More

    ಕನಕದಾಸರ ತತ್ವಾದರ್ಶವೇ ದೊಡ್ಡ ಶಕ್ತಿ

    ಚಿತ್ರದುರ್ಗ: ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ದಾಸಶ್ರೇಷ್ಠ ಕನಕದಾಸರು ಸೇರಿ ದಾರ್ಶನಿಕರ ತತ್ವಾದರ್ಶ ಸರ್ವಕಾಲಕ್ಕೂ ಶಕ್ತಿಯಾಗಿ ಉಳಿಯಬೇಕಿದೆ ಎಂದು ವಿಮರ್ಶಕ ಪ್ರೊ.ಲಿಂಗಪ್ಪ ಅಭಿಪ್ರಾಯಪಟ್ಟರು.

    ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಸಂತ ಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

    ಕನಕದಾಸರ ಅಪರಿಮಿತ ಜ್ಞಾನ, ಮಹರ್ಷಿ ವಾಲ್ಮೀಕಿ ಅವರ ನೈಪುಣ್ಯ ಶಕ್ತಿ ತನ್ನ ವರ್ಗದವರಿಗೆ ದಕ್ಕದೇ, ಬೇರೆಯವರಿಗೆ ಎರವಲಾಗಿ ಹೋಯಿತು. ಹೀಗಾಗಿ ಸಮಾನತೆಗಾಗಿ ಸರ್ವವನ್ನೂ ತ್ಯಾಗ ಮಾಡಿದ ಮಹನೀಯರು ಈಗಲೂ ಆದರ್ಶರಾಗಿದ್ದಾರೆ. ಅವರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.

    ಸಾಹಿತಿ ಪರಮೇಶ್ವರ್ ಮಾತನಾಡಿ, ಕನಕದಾಸರು ವೈದಿಕ-ಅವೈದಿಕ ಜಿಜ್ಞಾಸೆ ಉಳ್ಳವನಾಗಿ ಅವಮಾನಿತನಾದರೂ ಎದೆಗುಂದದೆ ರಾಮಧ್ಯಾನ ಚರಿತೆ ಎಂಬ ಕಾವ್ಯ ರಚಿಸಿದರು. ವರ್ಣ-ಜಾತಿಗಳ ಅಸಮಾನತೆಯ ಭಯಂಕರತೆ ವಿರುದ್ಧ ಕೀರ್ತನೆಗಳ ಮೂಲಕ ಹೋರಾಡಿದರು ಎಂದು ಸ್ಮರಿಸಿದರು.

    ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಕನಕದಾಸರ ಕ್ರಾಂತಿಕಾರಿಕ ಮೌಲ್ಯ ಸದಾ ಎತ್ತಿಹಿಡಿಯುವ ಕೆಲಸವಾಗಬೇಕು. ಕೆಲವೊಮ್ಮೆ ಕಟು ಟೀಕೆ, ವ್ಯಂಗ್ಯ, ಹೊಗಳಿಕೆ, ಕೊನೆಗೆ ವ್ಯವಸ್ಥೆಯೊಳಗೆ ಕೂತು ಸಮಾಜ ಪರಿವರ್ತನೆಗೆ ಶ್ರಮಿಸಿದ ಅವರು ಸರ್ವ ಕಾಲಕ್ಕೂ ಪ್ರಸ್ತುತ ಎಂದು ಬಣ್ಣಿಸಿದರು.

    ಉಪನ್ಯಾಸಕ ಈ.ನಾಗೇಂದ್ರಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts