More

    ಕರವೇ ಕಾರ್ಯಕರ್ತರಿಂದ ಅರೆಬೆತ್ತಲೆ ಮೆರವಣಿಗೆ

    ಕುಮಟಾ: ತಾಲೂಕಿನ ದೀವಗಿಯಲ್ಲಿ ಅವೈಜ್ಞಾನಿಕವಾಗಿ ನಿರ್ವಿುಸಿದ ಚತುಷ್ಪಥ ಕಾಮಗಾರಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ಮಂಗಳವಾರ ಅರೆಬೆತ್ತಲೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೇಘರಾಜ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.

    ದೀವಗಿಯ ಶಿರಸಿ ಕ್ರಾಸ್​ನಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಸಿದರು. ಬಣದ ಅಧ್ಯಕ್ಷ ಕೃಷ್ಣ ಗೌಡ, ತಾಪಂ ಮಾಜಿ ಅಧ್ಯಕ್ಷ ಜಿ.ಜಿ. ಹೆಗಡೆ ಮಾತನಾಡಿ, ದೀವಗಿಯಲ್ಲಿ ಐಆರ್​ಬಿಯಿಂದ ನಡೆದಿರುವ ಅವೈಜ್ಞಾನಿಕ ಕಾಮಗಾರಿ ಸರಿಪಡಿಸುವುದಾಗಿ ಕೇವಲ ಭರವಸೆ ನೀಡುತ್ತಿದ್ದಾರೆ. ಇಲ್ಲಿ ಜನರ ಸಾವು-ನೋವು ಹೆಚ್ಚಾಗಿದೆ. ಭರವಸೆಗಿಂತ ಎಷ್ಟು ದಿನದಲ್ಲಿ ಸಮಸ್ಯೆ ಬಗೆಹರಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು. ಬಣದ ಜಿಲ್ಲಾಧ್ಯಕ್ಷ ರಾಜು ನಾಯ್ಕ ಮಾಸ್ತಿಹಳ್ಳ ಮಾತನಾಡಿದರು.

    ಮನವಿ ಸ್ವೀಕರಿಸಿದ ತಹಸೀಲ್ದಾರ್, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ರ್ಚಚಿಸಿ ಜ. 16ರಂದು ಅಧಿಕಾರಿಗಳ ಹಾಗೂ ಸಂಘಟನೆಯ ಪ್ರಮುಖರ ಸಭೆ ಆಯೋಜಿಸುವುದಾಗಿ ತಿಳಿಸಿದರು. ಹೊನ್ನಪ್ಪ ನಾಯಕ, ದೀಪಕ ನಾಯ್ಕ, ಮಹೇಂದ್ರ ನಾಯ್ಕ, ಕೃಷ್ಣಾನಂದ ವೆರ್ಣೆಕರ, ಸುಬ್ರಾಯ ನಾಯ್ಕ, ಕೆ.ಎನ್. ಮಂಜು, ಮಂಜುನಾಥ ಮರಾಠಿ, ಆರ್.ಕೆ. ಅಂಬಿಗ, ವಕೀಲ ನಾಗರಾಜ ಹೆಗಡೆ, ಗಜು ನಾಯ್ಕ ಅಳ್ವೇಕೋಡಿ, ಹರೀಶ ಶೇಟ್, ಸಿ.ಜಿ. ಹೆಗಡೆ ಅಂತ್ರವಳ್ಳಿ ಇತರರು ಇದ್ದರು.

    ಮಾತಿನ ಚಕಮಕಿ: ದೀವಗಿಯಲ್ಲಿ ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಕುಳಿತು ಸಂಚಾರ ತಡೆಗೆ ಯತ್ನಿಸಿದರು. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ರಸ್ತೆಯಲ್ಲಿ ಕುಳಿತವರನ್ನು ಬದಿಗೆ ಸರಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

    ದೀವಗಿಯಲ್ಲಿ ಅಪಘಾತಗಳು ಹೆಚ್ಚುತ್ತಿವೆ. ಸುರಕ್ಷಿತ ವಾಹನ ಸಂಚಾರಕ್ಕೆ ಸೂಕ್ತ ಮಾರ್ಗವಿನ್ಯಾಸದ ಅಗತ್ಯವಿದೆ. ಇದನ್ನು ತೀವ್ರ ಅಪಘಾತ ವಲಯವಾಗಿ ಗುರುತಿಸಿ ವರದಿಯನ್ನು ಈಗಾಗಲೇ ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ತಂಡ್ರಕುಳಿ ಬಳಿ ಕುಸಿದ ಗುಡ್ಡದ ಮಣ್ಣಿನ ತೆರವು ಕಾರ್ಯವೂ ನಡೆಯುತ್ತಿದೆ. | ಆನಂದಮೂರ್ತಿ ಕುಮಟಾ ಪಿಎಸ್​ಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts