More

    ಕನರ್ಾಟಕದಲ್ಲಿ ಗಾಂಧಿವಾದದ ಕೊನೆಯ ಕೊಂಡಿ ಕೋಚೆ

    ಬಸವಕಲ್ಯಾಣ: ಗಾಂಧಿ ಕಥನದ ಕೊನೆಯ ಕೊಂಡಿಗಳಲ್ಲಿ ಒಬ್ಬರಾದ ಕೋ.ಚೆನ್ನಬಸಪ್ಪ ಅವರು ಸಕರ್ಾರದ ಸೌಲಭ್ಯ ನಿರಾಕರಿಸಿ, ಸ್ವಾತಂತ್ರೃ ಚಳವಳಿ, ಏಕೀಕರಣ ನನ್ನ ಆಯ್ಕೆಯೇ ಹೊರತು ಕೂಲಿಯಾಗಿರಲಿಲ್ಲ ಎಂದು ತಿಳಿಸಿದ್ದರು ಎಂದು ರಾಜ್ಯ ಪತ್ರಾಗಾರ ಇಲಾಖೆ ಕಲಬುರಗಿಯ ಸಹಾಯಕ ನಿದರ್ೇಶಕ ಡಾ.ವೀರಶೆಟ್ಟಿ ಗಾರಂಪಳ್ಳಿ ಹೇಳಿದರು.

    ನಗರದ ಎಸ್ಎಸ್ಕೆಬಿ ಪದವಿಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಕೋಚೆ ಸಾಹಿತ್ಯ ಮತ್ತು ಶಿಕ್ಷಣ ಟ್ರಸ್ಟ್, ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನ ಭಾನುವಾರ ಏರ್ಪಡಿಸಿದ್ದ ಪ್ರತಿಷ್ಠಾನದ 63ನೇ ಉಪನ್ಯಾಸ ಹಾಗೂ ನಾಡೋಜ ಕೋ.ಚೆನ್ನಬಸಪ್ಪನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ `ಕೋಚೆ ಮತ್ತು ಕನ್ನಡ ಸಾಹಿತ್ಯ’ ಕುರಿತು ಮಾತನಾಡಿದ ಅವರು ಕೋಚೆ ಬರಹ, ಸಾಮಾಜಿಕ ಚಿಂತನೆ ಅತ್ಯಂತ ನಿಷ್ಠುರವಾಗಿತ್ತು ಎಂದರು.

    ಸ್ವಾತಂತ್ರೃ ಚಳವಳಿ ಮತ್ತು ಕನರ್ಾಟಕ ಏಕೀಕರಣದಲ್ಲಿ ಭಾಗವಹಿಸಿದ ಕೋಚೆ ಅವರ ಕೊನೆಯ ದಿನಗಳು ಅತ್ಯಂತ ನಿರಾಶಾದಾಯಕವಾಗಿದ್ದವು. ತಮ್ಮ ಕನಸಿನ ಭಾರತ ಮತ್ತು ಕನರ್ಾಟಕ ನಿಮರ್ಾಣವಾಗದೆ ಏನೇನೋ ಆಗಿರುವುದರ ಬಗೆಗೆ ಅಪಾರ ನೋವು ಅವರಿಗಿತ್ತು. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಆಂಧ್ರದಲ್ಲಿದ್ದ ಬಳ್ಳಾರಿ ಕನರ್ಾಟಕಕ್ಕೆ ಸೇರಿಸಿದ್ದು ಕೋಚೆ. ಕನ್ನಡ ಸಾಕ್ಷಿಪ್ರಜ್ಞೆಯಾಗಿ ಬದುಕು ನಡೆಸಿದ್ದರು ಎಂದು ತಿಳಿಸಿದರು.

    ಕಲ್ಯಾಣ ನೆಲದಲ್ಲಿ ಸಾಹಿತ್ಯ, ಸಿನಿಮಾ, ರಂಗಭೂಮಿ ಮೊದಲಾದ ಸಂಗತಿಗಳ ಕುರಿತು ಗಂಭೀರ ಚಚರ್ೆ ನಡೆಯುತ್ತಿರುವುದು ಜಾಗೃತ ಪ್ರಜ್ಞೆಯ ಸಂಕೇತ ಎಂದರು.

    ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ ಕೆ.ಐ.ಗುದಗಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆಡಳಿತದಲ್ಲಿ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಕನ್ನಡ ಮಾಧ್ಯಮವಾಗಬೇಕು. ಇದರಲ್ಲಿ ಕಲಿತವರಿಗೆ ಸಕರ್ಾರಿ ನೌಕರಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಉದ್ಯೋಗ ದೊರೆಯಬೇಕೆಂದು ಕೋಚೆ ಹೋರಾಟ ಮಾಡಿದ್ದರು ಎಂದರು.

    ಪಶುಪಾಲನಾ ಇಲಾಖೆ ಎಡಿ ಡಾ.ರವೀಂದ್ರನಾಥ ನಾರಾಯಣಪುರ ಮಾತನಾಡಿ, ಭಾಷೆ ಮತ್ತು ಮಾನವೀಕ ಅಧ್ಯಯನಗಳಿಂದ ಸಾಮಾಜಿಕ, ಸಾಂಸ್ಕೃತಿಕ ತಿಳಿವಳಿಕೆ ಹೆಚ್ಚಾಗುತ್ತದೆ. ಭಾಷೆಯ ಕಲಿಕೆ ಅನೇಕ ತೊಡಕು ನಿವಾರಿಸುತ್ತದೆ ಎಂದರು.

    ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಕನ್ನಡದ ಅನೇಕ ಬರಹಗಾರರು ಈ ನೆಲದ ಜತೆಗಿನ ಆಪ್ತ ನಂಟಿಗಾಗಿ, ಮನುಷ್ಯ ಲೋಕದ ಅನೇಕ ಸತ್ಯಗಳಿಗಾಗಿ, ನಿರಂತರ ಶೋಧನೆಯಲ್ಲಿ ತೊಡಗಿ ಹಲವು ಸಿದ್ಧಾಂತ ತಂದರು. ಕನ್ನಡ ಜಗತ್ತು ಕಟ್ಟಲು ಬಸವಣ್ಣ, ಅಲ್ಲಮ, ಅಕ್ಕ, ಕುವೆಂಪು, ಕೋಚೆ ಮೊದಲಾದವರ ಶ್ರಮ ಮತ್ತು ಸಂಘರ್ಷ ಅನನ್ಯ ಎಂದರು.

    ಕಾಲೇಜಿನ ಪ್ರಾಚಾರ್ಯ ಸಿದ್ರಾಮಪ್ಪ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಹಿತ್ಯ, ಚರಿತ್ರೆ, ಸಂಸ್ಕೃತಿಯ ಅಧ್ಯಯನದಿಂದ ಅನೇಕ ಹೊಸ ಒಳನೋಟ ಸಿಗುತ್ತವೆ. ಸಾಹಿತ್ಯಿಕ ಚಚರ್ೆ, ಸಂವಾದಗಳು ನಮ್ಮ ಅರಿವನ್ನು ವಿಸ್ತರಿಸುತ್ತವೆ. ಕೋಚೆ, ತೇಜಸ್ವಿ, ಲಂಕೇಶ ಎಂ ಅವರಂಥ ಬರಹಗಾರರ ಸಾಹಿತ್ಯದ ಕುರಿತು ಕಮ್ಮಟ, ವಿಚಾರ ಸಂಕಿರಣ ಮಾಡಿದರೆ ವಿದ್ಯಾಥರ್ಿಗಳ ಅರಿವು ವಿಸ್ತೃವಾಗುತ್ತದೆ ಎಂದರು.

    ಟ್ರಸ್ಟ್ ಅಧ್ಯಕ್ಷೆ ಹಾಗೂ ಕೋಚೆ ಮಗಳು ಶಾಂತಾ ಜಯಪ್ರಸಾದ್, ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ್, ಡಾ.ಶಿವಾಜಿ ಮೇತ್ರೆ, ನಾಗಪ್ಪ ನಿಣ್ಣೆ, ವೀರಶೆಟ್ಟಿ ಪಾಟೀಲ್, ಅಂಬರೀಶ ಭೀಮಾಣಿ, ವಿಜಯಕುಮಾರಿ ಚಳಕಾಪುರೆ ಇತರರಿದ್ದರು. ಭೀಮಾಶಂಕರ ಬೆಳಮಗಿ ಸ್ವಾಗತಿಸಿದರು. ಪ್ರತಿಷ್ಠಾನದ ಕಾರ್ಯದಶರ್ಿ ದೇವೇಂದ್ರ ಬರಗಾಲೆ ನಿರೂಪಣೆ ಮಾಡಿದರು. ನಾಗೇಂದ್ರ ಬಿರಾದಾರ ವಂದಿಸಿದರು.

    ಕೋಚೆ ಅವರು ಮಾನವೀಯತೆಯ ತುಡಿತಕ್ಕಾಗಿ, ಬದುಕಿಗಾಗಿ ಬರೆದವರು. ಬಸವಣ್ಣ, ಕುವೆಂಪು, ಅರವಿಂದರಿಂದ ಪ್ರಭಾವಿತರಾಗಿ `ರೈತ ಪತ್ರಿಕೆ’ ಮೂಲಕ ರಾಜಕಾರಣ, ಸಮಾಜದ ಬಗ್ಗೆ ನಿಷ್ಠುರವಾಗಿ ಬರೆಯುತ್ತಿದ್ದರು. ನ್ಯಾಯಾಧೀಶರಾಗಿ, ಸ್ವಾತಂತ್ರೃ ಹೋರಾಟಗಾರರಾಗಿ, ಬರಹಗಾರರಾಗಿ ನಾಡು-ನುಡಿಗೆ ಅವರು ನೀಡಿದ ಕೊಡುಗೆ ಸ್ಮರಣೀಯ.
    | ಕೆ.ಐ.ಗುದಗಿ, ಕೈಗಾರಿಕೆ ಮತ್ತು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ನಿದರ್ೇಶಕ, ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts