More

    ಕಟ್ಟಿಮನಿ ಕಾದಂಬರಿ ಅನುಭವ ಜನ್ಯ

    ಧಾರವಾಡ: ಬಸವರಾಜ ಕಟ್ಟಿಮನಿ ಅವರು ಬಡತನದ ಬೇಗೆ, ಸಂಕಷ್ಟಗಳನ್ನು ಅನುಭವಿಸಿದವರು. ಸಮಾಜದಲ್ಲಿನ ಅಸಮಾನತೆ, ಅನ್ಯಾಯ ಕಂಡುಂಡವರು. ಹೀಗಾಗಿ ಅವರ ಕಾದಂಬರಿಗಳು ಅನುಭವ ಜನ್ಯವಾಗಿವೆ ಎಂದು ಹಿರಿಯ ವಿಮರ್ಶಕ ಡಾ. ಗುರುಲಿಂಗ ಕಾಪಸೆ ಹೇಳಿದರು.

    ನಗರದ ಬೇಂದ್ರೆ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಖ್ಯಾತ ಕಾದಂಬರಿಕಾರ ಬಸವರಾಜ ಕಟ್ಟಿಮನಿ ಅವರ 101ನೇ ಜನ್ಮ ದಿನಾಚರಣೆ ಹಾಗೂ ಗ್ರಂಥಗಳ ಬಿಡುಗಡೆ (ಆನ್​ಲೈನ್) ಸಮಾರಂಭದಲ್ಲಿ ಅವರು ಮಾತನಾಡಿದರು.

    ಬರಹವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಕಟ್ಟಿಮನಿಯವರ ಎಲ್ಲ ಕಾದಂಬರಿಗಳು ಶ್ರೇಷ್ಠವಾಗಿರಲಿಕ್ಕಿಲ್ಲ. ಆದರೆ ಅವರ ಜನಪರ ನಿಲುವುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕೆಲ ಉತ್ಕೃಷ್ಟ ಕಾದಂಬರಿಗಳು ಅವರಿಂದ ಬಂದಿವೆ ಎಂಬುದನ್ನು ಗಮನಿಸಬೇಕು ಎಂದರು.

    ಡಾ. ಬಸವರಾಜ ಸಾದರ ಅವರು ರಚಿಸಿರುವ ಬಸವರಾಜ ಕಟ್ಟಿಮನಿಯವರ ಕಾದಂಬರಿಗಳು (ಪರಿಷ್ಕೃತ ಆವೃತ್ತಿ) ಕೃತಿ ಕುರಿತು ಡಾ.ತಾರಿಣಿ ಶುಭದಾಯಿನಿ ಮಾತನಾಡಿ, ಪಿಎಚ್​ಡಿ ಪ್ರಬಂಧವಾಗಿರುವ ಈ ಕೃತಿ ಓದುಗರಿಗೆ ಒಂದು ಒಳ್ಳೆಯ ಗ್ರಾಸವನ್ನು ಒದಗಿಸಬಲ್ಲದು. ಒಬ್ಬ ಲೇಖಕನನ್ನು ಅಧ್ಯಯನ ಮಾಡಲು ಬೇಕಿರುವ ವಸ್ತುನಿಷ್ಠತೆ ಮತ್ತು ಖಚಿತತೆ ಕೃತಿಯಲ್ಲಿ ಬಹಳ ಸ್ಪಷ್ಟವಾಗಿದೆ ಎಂದರು.

    ಡಾ. ಬಾಳಣ್ಣ ಶೀಗಿಹಳ್ಳಿ ಅವರು ಸಂಪಾದಿಸಿದ ಬಸವರಾಜ ಕಟ್ಟಿಮನಿ ಸಾಹಿತ್ಯ ವಾಚಿಕೆ ಮತ್ತು ಶಿವಕುಮಾರ ಕಟ್ಟಿಮನಿ ಅವರು ಸಂಪಾದಿಸಿದ ಬಸವರಾಜ ಕಟ್ಟಿಮನಿಯವರ ಪತ್ರಿಕಾ ಬರಹಗಳು ಕೃತಿಗಳ ಕುರಿತು ಡಾ.ವೈ.ಎಂ. ಯಾಕೊಳ್ಳಿ, ಸಂಪಾದಕರ ಪರವಾಗಿ ಡಾ. ಬಾಳಣ್ಣ ಶೀಗಿಹಳ್ಳಿ ಮಾತನಾಡಿದರು.

    ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ, ದೇವು ಪತ್ತಾರ, ಡಾ. ರಾಮಕೃಷ್ಣ ಮರಾಠೆ, ಶಿವಕುಮಾರ ಕಟ್ಟಿಮನಿ, ಡಾ. ಬಾಳಾಸಾಹೇಬ ಲೋಕಾಪುರ, ಡಾ. ಚಂದ್ರಶೇಖರ ಅಕ್ಕಿ, ಪ್ರಕಾಶ ಬಾಳಿಕಾಯಿ, ಇತರರು ಇದ್ದರು. ಪ್ರೊ. ಡಾ. ಕೆ.ಆರ್. ದುರ್ಗಾದಾಸ್ ಸ್ವಾಗತಿಸಿದರು. ಸಂಧ್ಯಾ ಹೆಗಡೆ ನಿರೂಪಿಸಿದರು.

    ಸೀತಾಲಕ್ಷ್ಮೀ ಕುಲಕರ್ಣಿಯವರ ದಾಖಲೆ ಕಳೆದಿದ್ದವು. ಇದೀಗ ನಕಲು ದಾಖಲೆಗಳನ್ನು ಸೃಷ್ಟಿಸಿದ್ದು, ಶೀಘ್ರ ವಾರಸಾ ಮಾಡಿಕೊಡಲಾಗುವುದು.

    – ಎಂ.ಜಿ. ಖಂಡಾಟೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ನಗರ ಮೋಜಣಿ ಕಚೇರಿ, ಹುಬ್ಬಳ್ಳಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts