More

    ಕನ್ನಡ ಭಾಷೆ ಉಳಿಸಿ, ಬೆಳೆಸಲು ಪಣತೋಡಿ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಆಂಜಿನಪ್ಪ ಕರೆ

    ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
    ಕನ್ನಡ ಸಂಸ್ಕೃತಿ, ಪರಂಪರೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಅನೇಕ ಮಹನೀಯರ ಮಹತ್ತರವಾದ ಪಾತ್ರ ವಹಿಸಿದ್ದಾರೆ ಎಂದು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಆಂಜಿನಪ್ಪ ಹೇಳಿದರು.


    ದೇವನಹಳ್ಳಿಯ ಬೈಚಾಪುರದಲ್ಲಿ ಕನ್ನಡ ಕಲಾವಿದರ ಸಂಘ ಹಾಗೂ ಕರವೇ ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ 89ನೇ ಮಾಸಿಕ ಕನ್ನಡದೀಪ ಕಾರ್ಯಕ್ರಮದಲ್ಲಿ ಮಾತನಾಡಿದರು.


    ನಾನು ಗ್ರಾಮಾಂತರ ಜಿಲ್ಲೆಯಲ್ಲಿ ಹುಟ್ಟಿ ಕನ್ನಡ ಶಾಲೆಯಲ್ಲಿ ಕಲಿತು, ಪ್ರಸ್ತುತ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಅಂದು ನಮಗೆ ನೀಡುತ್ತಿದ್ದ ಶಿಸ್ತುಬದ್ಧ ಶಿಕ್ಷಣವೇ ಇದಕ್ಕೆ ಕಾರಣ. ನಮಗೆ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಮುಖ್ಯವೋ ಅಷ್ಟೇ ಕಾಳಜಿ ಭಾಷೆಯ ಮೇಲಿರಬೇಕು ಎಂದರು.
    ಕರೊನಾ ಹಾಗೂ ಮಂಪಿಪಾಕ್ಸ್ ಕಾಯಿಲೆಗಳ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದರು.


    ಜಿಲ್ಲಾ ಕರವೇ ಅಧ್ಯಕ್ಷ ಡಾ. ಮುನಿರಾಜು ಅಪ್ಪಯ್ಯ ಮಾತನಾಡಿ, 89 ತಿಂಗಳ ಹಿಂದೆ ದಿ. ರಾಜಗೋಪಾಲ್ ಅವರು ಮನೆಮನೆಗೂ ಕನ್ನಡ ಎಂಬ ಮಾಸಿಕ ಕನ್ನಡ ದೀಪ ಕಾರ್ಯಕ್ರಮ ಆರಂಭಿಸಿ ಪ್ರತಿ ತಿಂಗಳು ಪ್ರತಿ ಗ್ರಾಮದಲ್ಲಿ ಕಾರ್ಯಕ್ರಮ ಆಚರಿಸುವುದಕ್ಕೆ ಕಾರಣಕರ್ತರಾದರು ಎಂದರು.
    ತಾಲೂಕು ಅಧ್ಯಕ್ಷ ಆರ್.ಕೆ. ನಂಜೇಗೌಡ ಮಾತನಾಡಿ, ಕನ್ನಡ ಮನಸ್ಸುಗಳು ಒಂದಾಗಿ ಹಚ್ಚಿದ ಕನ್ನಡ ದೀಪವನ್ನು ತಾಲೂಕಿನಾದ್ಯಂತ ಪಸರಿಸುವಂತೆ ಮಾಡಿದೆ. ಇದು ಎಂದೂ ಆರದ ಜ್ಯೋತಿಯಾಗಿ ಬೆಳಗಲಿದೆೆ ಎಂದರು.


    ಕನ್ನಡ ಕಲಾವಿದರ ಸಂಘದ ತಾಲೂಕು ಅಧ್ಯಕ್ಷ ಮೋಹನ ಬಾಬು ಮಾತನಾಡಿ, ಪರಭಾಷೆ ವ್ಯಾಮೋಹದಲ್ಲಿ ಕನ್ನಡ ಭಾಷೆ ಕಡೆಗಣನೆ ಸಲ್ಲದು. ಯಾವುದೇ ಭಾಷೆ ಕಲಿಯುದು ತಪ್ಪಲ್ಲ. ಆದರೆ ನಮ್ಮ ಉಸಿರಿನ ಭಾಷೆ ಕನ್ನಡವಾಗಿರಬೇಕು ಎಂದರು.


    ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್. ಕೃಷ್ಣಪ್ಪ, ಕರವೇ ಗೌರವಾಧ್ಯಕ್ಷ ಡಾ.ಎನ್.ಚಂದ್ರಶೇಖರ್ ಮಾತನಾಡಿದರು.
    ಡಾ.ಎನ್.ಚಂದ್ರಶೇಖರ್ ಹಾಗೂ ರಂಗಭೂಮಿ ಕಲಾವಿದ ಎ. ಪ್ರಕಾಶ್, ಮಹಾಭಾರತದ ಪೌರಾಣಿಕ ನಾಟಕದ ರಂಗಗೀತೆಗಳನ್ನು ಹಾಡಿದರು.

    ಕರವೇ ತಾಲೂಕು ಅಧ್ಯಕ್ಷ ಆರ್.ವೆಂಕಟರಾಜು, ಕಸಾಪ ತಾಲೂಕು ಕೋಶಾಧ್ಯಕ್ಷ ರಾಮಂಜಿನಪ್ಪ, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎ.ಚಂದ್ರಶೇಖರ್, ಹಿರಿಯ ಮಾರ್ಗದರ್ಶಕ ಬಿ. ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಎ. ಪ್ರಕಾಶ್, ಕೃಷ್ಣಪ್ಪ, ರಾಜಣ್ಣ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts