More

    ಕಟಾವಿಗೆ ಬಂದಿದ್ದ ಭತ್ತದ ಬೆಳೆ ಹಾಳು

    ಮುಂಡರಗಿ: ನಿರಂತರ ಮಳೆಯಿಂದಾಗಿ ತಾಲೂಕಿನ ಹಲವೆಡೆ ಭತ್ತದ ಬೆಳೆ ನೆಲಕಚ್ಚಿದ್ದು, ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ.

    ಕೊರ್ಲಹಳ್ಳಿ, ಗಂಗಾಪುರ, ಶಿಂಗಟಾಲೂರ, ಹಮ್ಮಿಗಿ, ಬಿದರಳ್ಳಿ, ವಿಠಲಾಪುರ ಇನ್ನಿತರ ಗ್ರಾಮಗಳು ಸೇರಿ ಒಟ್ಟು 2,384 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಒಂದು ವಾರದಿಂದ ಸತತವಾಗಿ ಸುಯುತ್ತಿರುವ ಮಳೆಯಿಂದಾಗಿ 500 ಹೆಕ್ಟೇರ್​ಗೂ ಹೆಚ್ಚು ಪ್ರದೇಶದಲ್ಲಿ ಭತ್ತದ ಬೆಳೆ ನೆಲಕ್ಕೆ ಹಾಸಿಕೊಂಡು ಹಾನಿಗೀಡಾಗಿದೆ.

    ಈಗಾಗಲೇ ಭತ್ತದ ಬೆಳೆ ಕಟಾವಿನ ಹಂತಕ್ಕೆ ಬಂದಿದೆ. ಇನ್ನೇನು ಕಟಾವು ಮಾಡಬೇಕು ಎಂದುಕೊಂಡಾಗಲೇ ನಿರಂತರ ಮಳೆ ಸುರಿದು ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಭತ್ತದ ಕಾಳುಗಳು ನೆಲಕ್ಕೆ ಬಿದ್ದಿವೆ. ನೆಲಕ್ಕೆ ಬಿದ್ದಿರುವ ಕಾಳುಗಳು ಸಸಿಯೊಡೆಯುವುದು ಮತ್ತು ಜೊಳ್ಳಾಗುವ ಸಾಧ್ಯತೆಯಿದೆ ಎನ್ನುತ್ತಾರೆ ರೈತರು.

    ಕಟಾವಿಗೆ ಬಂದಿದ್ದ ಭತ್ತದ ಬೆಳೆ ಮಳೆಯಿಂದ ಹಾನಿಯಾಗಿದೆ. ಬೆಳೆ ಹಾನಿಗೀಡಾದ ರೈತರಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಪರಿಹಾರ ನೀಡುವ ಕೆಲಸಕ್ಕೆ ಮುಂದಾಗಬೇಕು.

    | ಸುರೇಶರೆಡ್ಡಿ ಬಾಲೆಹೊಸೂರ, ವಿರೂಪಾಕ್ಷಗೌಡ ಪಾಟೀಲ, ಇತರ ರೈತರು

    ಈಗಾಗಲೇ ಭತ್ತದ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಲಾಗಿದೆ. ಬೆಳೆ ಹಾನಿಯಾಗಿರುವ ಬಗ್ಗೆ ಸರ್ವೆ ಕಾರ್ಯ ಮಾಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

    | ಪ್ರಮೋದ ತುಂಬಳ ಸಹಾಯಕ ಕೃಷಿ ನಿರ್ದೇಶಕ, ಮುಂಡರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts