More

    ಕೆಸರು ಗದ್ದೆಯಂತಾದ ಡಂಬಳ ಒಳ ರಸ್ತೆ

    ಡಂಬಳ: ಗದಗ -ಮುಂಡರಗಿ ರಾಜ್ಯ ಹೆದ್ದಾರಿಯಿಂದ ಡಂಬಳ ಗ್ರಾಮಕ್ಕೆ ತೆರಳುವ ಒಳ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆ ಕೆಸರು ಗದ್ದೆಯಂತಾಗಿದೆ.

    ದೊಡ್ಡ ಬಸವೇಶ್ವರ ದೇವಸ್ಥಾನ, ತೋಂಟದಾರ್ಯ ಮಠ, ಜಪದ ಬಾವಿ, ಐತಿಹಾಸಿಕ ಕೆರೆ ಹಿನ್ನೆಲೆಯುಳ್ಳ ಡಂಬಳ ಗ್ರಾಮ ಗದಗ ಜಿಲ್ಲೆಯ ಪ್ರಮುಖ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದು. ಕಪ್ಪತ್ತಗುಡ್ಡದಂಥ ಪ್ರವಾಸಿ ತಾಣಕ್ಕೆ ಹಾಗೂ ಗದಗ, ಮುಂಡರಗಿ, ಬೆಂಗಳೂರು, ವಿಜಯಪುರ, ಪಣಜಿ, ದಾವಣಗೆರೆ, ರಾಯಚೂರು, ಹೊಸಪೇಟೆ, ಚಿತ್ರದುರ್ಗ, ಶಿರಹಟ್ಟಿಗೆ ಈ ಮಾರ್ಗವಾಗಿ ಸಾರಿಗೆ ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತವೆ.

    ಅತ್ತಿಕ್ಕಟ್ಟಿ, ಡೋಣಿ, ಶಿವಾಜಿನಗರ, ಹಿರೇವಡ್ಡಟ್ಟಿ, ಹಾರೋಗೇರಿ, ಕದಾಂಪೂರ, ಮೇವುಂಡಿ, ಬರದೂರ ಇನ್ನಿತರ 26 ಗ್ರಾಮಗಳ ಆಡಳಿತ ವ್ಯವಸ್ಥೆ ಹೊಂದಿರುವ ಡಂಬಳ ಗ್ರಾಮಕ್ಕೆ ನಿತ್ಯ ನೂರಾರು ವಾಹನ ಸವಾರರು ಸಂಚರಿತ್ತಾರೆ. ಜಂದಿಸಾಬ ಕೆರೆ ಕೆಲವೆಡೆ ತಗ್ಗು, ಗುಂಡಿಗಳ ಮಧ್ಯದಲ್ಲಿ ರಸ್ತೆಯ ಗುರುತು ಸಿಗದೆ ಕೆಲವರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ.

    ಕಳೆದ ವರ್ಷ ಸುರಿದ ಮಳೆಗೆ ಸಂಪೂರ್ಣ ರಸ್ತೆ ಹದಗೆಟ್ಟು, ಸಾರಿಗೆ ಸಂಸ್ಥೆಯವರು ಬಸ್ ಸಂಚಾರ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದರಿಂದ ತಾತ್ಕಾಲಿಕವಾಗಿ ತಗ್ಗು ಗುಂಡಿ ಮುಚ್ಚಿದ್ದು ಬಿಟ್ಟರೆ ಇಲ್ಲಿಯವರೆಗೆ ರಸ್ತೆ ಅಭಿವೃದ್ಧಿಪಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ರಸ್ತೆ ಹದೆಗೆಟ್ಟು ಸಂಚಾರಕ್ಕೆ ತೊಂದರೆಯಾಗುತ್ತಿದೆ. ವ್ಯಾಪಾರಸ್ಥರು ಡಂಬಳ ಗ್ರಾಮದ ಒಳಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಸಾರಿಗೆ ಸಂಸ್ಥೆಯ ಬಸ್‌ಗಳು ಬೈಪಾಸ್‌ನಲ್ಲಿ ಸಂಚರಿಸುತ್ತಿವೆ. ಕೂಡಲೇ ರಸ್ತೆ ದುರಸ್ತಿಗೊಳಿಸಿ ಅನುಕೂಲ ಕಲ್ಪಿಸಬೇಕು.

    ಈರಣ್ಣ ನಂಜಪ್ಪನವರ, ಡಂಬಳ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts