More

    ಕಣ್ಮನ ಸೆಳೆಯುತ್ತಿದೆ ವಿದ್ಯುತ್ ದೀಪಾಲಂಕಾರ

    ಮೇಲುಕೋಟೆ: ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಗುಡಿ-ಗೋಪುರಗಳು, ರಾಜಬೀದಿಗಳು, ಕಲ್ಯಾಣಿಗಳು ದೀಪಾಲಂಕಾರದಿಂದ ಕಣ್ಮನ ಸೆಳೆಯುತ್ತಿದೆ.

    ಮಾ.27ರಿಂದ ದೀಪಾಲಂಕಾರ ಆರಂಭವಾಗಿದ್ದು, ಏ.8ರವರೆಗೆ ಇರಲಿದೆ. ವೈರಮುಡಿ ಕಿರೀಟಧಾರಣಾ ಮಹೋತ್ಸವ ಏ.1 ರಂದು ರಾತ್ರಿ ನಡೆಯಲಿರುವ ಹಿನ್ನ್ನೆಲೆಯಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸೋಮವಾರ ರಾತ್ರಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ದೀಪಾಲಂಕಾರಕ್ಕೆ ಚಾಲನೆ ನೀಡಿದರು.

    ದೀಪಾಲಂಕಾರವನ್ನು ತಕ್ಷಣ ಪೂರ್ಣಗೊಳಿಸಬೇಕು. ಅವಶ್ಯವಿರುವ ಕಡೆ ಹೆಚ್ಚುವರಿ ವಿದ್ಯುತ್ ದೀಪಗಳನ್ನು ಅಳವಡಿಸಿ ಅಲಂಕಾರ ಮಾಡಬೇಕು. ಈ ಹಿಂದಿಗಿಂತ ದೀಪಾಲಂಕಾರ ಭಿನ್ನವಾಗಿರುವಂತೆ ನೋಡಿಕೊಳ್ಳಬೇಕು ಎಂದು ಡಿಸಿ ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಈ ವರ್ಷದ ದೀಪಾಲಂಕಾರ ವಿಭಿನ್ನವಾಗಿದ್ದು, ಭಕ್ತರಿಗೆ ಮುದ ನೀಡಲಿದೆ. ಕಣಿವೆಯಿಂದ ಮೇಲುಕೋಟೆ ದೇವಾಲಯಕ್ಕೆ ಸಂಪರ್ಕಿಸುವ ರಸ್ತೆಗಳು, ಕಲ್ಯಾಣಿ ಸಮುಚ್ಚಯ, ಬಸ್ ನಿಲ್ದಾಣದಿಂದ ಬೆಟ್ಟದವರೆಗಿನ ರಸ್ತೆ ಹಾಗೂ ಯೋಗಾನರಸಿಂಹಸ್ವಾಮಿ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ದೀಪಾಲಂಕಾರ ಮಾಡಲಾಗಿದೆ. ಚೆಲುವನಾರಾಯಣಸ್ವಾಮಿ ದೇವಾಲಯ ಆವರಣ ಹಾಗೂ ಯೋಗನರಸಿಂಹಸ್ವಾಮಿ ಬೆಟ್ಟಕ್ಕೆ ದೀಪಾಲಂಕಾರ ಮಾಡುವ ಕಾರ್ಯ ತ್ವರಿತಗತಿಯಲ್ಲಿ ಸಾಗಿದೆ. ಸೆಸ್ಕ್ ಇಇ ಮಂಜುನಾಥ್ ಮಾರ್ಗದರ್ಶನದಲ್ಲಿ ಮೈಸೂರಿನ ಹನಿ ಎಲೆಕ್ಟ್ರಿಕಲ್ ದೀಪಾಲಂಕಾರದ ನೇತೃತ್ವ ವಹಿಸಿದೆ. ಚೆಲುವನಾರಾಯಣಸ್ವಾಮಿ ರಾಜಗೋಪುರಕ್ಕೆ ಪಾರ್ಕರ್ ಲೈಟ್ ಅಳವಡಿಸಿದ್ದು, ಪ್ರತಿ 15 ಸೆಕೆಂಡಿಗೊಮ್ಮೆ ಬಣ್ಣ ಬದಲಾಗುತ್ತದೆ ಎಂದರು.

    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಉಪವಿಭಾಗಾಧಿಕಾರಿ ನಂದೀಶ್, ತಹಸೀಲ್ದಾರ್ ಸೌಮ್ಯಾ, ದೇವಾಲಯದ ಕಾರ್ಯನಿವಾಹಕ ಅಧಿಕಾರಿ ಎಚ್.ಎಸ್.ಮಹೇಶ್, ಮುಜರಾಯಿ ತಹಸೀಲ್ದಾರ್ ಉಮಾ, ಸೆಸ್ಕ್ ಪಾಂಡವಪುರ ಕಾರ್ಯನಿರ್ವಾಹಕ ಮಂಜುನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ.ಪುಟ್ಟಸ್ವಾಮಿ, ಮೇಲುಕೋಟೆ ಜೆಇ ಸತೀಶ್, ಗುತ್ತಿಗೆದಾರ ಇರ್ಫಾನ್ ಪಾಷಾ ಇತರರಿದ್ದರು.

    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts