More

    ಕಬಡ್ಡಿ ಆಟದ ಸಂಪೂರ್ಣ ವಿವರವಿರುವ ಸಾಫ್ಟ್‌ವೇರ್ ಅಭಿವೃದ್ಧಿ: ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯದ ಆವಿಷ್ಕಾರ

    ಕುಂದಾಪುರ: ಇಲ್ಲಿನ ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗ ವಿದ್ಯಾರ್ಥಿಗಳಾದ ಅಶ್ವಿನಿ ಎಚ್.ಎಸ್., ಮಹೇಶ್ ಹೆಗ್ಡೆ ವಿ., ನಾಗವೇಣಿ ಗೋಪಾಲ್ ನಾಯ್ಕ ಮತ್ತು ಸುಧಾ ಶಂಕರ್ ನಾಯ್ಕ ಅವರು ಕಬಡ್ಡಿ ಬಲ ಎನ್ನುವ ಹೊಸ ರೀತಿಯ ಸಾಫ್ಟ್‌ವೇರನ್ನು ಕಂಪ್ಯೂಟರ್ ಸೈನ್ಸ್ ವಿಭಾಗ ಪ್ರಾಧ್ಯಾಪಕಿ ಸವಿತಾ ಕೊನ್ನೂರ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ್ದಾರೆ.
    ಈ ಪದ್ಧತಿಯಿಂದ ಕಬಡ್ಡಿ ಇತಿಹಾಸ, ನಿಯಮಗಳು, ಕಾರ್ಯಕ್ರಮ ಹುಡುಕಲು ಬೇರೆ ಬೇರೆ ವೆಬ್‌ಸೈಟ್ ಹುಡುಕಬೇಕಾಗಿ ಇರುವುದಿಲ್ಲ. ಕಬ್ಬಡಿಯ ಎಲ್ಲ ವಿವರ ಒಂದೇ ಕಡೆ ಸಿಗುತ್ತದೆ. ಕಬಡ್ಡಿ ವೆಬ್‌ಸೈಟ್‌ನಲ್ಲಿ ಯಾರು ಬೇಕಾದರೂ ಕಾರ್ಯ ನಿರ್ವಹಿಸಬಹುದು.

    ಸಾಫ್ಟ್‌ವೇರ್ ಹಳ್ಳಿ, ಸ್ಥಳೀಯ ಟೂರ್ನಮೆಂಟ್‌ನಿಂದ ರಾಷ್ಟ್ರೀಯ ಟೂರ್ನಮೆಂಟ್‌ವರೆಗೂ ಉಪಯೋಗವಾಗುತ್ತದೆ. ಆಟದ ಸಮಯದಲ್ಲಿ ಜನರು ನೇರವಾಗಿ ಅಂಕಗಳ ಬದಲಾವಣೆ ವೀಕ್ಷಿಸಬಹುದು. ಎಲ್ಲ ಕಬಡ್ಡಿ ಸಂಬಂಧಪಟ್ಟ ನಿಯಮಗಳು, ಆಟದ ಫಲಿತಾಂಶ, ಕಾರ್ಯಕ್ರಮದ ಸಮಯ ಮುಂತಾದವುಗಳನ್ನು ಸಂಗ್ರಹಿಸುತ್ತದೆ, ಡಿಜಿಟಲ್ ತಂತ್ರಜ್ಞಾನಕ್ಕೆ ಉಪಯೋಗವಾಗಿದೆ.
    ಈ ಸಾಫ್ಟ್‌ವೇರ್ ಆವಿಷ್ಕಾರಕ್ಕೆ ಕಾಲೇಜಿನ ಅಧ್ಯಕ್ಷ ಸಿದ್ಧಾರ್ಥ್ ಜೆ.ಶೆಟ್ಟಿ ಹಾಗೂ ಪ್ರಾಂಶುಪಾಲ ಡಾಟ ಚಂದ್ರ ರಾವ್ ಮದಾನೆ ಮತ್ತು ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts