More

    ಕನ್ನಡೇತರ ನಾಮಫಲಕ ತೆರವುಗೊಳಿಸಿ- ನವ ಕರ್ನಾಟಕ ಯುವಶಕ್ತಿ ಸಂಘಟನಾ ಕಾರ್ಯದರ್ಶಿ ಬುರೇ ವಿರೂಪಾಕ್ಷಿ ಯಾದವ್ ಒತ್ತಾಯ

    ಕಂಪ್ಲಿ: ಪಟ್ಟಣದ ಎಲ್ಲ ನಾಮಫಲಕಗಳು ಸಂಪೂರ್ಣ ಕನ್ನಡ ಭಾಷೆಯಲ್ಲಿರಬೇಕು. ನಿಯಮ ಪಾಲಿಸದವರಿಗೆ ದಂಡ ವಿಧಿಸಿ ಎಂದು ನವ ಕರ್ನಾಟಕ ಯುವಶಕ್ತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬುರೇ ವಿರೂಪಾಕ್ಷಿ ಯಾದವ್ ಒತ್ತಾಯಿಸಿದರು.

    ಪುರಸಭೆಯಲ್ಲಿ ಮುಖ್ಯಾಧಿಕಾರಿ ಡಾ.ಎನ್.ಶಿವಲಿಂಗಪ್ಪ ಅವರನ್ನು ಶುಕ್ರವಾರ ಭೇಟಿ ಮಾಡಿ, ಅಂಗಡಿಯವರು ಕನ್ನಡೇತರ ಭಾಷೆಯಲ್ಲಿ ನಾಮಫಲಕ ಹಾಕಿಕೊಂಡಿದ್ದು ತೆರವುಗೊಳಿಸುವಂತೆ ಈ ಹಿಂದೆಯೇ ಸಂಘಟನೆಯಿಂದ ತಾಲೂಕು ಆಡಳಿತ ಹಾಗೂ ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಇದೀಗ ಕನ್ನಡೇತರ ನಾಮಫಲಕಗಳ ತೆರವುಗೊಳಿಸಲು ಸಹಕರಿಸಬೇಕು ಎಂದು ಕೋರಿದರು.

    ಬಟ್ಟೆ, ಕಿರಾಣಿ ಇತರ ಅಂಗಡಿಗಳಲ್ಲಿ ಉದ್ದೇಶಪೂರ್ವಕವಾಗಿ ಕನ್ನಡೇತರ ಭಾಷೆಯ ಕೈಬರಹದ ರಸೀದಿ ನೀಡಿ ಗ್ರಾಹಕರನ್ನು ವಂಚಿಸಲಾಗುತ್ತಿದೆ. ಗ್ರಾಹಕರಿಗೆ ನೀಡುವ ರಸೀದಿಗಳು ಸಂಪೂರ್ಣ ಕನ್ನಡ ಭಾಷೆಯಲ್ಲಿರಬೇಕು. ಕನ್ನಡ ನಾಮಫಲಕ ಮತ್ತು ರಸೀದಿ ಬಳಸದ ಅಂಗಡಿಗಳ ವ್ಯವಹಾರ ಪರವಾನಗಿ ರದ್ದಗೊಳಿಸಬೇಕು ಎಂದು ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು. ಕನ್ನಡ ಸಾಹಿತ್ಯ ಪರಿ

    ಷತ್ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಮಾತನಾಡಿ, ಪಟ್ಟಣದಲ್ಲಿ ಸಂಪೂರ್ಣ ಕನ್ನಡ ಭಾಷೆಯ ನಾಮಫಲಕಗಳಿರಬೇಕು. ಮಾತೃ ಭಾಷೆಯಲ್ಲೇ ವ್ಯವಹರಿಸಬೇಕು ಎಂದು ಆಗ್ರಹಿಸಿದರು.
    ಮುಖ್ಯಾಧಿಕಾರಿ ಡಾ.ಎನ್. ಶಿವಲಿಂಗಪ್ಪ ಪ್ರತಿಕ್ರಿಯಿಸಿ, ಕನ್ನಡೇತರ ಭಾಷೆಯ ನಾಮಫಲಕಗಳ ತೆರವಿಗೆ ಪುರಸಭೆ ಸಂಪೂರ್ಣ ಸಹಕರಿಸುತ್ತದೆ ಎಂದು ಭರವಸೆ ನೀಡಿದರು.
    ಪುರಸಭೆ ಸಿಬ್ಬಂದಿ, ಯುವಶಕ್ತಿ ಪದಾಧಿಕಾರಿಗಳು ಅಂಗಡಿಗಳಿಗೆ ತೆರಳಿ ಕನ್ನಡ ನಾಮಫಲಕ ಅಳವಡಿಸಿಕೊಳ್ಳುವಂತೆ ಮಾಲೀಕರಿಗೆ ಮನವರಿಕೆ ಮಾಡಿಕೊಟ್ಟರು. ಕೆಲ ಅಂಗಡಿಗಳ ನಾಮಫಲಕಗಳನ್ನು ತೆರವುಗೊಳಿಸಿ, ಕೆಲವಕ್ಕೆ ಕಪ್ಪು ಮಸಿ ಸಿಂಪಡಿಸಿದರು. ನವ ಕರ್ನಾಟಕ ಯುವಶಕ್ತಿ ತಾಲೂಕು ಅಧ್ಯಕ್ಷ ಜೆ.ಶಿವಕುಮಾರ್, ಪದಾಧಿಕಾರಿಗಳಾದ ಪ್ರಹ್ಲಾದ ನಾಯಕ, ಸಂತೋಷ್, ಯಲ್ಲಪ್ಪ, ಕೊಟ್ರೇಶ್, ದೊಡ್ಡಬಸಪ್ಪ, ಕಂಠೆಪ್ಪ, ಗಂಗಾಧರ, ಪ್ರವೀಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts