More

    ಕಬ್ಬಳಿ ಕೆರೆಗೆ ಶ್ರೀಗಳಿಂದ ಬಾಗಿನ ಅರ್ಪಣೆ

    ಚನ್ನರಾಯಪಟ್ಟಣ: ತಾಲೂಕು ವ್ಯಾಪ್ತಿಯ ಬಹುತೇಕ ಕೆರೆ-ಕಟ್ಟೆಗಳು ಎರಡೆರಡು ಬಾರಿ ಮೈದುಂಬಿ ಹರಿಯುತ್ತಿರುವುದು ಸಂತಸದ ವಿಷಯ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

    ತಾಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿ ಗ್ರಾಮದ ಕೆರೆಯು 23 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಗಂಗೆಪೂಜೆ ನೆರವೇರಿಸಿ ಮಂಗಳವಾರ ಬಾಗಿನ ಸಮರ್ಪಿಸಿದರು. ದೇವರು ಕಣ್ಣು ಬಿಟ್ಟರೆ ಅಸಾಧ್ಯವೆಂಬುದೆಲ್ಲವೂ ಸಾಧ್ಯವೇ ಆಗಿರುತ್ತದೆ ಎಂದರು.

    ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಕಾಲನಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಅಂಬೇಡ್ಕರ್ ಭವನ ನಿರ್ಮಿಸಲು ಯೋಜನೆ ರೂಪಿಸುವುದರ ಜತೆಗೆ ಅಗತ್ಯ ಅನುದಾನ ಕಲ್ಪಿಸಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

    ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ತಾಲೂಕು ವ್ಯಾಪ್ತಿಯ ಬಹುತೇಕ ಕೆರೆ-ಕಟ್ಟೆಗಳು ಮೈದುಂಬಿ ಹರಿಯುತ್ತಿವೆ. ಯಾವುದಾದರೂ ಕೆರೆ ಅಥವಾ ಕಟ್ಟೆಗಳ ಏರಿಯಲ್ಲಿ ನೀರು ಜಿನುಗಿದರೆ, ತೂಬು ದುಸ್ಥಿತಿ ತಲುಪಿದ್ದರೆ ಹಾಗೂ ಕೋಡಿಯಲ್ಲಿ ಸಮಸ್ಯೆ ಇದ್ದಲ್ಲಿ ತಕ್ಷಣ ತಾಲೂಕು ಆಡಳಿತದ ಗಮನಕ್ಕೆ ತರಬೇಕು. ಇದರಿಂದ ಅಪಾಯ ಸಂಭವಿಸದಂತೆ ನೋಡಿಕೊಳ್ಳಬಹುದು ಎಂದರು.

    ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಆರ್.ವಾಸು, ಪುಟ್ಟರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷರಾದ ಶಿವನಂಜೇಗೌಡ, ರಂಗೇಗೌಡ, ರಾಜೇಗೌಡ, ಸದಸ್ಯೆ ರತ್ನಾ ಕುಮಾರಸ್ವಾಮಿ, ಪಿಡಿಒ ಕಿರಣ್, ಕಾರ್ಯದರ್ಶಿ ಹನುಮೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts