More

    ಕಡವೆ ಕೊಂದವರ ಬಂಧನ

    ಕಾರವಾರ: 4 ವರ್ಷದ ಹೆಣ್ಣು ಕಡವೆ ಹೊಡೆದು ಅದರ ಮಾಂಸ ತಯಾರಿಸುತ್ತಿದ್ದ ಮೂವರನ್ನು ಅರಣ್ಯಾಧಿಕಾರಿಗಳು ದೇವಳಮಕ್ಕಿಯಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ.

    ದೇವಳಮಕ್ಕಿ ಗ್ರಾಮದ ರೋಮನ್ ಕಾರಡೋಜ, ಕೋವೆ ಗ್ರಾಮದ ಆಗ್ನೇಲ್ ಡುಮನಿ ಪರೇರಾ, ಬರ್ಗಲ್​ನ ಕಮಲಾಕರ ಹನುಮಾ ಗೌಡ ಬಂಧಿತರು. ದೇವಳಮಕ್ಕಿಯ ವಿಕ್ಟರ್ ಕಾರಡೋಜ, ಉಲ್ಲಾಸ ಲಕ್ಷ್ಮಣ ಭಂಡಾರಿ ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಕಾರವಾರ ಎಸಿಎಫ್ ಶರಣಕುಮಾರ್, ಆರ್​ಎಫ್​ಒ ಜಿ.ವಿ.ನಾಯ್ಕ ನೇತೃತ್ವದಲ್ಲಿ ಡಿಆರ್​ಎಫ್​ಒ ಕೃಷ್ಣಾನಂದ ಗಾಂವಕರ್ ದಾಳಿ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts