More

    ಕಡಿಮೆ ಬೆಲೆಗೆ ಮಾರಾಟ ಮಾಡಲು ಮನವಿ

    ಮುಂಡರಗಿ: ದಿನಬಳಕೆ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ದೇವಪ್ಪ ಇಟಗಿ ನೇತೃತ್ವದಲ್ಲಿ ಪುರಸಭೆಯ ಕೆಲವು ಸದಸ್ಯರು, ಸಾಮಾಜಿಕ ಕಾರ್ಯಕರ್ತರು ಕಿರಾಣಿ, ಔಷಧ, ತರಕಾರಿ, ಹಣ್ಣಿನ ಅಂಗಡಿ ಮಾಲೀಕರಿಗೆ ಹಾಗೂ ಸಿಮೆಂಟ್ ಏಜೆನ್ಸಿಯವರಿಗೆ ಕರಪತ್ರ ಹಂಚಿ ಮನವಿ ಮಾಡಿದರು.

    ಕರೊನಾ ಮಹಾಮಾರಿಯಿಂದ ಅಸಂಘಟಿತ ಕೂಲಿ ಕಾರ್ವಿುಕರು, ಕೃಷಿ ಕಾರ್ವಿುಕರು, ಬಡವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಅನೇಕ ದಾನಿಗಳು, ಸ್ವಯಂ ಸೇವಕರು ತನು-ಮನ-ಧನದಿಂದ ಸೇವೆ ಸಲ್ಲಿಸಿ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಿದ್ದಾರೆ. ಇದರಿಂದ ತಾಲೂಕಿನ ಜನ ನೆಮ್ಮದಿಯಿಂದ ಬದುಕುವಂತಹ ವಾತಾವರಣ ಸೃಷ್ಟಿಯಾಗಿದೆ. ಅದೇ ರೀತಿ ಕಿರಾಣಿ, ಹಣ್ಣು, ತರಕಾರಿ, ಸಿಮೆಂಟ್ ಏಜೆನ್ಸಿಗಳು ಕಡಿಮೆ ಬೆಲೆಗೆ ಮಾರಾಟ ಮಾಡಿ ಉದ್ಯೋಗ ಕಳೆದುಕೊಂಡಿರುವ ಬಡವರಿಗೆ ಸಹಾಯ ಮಾಡುವ ಮೂಲಕ ಮಾನವೀಯ ಮೌಲ್ಯ ಎತ್ತಿ ಹಿಡಿಯಬೇಕು. ಜನರ ಆರ್ಥಿಕ ಸಂಕಷ್ಟಕ್ಕೆ ಸಹಕಾರಿಯಾಗಬೇಕು ಎಂದು ಪ್ರತಿ ಅಂಗಡಿಗಳಿಗೆ ತೆರಳಿ ಕರಪತ್ರ ನೀಡಿ ಮನವಿ ಮಾಡಿಕೊಂಡರು. ಪುರಸಭೆ ಸದಸ್ಯರಾದ ಟಿ.ಬಿ. ದಂಡಿನ, ಶಿವಪ್ಪ ಚಿಕ್ಕಣ್ಣವರ, ರಾಜಾಭಕ್ಷಿ ಬೆಟಗೇರಿ, ಪವನ ಮೇಟಿ, ಪ್ರಲ್ಹಾದ ಹೊಸಮನಿ, ಸಂತೋಷ ಹಿರೇಮನಿ, ಪ್ರಕಾಶ ಹಲವಾಗಲಿ, ಅಂದಪ್ಪ ಬಳ್ಳಾರಿ, ನಾಗರಾಜ ಹಾನಗಲ್ಲ, ದೇವು ಹಡಪದ, ನಾಗರಾಜ ಕೊರ್ಲಹಳ್ಳಿ, ನಾಗರಾಜ ಮುರಡಿ, ಅಡಿವೆಪ್ಪ ಚಲವಾದಿ, ಧ್ರುವಕುಮಾರ ಹೂಗಾರ, ಮೌಲಾಸಾಬ್ ಬಾಗವಾನ್, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts