More

    ಕಠಿಣ ಪರಿಶ್ರಮದಿಂದ ಯಶಸ್ಸು ಖಚಿತ

    ನಿಪ್ಪಾಣಿ: ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಟಿಯುಗೆ ಪ್ರಥಮ ನೂರರಲ್ಲಿ ಸ್ಥಾನ ಗಳಿಸುತ್ತ ಗಡಿಭಾಗದ ವಿಎಸ್‌ಎಂಎಸ್‌ಆರ್‌ಕೆಐಟಿಯ ಕೀರ್ತಿ ಹೆಚ್ಚಿಸುತ್ತಿದ್ದಾರೆ ಎಂದು ಸ್ಥಳೀಯ ವಿದ್ಯಾಸಂವರ್ಧಕ ಮಂಡಳದ ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಹೇಳಿದರು.
    ನಗರದ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‌ಎಂಎಸ್‌ಆರ್‌ಕೆಐಟಿ)ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಿಪ್ಲೊಮಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಇಂಡಕ್ಷನ್ ಪ್ರೋಗ್ರಾಂ ಉದ್ಘಾಟಿಸಿ ಮಾತನಾಡಿ, ತಾಂತ್ರಿಕ ಶಿಕ್ಷಣ ಮುಗಿಯುವವರೆಗೆ ಉತ್ತಮ ನಡತೆ, ಕಠಿಣ ಪರಿಶ್ರಮ, ಸಂಶೋಧನಾತ್ಮಕ ವಿಚಾರ ಮೈಗೂಡಿಸಿಕೊಂಡು ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಹಿಂಬಾಲಿಸಲಿದೆ ಎಂದರು.
    ಪ್ರಾಚಾರ್ಯ ಡಾ. ಉಮೇಶ ಪಾಟೀಲ ಮಾತನಾಡಿ, ಮಾತೃಭಾಷೆಯನ್ನು ಪ್ರೀತಿಸಬೇಕು. ಆಂಗ್ಲ ಭಾಷಾ ಪ್ರೌಢಿಮೆ ಬೆಳೆಸಿಕೊಳ್ಳಬೇಕು. ಆಗ ಶಿಕ್ಷಣ ಮುಗಿದ ನಂತರ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.

    ವಿಎಸ್‌ಎಂ ಸಿಇಒ ಡಾ. ಸಿದ್ಧಗೌಡ ಪಾಟೀಲ ಮಾತನಾಡಿ, ಮಂಡಳವು ಅನೇಕ ಅತ್ಯಾಧುನಿಕ ಉಪಕರಣಗಳು, ಸುಸಜ್ಜಿತ ಕಟ್ಟಡ, ಹೈಟೆಕ್ ಗ್ರಂಥಾಲಯ ಹೊಂದಿದೆ. ಇಲ್ಲಿನ ಸೌಲಭ್ಯ ಬಳಸಿಕೊಂಡು ಪ್ರಗತಿ ಸಾಸಬೇಕು ಎಂದರು.

    ಪ್ರಾಚಾರ್ಯ ಬಸವರಾಜ ಕರೋಶಿ, ಪ್ರತೀಕ್ಷಾ ಗಳತಗೆ, ದರ್ಶನ ಖೋತ ಮಾತನಾಡಿದರು. ಡಾ.ಮಲ್ಲಿಕಾರ್ಜುನ ಸರ್ಸಾಂಬಾ, ಪ್ರೊ.ಕವಿತಾ ವಸೇದಾರ, ಪ್ರೊ.ಮಂಜುನಾಥ ಮಲೋಡೆ, ಪ್ರೊ.ಗಾಯತ್ರಿ ಬಾನೆ, ಪ್ರೊ. ವಿಜಯ ಗಾವಡೆ, ಪ್ರವೀಣ ಪರಮಕರ, ಪ್ರೊ. ಐಶ್ವರ್ಯಾ ಘೋಡಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts