತಿಗಳಿಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿದ ನಂತರ ಪಲ್ಲಕ್ಕಿ ಉತ್ಸವದ ಮೂಲಕ ರಥೋತ್ಸವದ ಬಳಿಗೆ ಕರೆತಂದು ರಥದೊಳಗೆ ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಲಾಯಿತು.

    ಶುಭ ಮುಹೂರ್ತದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು. ಇದೇ ವೇಳೆ ನೂರಾರು ಭಕ್ತರು ರಥದ ಚಕ್ರಕ್ಕೆ ತೆಂಗಿನ ಕಾಯಿ ಹೊಡೆಯುವ ಮೂಲಕ ಭಕ್ತಿ ಸಮರ್ಪಿಸಿದರು.

    ರಥ ಸಾಗಿದ ಮಾರ್ಗದಲ್ಲಿ ಉರುಮೆ, ತಮಟೆ, ಡೊಳ್ಳು, ಕಹಳೆ, ನಗಾರಿ ಹಾಗೂ ವಿವಿಧ ಬಗೆಯ ಜನಪದ ಕಲಾ ತಂಡಗಳು ಮೆರಗು ನೀಡಿದವು. ಪಾಲ್ಗೊಂಡಿದ್ದ ಯುವಕರು ಕುಣಿದು ಸಂಭ್ರಮಿಸಿದರು.

    ಪುನಃ ರಥವನ್ನು ಸ್ವಾಮಿಯ ದೇಗುಲದವರೆಗೂ ಎಳೆದು ಕರೆತರಲಾಯಿತು. ನಂತರ ಮಧ್ಯಾಹ್ನ 1ರ ನಂತರ ನೆರೆದಿದ್ದ ಭಕ್ತರು ಸ್ವಾಮಿಯ ಪ್ರಸಾದ ಸ್ವೀಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts