More

    ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಳ

    ಬೆಳಗಾವಿ: ಬೆಲಗಾಂ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ 2022-23ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚೇರ್ಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಚಾಲನೆ ನೀಡಿದರು. 2021-22ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಈಗಾಗಲೇ ಟನ್ ಕಬ್ಬಿಗೆ 2,600 ರೂ.ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಎರಡನೇ ಕಂತಾಗಿ 100 ರೂ.ನೀಡಲು ನಿರ್ಧರಿಸಲಾಗಿದೆ. ಕಾರ್ಖಾನೆಯು ಕಬ್ಬು ನುರಿಸುವ ಸಾಮರ್ಥ್ಯವನ್ನೂ ಹೆಚ್ಚಿಸಲಾಗಿದೆ. ಪ್ರಸಕ್ತ 2022-23 ಹಂಗಾಮಿನಲ್ಲಿ 14 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ವರುಣನ ಕೃಪೆಯಿಂದ ಪ್ರಸಕ್ತ ವರ್ಷ ಮಳೆ-ಬೆಳೆ ಉತ್ತಮವಾಗಿದ್ದು, ಕಬ್ಬು ಪೂರೈಸಿದ ರೈತರಿಗೆ ತ್ವರಿತ ಗತಿಯಲ್ಲಿ ಕಬ್ಬಿನ ಬಿಲ್ ಸಂದಾಯ ಮಾಡಲಾಗುವುದು. ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತರು ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕು ಎಂದರು. ಅಡಿವೆಪ್ಪ ಗಿಡಗೇರಿ, ಅರವಿಂದ ಕಾರ್ಚಿ, ರಾಜು ದರಗಶೆಟ್ಟಿ, ಕಾಶಿನಾಥ ಇನಾಮದಾರ, ರಾಜು ತೇಲಿ, ರಿಯಾಜ ಬಾಳೆಕುಂದ್ರಿ, ರಾಜು ಮೋದಗಿ, ಚಂದ್ರು ಕುಂದರಗಿ, ಮುತ್ತುಗೌಡ ಪಾಟೀಲ, ಬಾಗಪ್ಪ ಕುರುಬರ, ಕುಮಾರ ಹಿರೇಮಠ, ಬಾಗಣ್ಣ ನರೋಟೆ, ರಾಜೇಶ ಮರಗಾಲ, ಹಬೀಬ್ ಶಿಲ್ಲೇದಾರ, ಶಿವಕುಮಾರ ಗುಡಗನಟ್ಟಿ, ಅಡಿವೆಪ್ಪ ಬಡನಾಯಿಕ, ಎಲ್.ಆರ್.ಕಾರಗಿ, ಪಿ.ಡಿ.ಹಿರೇಮಠ, ವಿ.ಎಂ.ತಳವಾರ, ಎ.ಎಸ್.ರಾಣಾ, ಡಿ.ಆರ್.ಪವಾರ ಮತ್ತು ಕಾರ್ಖಾನೆಯ ಕಾರ್ಮಿಕರು, ಸಿಬ್ಬಂದಿ ಹಾಗೂ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts