More

    ಕನ್ನಡಗಿಯಲ್ಲಿ ಸಂಭ್ರಮದ ಪಲ್ಲಕ್ಕಿ ಉತ್ಸವ

    ಕಾಳಗಿ (ಕಲಬುರಗಿ): ಬೆಣ್ಣೆತೋರಾ ಜಲಾಶಯದ ದಡದಲ್ಲಿರುವ ಕನ್ನಡಗಿಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರದ ನಿಮಿತ್ತ ಜಿಟಿ- ಜಿಟಿ ಮಳೆಯ ಮಧ್ಯೆಯೇ ಸಂಭ್ರಮದಿಂದ ಪಲ್ಲಕ್ಕಿ ಉತ್ಸವ ನಡೆಯಿತು.

    ಜಾತ್ರೋತ್ಸವ ಅಂಗವಾಗಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 6ಕ್ಕೆ ಮಲ್ಲಿಕಾರ್ಜುನ ದೇವರಿಗೆ ಅರ್ಚಕರಾದ ನಾಗಯ್ಯಸ್ವಾಮಿ, ಶರಣಯ್ಯಸ್ವಾಮಿ ನೇತೃತ್ವದಲ್ಲಿ ವಿಶೇಷ ರುದ್ರಾಭಿಷೇಕ, ಧಾರಾಭಿಷೇಕ ಜರುಗಿತು. ರಾಜ್ಯದ ವಿವಿಧಡೆಯಿಂದ ಆಗಮಿಸಿದ ಸಾವಿರಾರು ಭಕ್ತರು ಮಳೆಯಲ್ಲೇ ಗದ್ದುಗೆಗೆ ಕಾಯಿ- ಕರ್ಪೂರ, ನೈವೇದ್ಯ ಅರ್ಪಿಸಿ ದರ್ಶನ ಪಡೆದುಕೊಂಡರು.

    ನಾಗೂರಿನದ ಶ್ರೀ ಅಲ್ಲಮಪ್ರಭುಲಿಂಗ ಸ್ವಾಮೀಜಿ ಹಾಗೂ ಸಾವತಖೇಡ ಶ್ರೀ ವಿಶ್ವನಾಥ ಸ್ವಾಮಿಗಳು ಪಾತಾಳ ಗಂಗೆ ಮಹಾದ್ವಾರ, ಅಡುಗೆ ಕೋಣೆ ಹಾಗೂ ವಿಶ್ರಾಂತಿ ಕೋಣೆಗಳನ್ನು ಉದ್ಘಾಟಿಸಿದರು. ಮಧ್ಯಾಹ್ನ ಹೇರೂರ(ಕೆ) ಗ್ರಾಮದ ಮುಖಂಡರ ನೇತೃತ್ವದಲ್ಲಿ ಭಜನಾ ಮಂಡಳಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಶ್ರೀ ಮಲ್ಲಿಕಾಜರ್ುನ ದೇವರ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಡೊಳ್ಳು ಭಾಜ ಭಜಂತ್ರಿ, ಭಜನೆ, ಪುರವಂತರ ಕುಣಿತದೊಂದಿಗೆ ಸಾವಿರಾರು ಭಕ್ತರ ಮಧ್ಯೆ ದೇವಸ್ಥಾನ ಸುತ್ತಲೂ ಮೆರವಣಿಗೆ ನಡೆಯಿತು. ಮಲ್ಲಿಕಾಜರ್ುನ ಮಹಾರಾಜ್ಕಿ ಜೈ… ಕನ್ನಡಗಿ ಮಲ್ಲಣ್ಣನಿಗೆ ನಮೋ ನಮಃ ಸೇರಿ ಹಲವು ಜೈಘೋಷಣೆ ಮೊಳಗಿದವು.

    ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಶಚಂದ್ರ ಮಾಲಿಪಾಟೀಲ್, ಪ್ರಮುಖರಾದ ಶಿವಕುಮಾರ ಪಾಟೀಲ್, ಸಿದ್ದಣ ತಳವಾರ, ಮಲ್ಲಿಕಾರ್ಜುನ ಕನ್ನಡಗಿ, ಬಸವರಾಜ ಪಾಟೀಲ್ ಹೇರೂರ, ಶಾಮರಾವ ಕನ್ನಡಗಿ, ರವಿ ಬಿರಾದಾರ, ಸುಭಾಷ ಕನ್ನಡಗಿ, ಶ್ರೀಶೈಲ ಕನ್ನಡಗಿ, ಚನ್ನವೀರಪ್ಪ ಪಾಟೀಲ್, ಸಂಜುಕುಮಾರ ಪಾಟೀಲ್, ಬಸಂತಪ್ಪ ದೊಡ್ಡಮನಿ, ಪ್ರೊ.ಎಚ್.ಬಿ.ಪಾಟೀಲ್, ಶಾಂತಕುಮಾರ ತಳವಾರ, ಸಿದ್ದು ಕಂಟಿಕಾರ, ಸಿದ್ದಣ್ಣ ಪೂಜಾರಿ, ಓಂ ದೇವ ಕನ್ನಡಗಿ, ಶರಣು ಬಿರಾದಾರ, ಸಿದ್ದಯ್ಯಸ್ವಾಮಿ ಹೇರೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts