More

    ಕಂದಾಯ ಗ್ರಂಥಾಲಯ ಪುನರಾರಂಭ

    ಮದ್ದೂರು: ದಾನಿಗಳು ಹಾಗೂ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರ ವಿಶೇಷ ಪ್ರಯತ್ನದಿಂದ ಕಂದಾಯ ಗ್ರಂಥಾಲಯವನ್ನು ಪುನರಾರಂಭಿಸಿದ್ದು ಇದರ ಸದುಪಯೋಗವನ್ನು ಯುವಕರು, ಓದುಗರು ಬಳಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಹೇಳಿದರು.

    ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಕಂದಾಯ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮದ್ದೂರು ತಾಲೂಕಿನಲ್ಲಿ ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ 2013ರಲ್ಲಿ ಕಂದಾಯ ಇಲಾಖೆ ವತಿಯಿಂದ, ದಾನಿಗಳ ಮತ್ತು ಸಿಬ್ಬಂದಿಯ ಸಹಕಾರದಿಂದ ತಾಲೂಕು ಕಚೇರಿಯಲ್ಲಿ ಗ್ರಂಥಾಲಯವನ್ನು ಪ್ರಾರಂಭ ಮಾಡಲಾಗಿತ್ತು. ಮಧ್ಯದಲ್ಲಿ ಸ್ವಲ್ಪ ಕಾಲ ಇದರ ಬಳಕೆ ಕಡಿಮೆಯಾಗಿದ್ದು. ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮತ್ತು ಸಿಬ್ಬಂದಿ ಸಹಕಾರದಿಂದ ಮತ್ತೆ ಪ್ರಾರಂಭವಾಗಿರುವುದು ಬಹಳ ಹರ್ಷ ತಂದಿದೆ. ಈಗ ಸ್ವಲ್ಪ ಪುಸ್ತಕಗಳಿದ್ದು ಸಾಹಿತ್ಯ, ಕಥೆ, ಕವನ, ಪುಸ್ತಕಗಳು, ಕಂದಾಯ ಇಲಾಖೆಗೆ ಸಂಬಂಧಪಟ್ಟ ಪುಸ್ತಕಗಳು, ಕಾನೂನು ಪುಸ್ತಕಗಳು ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ಮುಂದಿನ ದಿನಗಳಲ್ಲಿ ಸಂಗ್ರಹಿಸಿ ಕೊಡಲಾಗುವುದು ಎಂದರು.

    ಗ್ರಂಥಾಲಯವನ್ನು ಸಾರ್ವಜನಿಕರು ತಮ್ಮ ಬಿಡುವಿನ ಸಮಯದಲ್ಲಿ ಕಚೇರಿ ಕೆಲಸಕ್ಕೆ ಬಂದಾಗ ಬೇರೆ ಕಡೆ ಕುಳಿತು ಸಮಯ ಕಳೆಯುವ ಬದಲು ಇಲ್ಲಿಗೆ ಬಂದು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಗ್ರೇಡ್-2 ತಹಸೀಲ್ದಾರ್ ಸೋಮಶೇಖರ್, ಕಂದಾಯ ಅಧಿಕಾರಿ ಜಗದೀಶ್, ಜನ ಸುರಕ್ಷಾ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್, ಶಿಕ್ಷಕರಾದ ಆನಂದ್, ಕೆ.ಟಿ.ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts