More

    ಕಣ್ಮನ ಸೆಳೆಯುತ್ತಿದೆ ಶೀರ್ಲಗದ್ದೆ ಜಲಪಾತ

    ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಗ್ರಾಪಂ ವ್ಯಾಪ್ತಿಯ ಸಿದ್ದಾಪುರ-ಶಿರಸಿ ರಾಜ್ಯ ಹೆದ್ದಾರಿಯ ಕಾಳೇನಳ್ಳಿ ಸಮೀಪದ ಶೀರ್ಲಗದ್ದೆ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

    ಹಲವು ದಿನಗಳಿಂದ ಸುರಿದ ಮಳೆಗೆ ಜಲಪಾತ ಹಾಲಿನ ನೊರೆಯಂತೆ ಕಂಡು ಬರುತ್ತಿದ್ದು ಕಲ್ಲು ಹಾಸಿನ ಏರಿಳಿತದಲ್ಲಿ ಹರಿಯುವ ಜಲಧಾರೆ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ.

    ಅಷ್ಟೇನೂ ಎತ್ತರ ಇಲ್ಲದ ಈ ಜಲಪಾತ ನೂರೂ ಮೀಟರ್​ನಷ್ಟು ಅಗಲವಾಗಿದೆ. ಆದರೆ, ಜಲಪಾತದ ಸಮೀಪದ ಹೋಗುವುದು ಕಷ್ಟ. ಕಲ್ಲುಬಂಡೆಯನ್ನು ಹತ್ತಿ ಇಳಿದು ಹೋಗಬೇಕಾಗಿರುವುದರಿಂದ ಪ್ರವಾಸಿ ಗರು ಎಚ್ಚರವಹಿಸಬೇಕಾಗಿದೆ. ದೂರ ದಿಂದ ಜಲಪಾತದ ಸೊಬಗು ಕಣ್ಮನ ಸೆಳೆಯುತ್ತಿದೆ. ಈ ಜಲಪಾತ ಮಳೆಗಾಲ ದಲ್ಲಿ ಮಾತ್ರ ಅಲ್ಲ ಬೇಸಿಗೆ ಯಲ್ಲಿಯೂ ತನ್ನ ಸೊಬಗನ್ನು ಪ್ರವಾಸಿಗರಿಗೆ ನೀಡುತ್ತಿರುವುದು ವಿಶೇಷವಾಗಿದೆ.

    ಸರ್ವಋತು ರಸ್ತೆ ನಿರ್ವಣ: ಜಲಪಾತದ ಸುತ್ತಮುತ್ತ ವಾಸ್ತವ್ಯದ ಮನೆಗಳಿವೆ. ಆದರೆ, ಸಮರ್ಪಕವಾದ ರಸ್ತೆ ಇಲ್ಲದಿರುವುದರಿಂದ ಶಾಸಕರ 10ಲಕ್ಷ ರೂ. ಅನುದಾನದಲ್ಲಿ ಸರ್ವಋತು ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.

    ಈಗಾಗಲೇ ಕಳೆದ ಬೇಸಿಗೆಯಲ್ಲಿ ಅರ್ಧ ಕಿ.ಮೀ.ನಷ್ಟು ಖಡೀಕರಣ ಕಾಮಗಾರಿ ನಡೆದಿದೆ. ಕರೊನಾ ವೈರಸ್ ಹರಡಿದ್ದರಿಂದ ಕಾಮಗಾರಿ ಸ್ಥಗಿತಗೊಳಿಸ ಲಾಗಿತ್ತು. ಇನ್ನು ಒಂದು ತಿಂಳಗಳೊಳಗೆ ಕಾಮಗಾರಿ ಪ್ರಾರಂಭಿಸ ಲಾಗುತ್ತದೆ ಎಂದು ರಸ್ತೆ ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಜಿಪಂ ಇಂಜಿನಿಯರ್ ಪರಶುರಾಮ ತಿಳಿಸಿದ್ದಾರೆ.

    ಹೋಗುವ ಮಾರ್ಗ: ಸಿದ್ದಾಪುರ-ಶಿರಸಿ ರಾಜ್ಯ ಹೆದ್ದಾರಿಯ ಕಾಳೇನಳ್ಳಿ ಬಸ್ ನಿಲ್ದಾಣದಿಂದ 1.5ಕಿ.ಮೀಟರ್​ನಷ್ಟು ದೂರದಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts